ಹಡಿನಬಾಳದ ಸರಕಾರಿ ಪ್ರೌಢಶಾಲೆಯ ಡಿ. 8 ಮತ್ತು 9 ರಂದು ಬೆಳ್ಳಿಹಬ್ಬದ ಸಂಭ್ರಮ ಆಚರಣೆ

ಲೋಕದರ್ಶನ ವರದಿ 

ಹೊನ್ನಾವರ, 01: 1994ರಲ್ಲಿ ಆರಂಭವಾಗಿ ಗುಣಾತ್ಮಕ ಶಿಕ್ಷಣವನ್ನು ನೀಡುತ್ತ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದ ಹಡಿನಬಾಳದ ಸರಕಾರಿ ಪ್ರೌಢಶಾಲೆಯು ಡಿಸೆಂಬರ 8 ಮತ್ತು 9 ರಂದು ಬೆಳ್ಳಿಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದೆ ಎಂದು ಬೆಳ್ಳಿ ಹಬ್ಬ ಸಂಭ್ರಮ ಆಚರಣೆ ಸಮಿತಿ ಅಧ್ಯಕ್ಷ ಹರಿಯಪ್ಪ ನಾಯ್ಕ ಹೇಳಿದರು.

ಪ್ರೌಢಶಾಲೆಯ ಸಭಾಭವನದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1994ರಂದು 13 ವಿದ್ಯಾಥರ್ಿಗಳಿಂದ ಪ್ರಾರಂಭವಾಗಿ ಇಂದು 226 ವಿದ್ಯಾಥರ್ಿಗಳು ಅಧ್ಯಯನ ಮಾಡುವ ಮಟ್ಟಿಗೆ ವಿಸ್ತಾರಗೊಂಡಿದೆ. ಆರಂಭದಲ್ಲಿ ಗ್ರಾಮ ಪಂಚಾಯತಿ ಕಟ್ಟಡದಲ್ಲಿ ಪ್ರಾರಂಭವಾಗಿ ಈಗ 11 ವಿಶಾಲ ಕೋಠಡಿಯನ್ನು ಒಳಗೊಂಡಿದ್ದು 1 ಎಕರೆ ಪ್ರದೇಶದಿಂದ ಕೂಡಿದೆ. ಭವ್ಯವಾದ ಕ್ರೀಡಾಂಗಣ, ಸಭಾಭವನ, ಪ್ರಯೋಗಾಲಯದಂತಹ ಸೌಲಭ್ಯಗಳನ್ನು ಹೊಂದುವ ಮೂಲಕ ಮಾದರಿ ಶಾಲೆಯಲ್ಲಿ ಒಂದಾಗಿದೆ. 25ನೇ ವರ್ಷದ ಆಚರಣೆಯ ಅಂಗವಾಗಿ ಡಿಸೆಂಬರ್ 8ರಂದು ಗಣಪತಿ ವೃತ, ಶಾಲೆಯ ಆವರಣದಲ್ಲಿ ಶಾರದಾ ಮೂತರ್ಿಗೆ ಹಳೇ ವಿದ್ಯಾಥರ್ಿ ಸಂಘದಿಂದ ಬೆಳ್ಳಿಕೀರಿಟ ಸಮರ್ಪಣೆ, ಪೂರ್ವ ವಿದ್ಯಾಥರ್ಿಗಳ ಮೋಜಿನ ಸ್ಪಧರ್ೆ, ಚಿತ್ರಕಲಾ ಪ್ರದರ್ಶನ, ಪುರಾತನ ಕಾಲದ ದಿನಬಳಕೆ ವಸ್ತು ಪ್ರದರ್ಶನ, ಸಂಜೆ  4 ಗಂಟೆಗೆ ಜಾನಪದ ತಂಡಗಳಿಂದ ಸಭಾ ವೇದಿಕೆಗೆ ಗಣ್ಯರ ಕರೆ ತರುವುದು 25 ವರ್ಷಗಳ ಮಾಹಿತಿ ಒಳಗೊಂಡ ಸ್ಮರಣ ಸಂಚಿಕೆ ಬೆಳ್ಳಿಚುಕ್ಕಿ ಅನಾವರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಗ್ರಾ. ಪಂ ಅಧ್ಯಕ್ಷ ಚಂದ್ರಹಾಸ ನಾಯ್ಕ ಮಾತನಾಡಿ ಹಡಿನಬಾಳ ಸರಕಾರಿ ಪ್ರೌಢಶಾಲೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾಥಿಗಳ ಮತ್ತು ಪೂರ್ವ ವಿದ್ಯಾಥರ್ಿಗಳ ಮನೊರಂಜನೆ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಕಲಾ ರೋಹಣ ಶಿವಮೊಗ್ಗಾ ಇವರಿಂದ `ಶ್ರೀ ಕೃಷ್ಣಾ ಸಂಧಾನ' ಎನ್ನುವ ಹಾಸ್ಯ ನಾಟಕ, ಎರಡನೇ ದಿನ ಕಲಾಶ್ರೀ ಯಕ್ಷಮಿತ್ರ ಮಂಡಳಿ ಇವರಿಂದ ರಾಜಾ ರುದ್ರಕೋಪ ಎನ್ನುವ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.ಮುಖ್ಯಾಧ್ಯಾಪಕ ಎಸ್.ಆರ್.ನಾಯ್ಕ ಮಾತನಾಡಿ ಪ್ರಸಕ್ತ ಶಾಲೆಯಲ್ಲಿ 296 ವಿದ್ಯಾಥಿಗಳು ಕಲಿಯುತ್ತಿದ್ದಾರೆ. 13 ಶಿಕ್ಷಕರಿದ್ದಾರೆ. 2010-11 ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಶಾಲೆ ಗಳಿಸಿತ್ತು. ಪ್ರತಿವರ್ಷ ಎಸ್.ಎಸ್.ಎಲ್.ಸಿಯಲ್ಲಿ ಪ್ರತಿಶತ 90ಕ್ಕಿಂತ ಹೆಚ್ಚು ಫಲಿತಾಂಶವನ್ನು ಗಳಿಸುತ್ತಿದೆ ಎಂದರು.

ಶಿಕ್ಷಕ ಆರ್.ಟಿ. ನಾಯ್ಕ ಮಾತನಾಡಿ ಪ್ರೌಢಶಾಲೆಯು ಜನಪ್ರತಿನಿಧಿಗಳ ಹಾಗೂ ಊರಿನ ಜನರ ಸಹಕಾರದಿಂದ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. 1994 ರಿಂದ 2018ರ ವರೆಗೆ ಎಸ್ಎಸ್ಎಲ್ಸಿ ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾಥರ್ಿಗಳಿಗೆ, ಎಸ್ಡಿಎಂಸಿ, ಗ್ರಾಪಂ ಅಧ್ಯಕ್ಷರಿಗೆ, ಜಿಪಂ, ತಾಪಂ ಸದಸ್ಯರುಗಳಿಗೆ ಹಾಗೂ ಸಾಧನೆಗೈದ ಎಲ್ಲ ವಿದ್ಯಾಥರ್ಿಗಳಿಗೆ ಮತ್ತು ಶಿಕ್ಷಕ ಬಳಗಕ್ಕೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಳ್ಳಿಹಬ್ಬ ಆಚರಣೆ ಸಮಿತಿಯ ಗೌರವಾಧ್ಯಕ್ಷ ರಮೇಶ ಪ್ರಭು, ಹನ್ಮಂತ ಪ್ರಭು, ವೆಂಕಟೇಶ ಪ್ರಭು, ವಿಎಸ್ಎಸ್ ಉಪಾಧ್ಯಕ್ಷ ಎಂ.ಜಿ.ಹೆಗಡೆ, ಶಿಕ್ಷಕರಾದ ಶಂಕರ ಕೂಸರ್ೆ, ಶಂಕರ ಹರಿಕಾಂತ, ಸಂತೋಷ ನಾಯ್ಕ, ಮೋಹನ ನಾಯ್ಕ, ವೆಂಕಟೇಶ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.