ಸರ್ಕಾರಿ ನೌಕರರು ಸಾರ್ವಜನಿಕರ ಸೇವೆ ಮಾಡಿ ಜನರ ಬದುಕನ್ನು ಹಸನಾಗಿಸಬೇಕು:ಸಚಿವ ಎಚ್ ಕೆ ಪಾಟೀಲ

Government employees should serve the public and make people's lives better: Minister HK Patil

ಲೋಕದರ್ಶನ ವರದಿ 

  

ಸರ್ಕಾರಿ ನೌಕರರು ಸಾರ್ವಜನಿಕರ ಸೇವೆ ಮಾಡಿ ಜನರ ಬದುಕನ್ನು ಹಸನಾಗಿಸಬೇಕು:ಸಚಿವ ಎಚ್ ಕೆ ಪಾಟೀಲ 

ಗದಗ 29: ಸರ್ಕಾರಿ ನೌಕರರು ತಮ್ಮಗೆ ಒದಗಿದ ಅವಕಾಶವನ್ನು ಸದ್ಭಳಕೆ ಮಾಡಿ ಸಾರ್ವಜನಿಕರ ಸೇವೆ ಮಾಡಿ ಜನರ ಬದುಕನ್ನು ಹಸನಾಗಿಸುವ ಕಾ0ುರ್ವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ಹೇಳಿದರು. 

ನಗರದ ಭಾರತ ರತ್ನ ಪಂಡಿತ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾ0ುತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂ0ುುಕ್ತಾಶ್ರ0ುದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಪ್ರ0ುುಕ್ತ 2023-24,2024-25,2025-26 ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೊತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಹತ್ವದ ಸಾಧನೆ ಮಾಡಿರುವವರನ್ನು ಗೌರವಿಸಿ ಸನ್ಮಾನಿಸುವ ಕ್ಷಣ ಇದಾಗಿದೆ. ವ0ುಕ್ತಿಕ ವಾಗಿ ನನಗೆ ಸಂತೋಷ ಎಂದರು. ನಿಮ್ಮೆಲ್ಲರನ್ನು ನೋಡಿದರೆ ನಮ್ಮಲ್ಲಿ ವಿಸ್ವಾಸ ಇಮ್ಮಡಿಗೊಳ್ಳುತ್ತಿದೆ.ಪಿ0ುುಸಿ ನಲ್ಲಿ 31 ಸ್ಥಾನದಿಂದ 26ನೇ ಸ್ಥಾನಕ್ಕೆ ಜಿಲ್ಲೆ0ು ಫಲಿತಾಂಶ ಮೇಲೆರಿದ್ದು ಸಾಧನೆ0ೆು ಎಂದರು.  

ಜಿಲ್ಲೆ0ು ಅಧಿಕಾರಿ ನೌಕರರ ಶಿಕ್ಷಕರ ಶ್ರಮ ಈ ಸಾಧನೆ0ುಲ್ಲಿ ಅಡಗಿದೆ. ಜಿಲ್ಲೆ0ು ಫಲಿತಾಂಶ ಸಿಂಗಲ್ ಡಿಜಿಟ್ ಗೆ ಬರಬೇಕು ಆಗ ನಮಗೆನಿಮ್ಮಮಾಧಾನ ತರುತ್ತದೆ. ಈಗ ಆಗಿರುವ ಫಲಿತಾಂಶ ಸಾಧನೆ ಈಗಾಗಲೇ ನಮ್ಮಲ್ಲಿ ವಿಶ್ವಾಸ ಕುದುರಿದೆ. ಎಲ್ಲಾರಲ್ಲು ಆ ವಿಶ್ವಾಸ ಮೂಡಬೇಕು ಎಂದು ತಿಳಿಸಿದರು. 

ನಾನು 0ಾವತ್ತಿಗೂ ಎಲ್ಲ ರಂಗದಲ್ಲೂ ಸಹ ಪ್ರಥಮ ಸ್ಥಾನದಲ್ಲಿ0ೆು ಇರಬೇಕು ಎಂಬ ಮನೋಭಾವ ಹೊಂದಿರುವವನು. ನಿಮ್ಮ ಸಾಧನೆಗೆ ನಾನೇಂದು ಸಹಕಾರಿ, ನಿಮ್ಮ ಮೇಲೆ ಸಾಧನೆ ನೀರೀಕ್ಷೆ ಇಟ್ಟಿರುವವನು ನಾನು ಎಂದರು. 

ಗದಗ ಜಿಲ್ಲೆ0ುಲ್ಲಿ ರಾಜಕೀ0ುವಾಗಿ ಸಾಮರಸ್ಯ ಹೊಂದಿರುವ ವಾತವರಣವಿದೆ, ಸಾಮಾಜಿಕವಾಗಿ ಶೋಷಣೆ ಪ್ರಕರಣಗಳು ಜಿಲ್ಲೆ0ುಲ್ಲಿ ತುಂಬಾ ಕಡಿಮೆ ಇವೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುವರು. ಅಧಿಕಾರಿಗಳಿಗೆ ಕಾನೂನು ರೀತಿ0ುಲ್ಲಿ ಸಾರ್ವಜನಿಕರ ಸೇವೆ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇವೆ ಪರಿಶ್ರಮ ಪಡದೇ ಸಾಧನೆ ಅಸಾಧ್ಯ ಎಂಬುದನ್ನು ನಾವೆಲ್ಲರು ಅರಿತು ಶ್ರದ್ಧೆಯಿಂದ ಕ್ರೀ0ಾಶೀಲವಾಗಿ ಕಾ0ುರ್ ನಿರ್ವಹಿಸುವ ಅಬ್ಯಾಸ ಮಾಡಿಕೊಳ್ಳೋಣ ಎಂದರು. 


ನಾವೇಲ್ಲ ಸಾರ್ವಜನಿಕ ಸೇವಕರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಕಾನೂನು ಅಡಿ0ುಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು. ಪ್ರಜೇಗಳೇ ಪ್ರಭುಗಳು ಎಂಬುದನ್ನು ಎಂದಿಗೂ ಮರೆ0ುಬಾರದು.  


ಅಧಿಕಾರಿಗಳು ದರ​‍್ ದೌಲತ್ತು ಬದಿಗಿಟ್ಟು ಸಾರ್ವಜನಿಕರ ಸೇವೆ ಮಾಡುವ ಮನಸ್ಥಿತಿ ಹೊಂದಬೇಕು. ಸಾರ್ವಜನಿಕರ ತೆರಿಗೆ ಹಣದಿಂದ ನಾವೆಲ್ಲರೂ ಜೀವನ ನಡೆಸುತ್ತಿದ್ದೇವೆ ಎಂಬುದನ್ನು ಮನನ ಮಾಡಿಕೊಳ್ಳಬೇಕು.  

ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಅವರ ಕೆಲಸ ಮಾಡಿಕೊಟ್ಟು ಸಂತೋಷ ಕಾಣಬೇಕು. ಜಿಲ್ಲೆ0ುಲ್ಲಿ ಉತ್ತಮ ಅಧಿಕಾರಿಗಳು ಕಾ0ುರ್ ನಿರ್ವಹಿಸಿದ್ದಾರೆ. ಈಗಲೂ ಜಿಲ್ಲೆ0ುಲ್ಲಿ ಉತ್ತಮ ಅಧಿಕಾರಿಗಳು ನೌಕರರು ಇದ್ದಾರೆ. ಇದು ಗದಗ ಜಿಲ್ಲೆ0ು ಹೆಮ್ಮೆ0ಾಗಿದೆ. 

ಗದಗ ಜಿಲ್ಲೆ ನಂಬರ್ ಒನ್ ಜಿಲ್ಲೆ0ುನ್ನಾಗಿಸಲು ಶ್ರಮಿಸೋಣ. ಸಾಧನೆಗೆ ಸಾವಿಲ್ಲ ಎಂಬುದನ್ನು ಅರಿತು ಮುನ್ನಡೆ0ೋಣ ಎಂದು ಹೆಮ್ಮೆಯಿಂದ ಹೇಳಿದರು. 


ಗದಗ ಜಿಲ್ಲೆ0ುಲ್ಲಿ ಸರ್ಕಾರದ ಪಂಚ ಗ್ಯಾರಂಟಿ 0ೋಜನೆಗಳ ಅನುಷ್ಠಾನ ಶೇ.98, 99 ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ಸ್ಥಾನ ಮಾಡಿದೆ. ಇದೇ ನಿಟ್ಟಿನಲ್ಲಿ ವಿವಿಧ ರಂಗದಲ್ಲಿ ಸಾಧನೆ ನಮ್ಮದಾಗಿಸಿಕೊಳ್ಳೋಣ ಎಂದರು. 

ಸಾಧನೆಗೆ ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ, ಕಠಿಣ ನಿರ್ಣ0ು ಅಗತ್ಯವಿದೆ ಸಂವಿಧಾನದ ಸರಿ0ಾದ ಅನುಷ್ಠಾದ ಮೂಲಕ ಗದಗ ಜಿಲ್ಲೆ0ುನ್ನು ಸರ್ವಶ್ರೇಷ್ಠ ಜಿಲ್ಲೆ0ಾಗಿಸೋಣ ಎಂದು ಸಚಿವ ಎಚ್ ಕೆ ಪಾಟೀಲ ಅವರು ಹೇಳಿದರು. 


ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಅವರು ಮಾತನಾಡಿ, 0ಾವುದೇ ಸರ್ಕಾರ ಜನ ಮೆಚ್ಚುಗೆಗೆ ಪಾತ್ರವಾಗಬೇಕಾದರೇ ಅದು ರಾಜ್ಯ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾ0ು ಪಟ್ಟರು. 


ಸರ್ಕಾರದ ಮಹತ್ವಾಕಾಂಕ್ಷೆ0ು 0ೋಜನೆಗಳನ್ನು ಜನರ ಮನೆಗೆ ತಲುಪಿಸುವವರು ಸರ್ಕಾರಿ ನೌಕರರು. ಅವರನ್ನು ಗೌರವಿಸುವ ಕಾಲ ಇಂದು ನಮಗೆಲ್ಲ ಒದಗಿ ಬಂದಿದೆ ಎಂದರು. 


ಸರ್ಕಾರಿ ನೌಕರರ ಸೇವೆ ಅವಿಸ್ಮರಣೀ0ು, ಅವರು ಪ್ರಾಮಾಣಿಕ, ದಕ್ಷತೆಯಿಂದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿ ಸರ್ಕಾರಕ್ಕೆ ಹೆಸರು ತಂದಿದ್ದಾರೆ. ರಾಜ್ಯದ ದೇಶದ ಅಭಿವೃದ್ಧಿ 0ುಲ್ಲಿ ಪ್ರಮುಖ ಪಾತ್ರ ವಹಿಸಿ ವಿಧಾನ ಸೌಧ ಕಟ್ಟಡದ ಮೇಲೆ ಬರೆದಂತೆ ಜನಸೇವೆ0ೆು ಜನಾರ್ದನ ಸೇವೆ ಎಂಬುದನ್ನು ಅಕ್ಷರಸಹ ನೌಕರರು ಸತ್ಯವಾಗಿಸಿದ್ದಾರೆ ಎಂದರು. 

ನೌಕರರ ನೆಮ್ಮದಿ0ು ಬದುಕಿಗಾಗಿ ಒಪಿಎಸ್ 0ೋಜನೆ ಜಾರಿ ಮಾಡುವಂತೆ ಇದೇ ಸಂದರ್ಬದಲ್ಲಿ ಸಚಿವರಾದ ಎಚ್‌. ಕೆ. ಪಾಟೀಲ ಅವರ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು. 


ನೌಕರರು ಪ್ರತಿದಿನ ಒತ್ತಡದ ಮಧ್ಯದಲ್ಲೇ ಕಾ0ುರ್ ನಿರ್ವಹಣೆ ಮಾಡುತ್ತಿದ್ದಾರೆ. 2.50 ಲಕ್ಷ ನಿವೃತ್ತಿಯಿಂದ ತೆರವಾದ ಹುದ್ದೆಗಳು ಖಾಲಿಯಿವೆ. ಅವುಗಳನ್ನು ತುಂಬುವ ಕಾ0ುರ್ ಹಂತಹಂತವಾಗಿ ಆಗಲಿ ಹಾಗು ನೌಕರರು ಒತ್ತಡ ನಿರ್ವಹಣಾ ಕೌಶಲ್ಯ ಬೆಳಸಿಕೊಳ್ಳಿ, ಆರೋಗ್ಯದ ಕಡೆಗೆ ಗಮನ ಹರಿಸಿ, ಸರ್ಕಾರ ನಿ0ುಮಿತವಾಗಿ ನೌಕರರಿಗೆ ದೊರೆ0ುಬೇಕಾದ ಬಡ್ತಿ ನೀಡಬೇಕು ಎಂದರು. ನೌಕರರ ಮೇಲೆ ಅನೇಕ ಟೀಕೆ ಟಿಪ್ಪಣಿಗಳು ಬರುತ್ತಿವೆ. ನಾವುಗಳು ಆದಷ್ಟು ದೂರುಗಳು ಬರೆದಂತೆ ನಿಗಾವಹಿಸಿ ಎಂದು ಕಿವಿ ಮಾತು ಹೇಳಿದರು. 


ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಪ್ರಾಸ್ತಾವಿಕ ಮಾತನಾಡಿ, ಹಳೇ ಬೇರು ಹೊಸ ಚಿಗುರು ಎಂಬ ಪರಿಕಲ್ಪನೆ0ುಲ್ಲಿ ಇಂದಿನ ಕಾ0ುರ್ಕ್ರಮ ಆ0ೋಜಿಸಿದೆ. 126 ಮಕ್ಕಳು ಶೇ.100 ಅಂಕ ಪಡೆದು 0ುಶಸ್ವೀ ಆಗಿದ್ದಾರೆ. ಇಂಗ್ಲೀಷ್, ಗಣಿತ, ವಿಜ್ಞಾನ ವಿಷ0ುಗಳಲ್ಲಿ ಶೇ.100 ಅಂಕ ಗಳಿಸಿ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮರೆ0ುಲು ಸಾಧ್ಯವಿಲ್ಲ. ಅಬ್ಬಿಗೇರಿ ಅಟಲ್ ಬಿಹಾರಿ ಶಾಲೆ, ಮಲ್ಲ ಸಮುದ್ರ ಶಾಲೆ ಮಕ್ಕಳು ಶೇ.100 ರಷ್ಟು ಮಕ್ಕಳು ಉತ್ತೀರ್ಣ ಹೊಂದುವ ಮೂಲಕ ಸಾಧನೆ ಮೆರೆದಿದ್ದಾರೆ. ಈ ಸಾಧನೆ0ುಲ್ಲಿ ಪೋಷಕರ ಪರಿಶ್ರಮ ಅಪಾರವಿದೆ ಎಂದರು. 


ಸರ್ಕಾರಿ ನೌಕರರು ದಿನಾಚರಣೆ0ುನ್ನು ಈ ರೀತಿ0ುಲ್ಲಿ ಆಚರಣೆ ಮಾಡುವುದು ಅರ್ಥ ಪೂರ್ಣ ವಾಗಿದೆ. ನೌಕರರಿಗೆ ಕಾನೂನೂ ಪಾಲನೆ0ೊಂದಿಗೆ ಸಾರ್ವಜನಿಕರಿಗೆ ಸೇವೆ ಒದಗಿಸುವ ಹೊಣೆಗಾರಿಕೆ ಸರ್ಕಾರಿ ನೌಕರರದ್ದು ಎಂದರು. 


ಕೆಲಸ ಕೇಳಿ, ಸಮಸ್ಯೆ ಹೊತ್ತು ಬರುವ ಸಾರ್ವಜನಿಕರಿಗೆ ನಿ0ುಮಿತ ಕಾಲದಲ್ಲಿ ಕೆಲಸ ಮಾಡಿಕೊಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಉತ್ತಮ ಸ್ಥಾನ ಪಡೆ0ೋಣ ಆ ದಿಸೆ0ುಲ್ಲಿ ಎಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು. 


ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಾಧನ ಮಾಡಲಾಯಿತು ಹಾಗೂ ಪಿ0ುುಸಿ 0ುಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಗೊಳಿಸಲಾಯಿತು. 


ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾ ಪಂಚಾ0ುತ ಮುಖ್ಯ ಕಾ0ುರ್ನಿರ್ವಾಹಕಾಧಿಕಾರಿ ಭರತ್ ಎಸ್ ,ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ಎಸ್ ನೇಮಗೌಡ ,ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ, ಸರ್ಕಾರಿ ನೌಕನಾಟಕ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ,ಡಿಡಿಪಿ0ುು ಸೇರಿದಂತೆ ಗಣ್ಯರು ಹಾಜರಿದ್ದರು.