ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ದಿನಾಚರಣೆ ಕಾರ್ಯಕ್ರಮ

Government Senior Primary School Science Day Programme

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ದಿನಾಚರಣೆ ಕಾರ್ಯಕ್ರಮ

ರಾಣೇಬೆನ್ನೂರು 28 : ರಾಮನ್ ಎಫೆಕ್ಟ್‌ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ ಸರ್ ಸಿ. ವಿ. ರಾಮನ್ ಅವರು ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಅವರ ಸಾಧನೆಯ  ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ. ಪಿ.ಶಿಡೇನೂರ ಹೇಳಿದರು. ಅವರು ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17ರಲ್ಲಿ ರಾಷ್ಟ್ರೀಯ ಆಯೋಜಿಸಿದ್ದ  ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.  ಶಾಲಾ  ಶಿಕ್ಷಕರಾದ ಪೂರ್ಣಿಮಾ ನೆಗಳೂರು ಮಠ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜ್ವಾಲಾಮುಖಿ ಸ್ಫೋಟ , ಶಾಖೋತ್ಪನ್ನದ ಪರಿಣಾಮದ ವಿವರಣೆ, ವಿದ್ಯುತ್ಕೋಶದ ಮೂಲಕ ವಿದ್ಯುತ್ ಪ್ರವಾಹ ,ಮುಂತಾದ ಪ್ರಾತ್ಯಕ್ಷಿಗಳನ್ನು ಪ್ರದರ್ಶಿಸಿದರು.ಹಾಗೂ ಮೆದುಳಿನ ಕುರಿತಾದ ಪರಿಚಯ, ದ್ಯುತಿ ಸಂಶ್ಲೇಷಣೆ ಕಾರ್ಯ, ಮುಂತಾದ ವಿವರಣೆಗಳನ್ನು ವಿದ್ಯಾರ್ಥಿಗಳು ಮಾಡಿದರು. ಶಿಕ್ಷಕರಾದ ಆರಿ​‍್ಬ. ಚಲವಾದಿ , ವನಜಾಕ್ಷಿ ಪಾಟೀಲ, ಪ್ರತಿಭಾ ಮೈಲಾರಕಳ್ಳಿ ಮಠ , ಕೆ. ಎಸ್‌. ಮ್ಯಾಗೇರಿ , ಶ್ವೇತಾ ಎಚ್,ವಿ , ಸೇರಿದಂತೆ ಇತರೆ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.