ಸರ್ಕಾರ ರಚನೆ ಸಂಬಂಧ ಎನ್ಸಿಪಿ ಶಾಸಕರ ಸಭೆ: ಷರತ್ತುಬದ್ಧ ಬೆಂಬಲ ನೀಡಲು ನಿರ್ದಾರ

ಮುಂಬೈ, ನ.11 :     ಶಿವಸೇನೆಯೊಂದಿಗೆ ಸರ್ಕಾರ ರಚಿಸುವ ಪ್ರಸ್ತಾಪದ ಬಗ್ಗೆ ಚರ್ಚಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಸೋಮವಾರ ಪಕ್ಷದ ಶಾಸಕರ ಸಭೆ ನಡೆಸಿತು. ಶಿವಸೇನೆಗೆ ಷರತ್ತುಬದ್ಧ ಬೆಂಬಲ ನೀಡಲು ಯೋಜನೆ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಶಿವಸೇನೆಯು  ಬಿಜೆಪಿಯೊಂದಿಗಿನ ಸಂಬಂಧವನ್ನು ಕಸಿದುಕೊಳ್ಳಬೇಕು, ಎನ್ಡಿಎ ಕೂಟದಿಂದ ಹೊರಬರಬೇಕು ಎಂಬ ಷರತ್ತು ಹಾಕಲಾಗಿದೆ ಎನ್ನಲಾಗಿದೆ. ಮಾತ್ರವಲ್ಲ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಬೇಕು ಎಂಬ ನಿಬಂಧನೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಕಾಂಗ್ರೆಸ್ನ ಉನ್ನತ ನಾಯಕರು ಕೂಡ ನವದೆಹಲಿಯಲ್ಲಿ ಸಭೆ ನಡೆಸುತ್ತಿದ್ದು, ಹೈಕಮಾಂಡ್ನಿಂದ ಒಪ್ಪಿಗೆ ದೊರೆತ ಬಳಿಕ ಸರ್ಕಾರ ರಚನೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.