ಸರ್ಕಾರದ ಬಸ್ ಪ್ರಯಾಣ ದರ ಏರಿಕೆ ಆವೈಜ್ಞಾನಿಕ : ನಿರ್ಧಾರ ಕೈ ಬಿಡಬೇಕು ಎಬಿವಿಪಿ ಆಗ್ರಹ

Government bus fare hike is scientific: ABVP demands that the decision should be left in hand

ಸರ್ಕಾರದ ಬಸ್ ಪ್ರಯಾಣ ದರ ಏರಿಕೆ ಆವೈಜ್ಞಾನಿಕ : ನಿರ್ಧಾರ ಕೈ ಬಿಡಬೇಕು ಎಬಿವಿಪಿ ಆಗ್ರಹ

ರಾಣೆಬೆನ್ನೂರು 06:ಸರ್ಕಾರ ಬಸ್ ಪ್ರಯಾಣದರವನ್ನು ಏರಿಸಲು ಹೊರಟಿರುವ ಕ್ರಮವನ್ನು ಖಂಡಿಸಿರುವ ಎಬಿಪಿ ಕಾರ್ಯಕರ್ತರು ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಿ ಸೋಮವಾರ ನಗರದಲ್ಲಿ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.    

   ಜನ ವಿರೋಧಿ ನೀತಿ ಅನುಸರಿಸುವ, ಮತ್ತುಸಾರ್ವತ್ರಿಕ ಅಭಿಪ್ರಾಯ ಏಕ ನಿರ್ಧಾರದಲ್ಲಿ ಶೇ, 15/ಅರಷ್ಟು ಪ್ರಯಾಣದರ ಏರಿಸಲು ಹೊರಟಿರುವ ಕ್ರಮವನ್ನು ಖಂಡಿಸಿದ ವಿದ್ಯಾರ್ಥಿಗಳು. ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಸಹಕಾರದರ್ಶಿ ಅಭಿಷೇಕ್ ದೊಡ್ಮನಿ ಅವರು, ಬಸ್ ದರವನ್ನು ಹೆಚ್ಚಳದಿಂದಾಗಿ  ಬಡ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರ ಮೇಲೆ ಭಾರ ಹೇರಿ ದಂತಾಗುತ್ತದೆ.  ಸರ್ಕಾರಿ ಬಸ್ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಮೊದಲೇ ಜೀವನ ನಡೆಸುವುದೇ ಕಷ್ಟವಾಗಿರುವಾಗ ಬೆಲೆ ಏರಿಕೆ ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಎಂದು ಮನವರಿಸಿದರು.ಶಕ್ತಿ ಯೋಜನೆಯಿಂದಾಗಿ ದಿನನಿತ್ಯ ಬಸ್ಥಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನದಲ್ಲಿದೆ ಧರ ಹೆಚ್ಚಳದ ಬದಲಾಗಿ ಮತ್ತಷ್ಟು ವಾಹನಗಳ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯವಿರುವ ಈ ಸಂದರ್ಭದಲ್ಲಿ ದರ ಏರಿಕೆ ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.  ದಿನನಿತ್ಯ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅಧಿಕ  ತೊಂದರೆ ಉಂಟಾಗಿದೆ. ಅಲ್ಲದೆ  ಶಾಲಾ-ಕಾಲೇಜಿಗೆ ಹೋಗುವ ಸಮಯದಲ್ಲಿ ಬಸ್ಸುಗಳಲ್ಲಿ ಸ್ಥಳಾವಕಾಶ ಇಲ್ಲದೇ, ಬಸ್ಸುಗಳು ನಿಲ್ಲಿಸದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ  ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದರು.    

ಪ್ರತಿಭಟನೆ ಮುಂಚೂಣಿಯಲ್ಲಿ  ರಾಜ್ಯ  ಕಾರ್ಯಕಾರಿಣಿ   ಸದಸ್ಯ  ಅಭಿಲಾಶ್ ಬಾದಾಮಿ,  ನಗರ  ಕಾರ್ಯದರ್ಶಿ ಪವನ್ ಕುಮಾರ್ ಇಟಗಿ, ನಗರ ಸಹ ಕಾರ್ಯದರ್ಶಿ  ಎಲ್ಲಮ್ಮ ಎಂ.ವಿದ್ಯಾರ್ಥಿನಿ ಪ್ರಮುಖೆ ಸವಿತಾ, ಎಬಿವಿಪಿ  ಕಾರ್ಯಕರ್ತರಾದ, ವೈಷ್ಣವಿ, ಶ್ರುತಿ ಎಂ,  ನಂದೀಶ್ ಪೂಜಾರಿ,  ನವೀನ್ ಜಿ.ಕೆ. ಬಸವರಾಜ್, ಭರತ್ ಕುಮಾರ್, ಆಕಾಶ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳುಕಾರ್ಯಕರ್ತರು ಪಾಲ್ಗೊಂಡಿದ್ದರು.