ನವದೆಹಲಿ,
ಮಾರ್ಚ್ 27, ಕೋವಿಡ್ -9 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು
ಅತ್ಯಂತ ಅನುಕೂಲಕರ ಮತ್ತು ಸುರಕ್ಷಿತ ರೀತಿಯಲ್ಲಿ ಜನರನ್ನು ತಲುಪುವಂತೆ ಮಾಡಲು ಸರ್ಕಾರ
ಬದ್ಧವಾಗಿದೆ ಎಂದು ಉದ್ಯಮ ಮುಖಂಡರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್
ಅವರು ಭರವಸೆ ನೀಡಿದ್ದಾರೆ.ಕೊವಿದ್-19 ಲಾಕ್‌ಡೌನ್‌ನಿಂದಾಗಿ ಉದ್ಯಮಗಳು
ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸುವ ಕ್ರಮಗಳ ಕುರಿತು
ಚರ್ಚಿಸಲು ಗೋಯಲ್ ಗುರುವಾರ ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮದ
ಭಾಗೀದಾರರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದರು.
ಸಭೆಯಲ್ಲಿ ಸ್ನ್ಯಾಪ್‌ಡೀಲ್ಸ್,
ಶಾಪ್‌ಕ್ಲೂಸ್, ಫ್ಲಿಪ್‌ಕಾರ್ಟ್, ಗ್ರೋಫರ್ಸ್, ನೆಟ್‌ಮೆಡ್ಸ್, ಫಾರ್ಮ್‌ಈಸಿ, 1 ಎಂಜಿ
ಟೆಕ್, ಉಡಾನ್, ಅಮೆಜಾನ್ ಇಂಡಿಯಾ, ಬಿಗ್ ಬ್ಯಾಸ್ಕೆಟ್, ಜೊಮೊಟೊ ಸೇರಿದಂತೆ ಇ-ಕಾಮರ್ಸ್
ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ.ಬೃಹತ್
ಚಿಲ್ಲರೆ ವ್ಯಾಪಾರ ಸಂಸ್ಥೆಗಳಾದ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ವಾಲ್‌ಮಾರ್ಟ್,
ಆರ್‌ಪಿಜಿ, ಲಾಜಿಸ್ಟಿಕ್ ಕಂಪೆನಿಗಳಾದ ಎಕ್ಸ್‌ಪ್ರೆಸ್ ಇಂಡಸ್ಟ್ರಿ ಕೌನ್ಸಿಲ್,
ಡೆಲಿವರಿ, ಸೇಫ್‍ಎಕ್ಸ್‍ಪ್ರೆಸ್, ಪೇಟಿಎಂ, ಸ್ವಿಗ್ಗಿ ಲಾಜಿಸ್ಟಿಕ್ಸ್ ಸಭೆಯಲ್ಲಿ
ಪ್ರತಿನಿಧಿಸಿದ್ದವು. ಅಗತ್ಯ ವಸ್ತುಗಳ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳುವಂತಾಗಲು
ವಿವಿಧ ಸೌಲಭ್ಯಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು
ಡಿಪಿಐಐಟಿ ನಿರಂತರವಾಗಿ ಚಿಲ್ಲರೆ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಕಂಪನಿಗಳೊಂದಿಗೆ
ತೊಡಗಿಸಿಕೊಂಡಿದೆ.
ಆಂತರಿಕ ವಾಣಿಜ್ಯ ಮತ್ತು ಉದ್ಯಮ ಉತ್ತೇಜನಾ ಇಲಾಖೆ(ಡಿಪಿಐಐಟಿ)ಯ
ಪ್ರಯತ್ನಗಳ ಫಲವಾಗಿ, ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಹೇಗೆ
ನಿರ್ವಹಿಸಬೇಕು ಎಂಬುದರ ಕುರಿತು ರಾಜ್ಯ ಸರ್ಕಾರದ ಮಾರ್ಗದರ್ಶನಕ್ಕೆ ಕೇಂದ್ರ ಗೃಹ
ಸಚಿವಾಲಯ ಪ್ರಮಾಣಿಕೃತ ಕಾರ್ಯಾಚರಣೆ ವಿಧಾನವನ್ನು ಹೊರಡಿಸಿದೆ.
ಸರಕುಗಳ ಸಾಗಣೆ
ಮತ್ತು ವಿತರಣೆಯ ಸದ್ಯದ ಸ್ಥಿತಿ, ಉತ್ಪಾದನೆ, ಅಗತ್ಯ ವಸ್ತುಗಳನ್ನು ಸಾಮಾನ್ಯ ಜನರಿಗೆ
ತಲುಪಿಸುವುದು ಮತ್ತು ಲಾಕ್‌ಡೌನ್ ಅವಧಿಯಲ್ಲಿ ವಿವಿಧ ಭಾಗೀದಾರರು ಎದುರಿಸುತ್ತಿರುವ
ತೊಂದರೆಗಳನ್ನು ಸೂಕ್ತ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಇಲಾಖೆ ನಿಯಂತ್ರಣ ಕೊಠಡಿಯನ್ನು
ಸ್ಥಾಪಿಸಿದೆ.ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಿಧ ಕೆಲಸಗಳನ್ನು ಪೂರ್ಣಗೊಳಿಸಲು,
ಪ್ರತ್ಯುತ್ತರಗಳನ್ನು ಸಲ್ಲಿಸಲು, ಶುಲ್ಕ ಪಾವತಿಸಲು ಭಾರತೀಯ ಹಕ್ಕುಸ್ವಾಮ್ಯ ಕಚೇರಿ
ದಿನಾಂಕವನ್ನು ವಿಸ್ತರಿಸಿದೆ.