ಹರಪನಹಳ್ಳಿ,ಮೇ 15 : ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಕಾಮರ್ಿಕರಿಗೆ, ರೈತರಿಗೆ, ಅಥರ್ಿಕವಾಗಿ ಹಿಂದುಳಿದವರಿಗೆ ಕೇಂದ್ರ ಸಕರ್ಾರ ಘೋಷಿಸಿರುವ 20 ಲಕ್ಷ ಕೋಟಿ ಕನ್ನಡಿಯೊಳಗಿನ ಗಂಟ್ಟಾಗಿದೆ ಸರಿಯಾದ ಮಾರ್ಗಸೂಚಿ ಇಲ್ಲದೇ ಪರಿಹಾರ ಪಡೆಯಲು ಹರಸಾಹಸ ಪಡಬೇಕಾಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ದೂರಿದರು.
ಪಟ್ಟಣದ ಅವರ ನಿವಾಸದಲ್ಲಿ ಟಾಸ್ಕ್ ಪೋಸರ್್ ಸಮಿತಿ ಹಮ್ಮಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ವರದಿಗಾರರನ್ನು ಸನ್ಮಾನಿಸಿ ಸಿಹಿ ಹಂಚಿ ದಿನಸಿ ಕಿಟ್, ಸ್ಯಾನಿಟರೈಸರ್, ಮಾಸ್ಕ್ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಕರ್ಾರ ಚಾಲಕರಿಗೆ, ಮಡಿವಾಳರಿಗೆ, ಸವಿತಾ ಸಮಾಜದವರಿಗೆ ಹಾಗೂ ಇನ್ನೂ ಮುಂತಾದವರಿಗೆ ನೀಡಿರುವ ಸಹಾಯಧನಕ್ಕೆ ಸಂಬಧಿಸಿದ ಇಲಾಖೆಯಲ್ಲಿ ನೊಂದಣಿ ಮಾಡಿದವರಿಗೆ ಮಾತ್ರ ಎಂದು ನಿರ್ಬಂಧ ಮಾಡಿರುವುದನ್ನು ಸಡಿಲಗೊಳಿಸಬೇಕು ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸಕರ್ಾರದ ನಿಧರ್ಾರವನ್ನು ನಾನು ವಿರೋಧಿಸುತ್ತೇನೆ. ಬಹುರಾಷ್ಟೀಯ ಕಂಪನಿಗಳ ಒತ್ತಡಕ್ಕೆ ಮಣಿದು ಸಕರ್ಾರ ಈ ನಿಧರ್ಾರ ಕೈಗೊಂಡಿದೆ ಎಂದು ದೂರಿದರು. ಕಾಂಗ್ರೆಸ್ ಪಕ್ಷದ ಆಡಳಿತವಿದ್ದಾಗ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿತ್ತು, ಆದರೆ ಈಗಿನ ಬಿಜೆಪಿ ಸಕರ್ಾರ ಖರೀದಿ ಕೇಂದ್ರ ತೆರೆಯಲು ಮೀನಮೇಷ ಎಣಿಸುತ್ತಿದೆ ಎಂದರು.
ಆಶಾ ಕಾರ್ಯಕತರ್ೆಯರ ಗೌರವಧನ ರೂ.10.000 ಸಾವಿರಕ್ಕೆ ಏರಿಕೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು. ಜಿ.ಪಂ ಸದಸ್ಯ ಎಚ್.ಬಿ.ಪರಶುರಾಮಪ್ಪ, ಪಿಕಾಡರ್್ ಬ್ಯಾಂಕ ಅಧ್ಯಕ್ಷ ಪೋಮ್ಯನಾಯ್ಕ, ಪುರಸಭೆ ಸದಸ್ಯ ದಾದಾಪೀರ, ಗ್ರಾ.ಪಂ ಅಧ್ಯಕ್ಷ ಪಿ.ಟಿ.ಭರತ್, ಸಮಿತಿ ಜಿಲ್ಲಾ ಸದಸ್ಯ ಶಶಿಧರ ಪೂಜಾರ, ಎಚ್.ಕೆ.ಹಾಲೇಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಕಮ್ಮತ್ತಹಳ್ಳಿ ಮಂಜುನಾಥ, ಎಂ.ರಾಜಶೇಖರ, ಜಂಬಣ್ಣ, ಎಂ.ಟಿ.ಬಸವನಗೌಡ, ಮತ್ತಿಹಳ್ಳಿ ಅಜ್ಜಣ್ಣ, ಶಿವಕುಮಾರಸ್ವಾಮಿ, ಶಿವಕುಮಾರನಾಯ್ಕ, ಬಸವರಾಜ, ಆರ್.ಪ್ರೇಮಕುಮಾರ, ಮರಿಯಪ್ಪ, ಅರುಣ ಪೂಜಾರ ಪ್ರವೀಣ, ರಿಯಾಜ್ ಅವರುಗಳಿದ್ದರು.