ಲೋಕದರ್ಶನ ವರದಿ
ಬೆಳಗಾವಿ 13: ಇಪ್ಪತ್ತು ವರ್ಷಗಳ ಹಿಂದೆಯೇ ನಾನು ಬೆಳಗಾವಿಗೆ ಆಗಮಿಸಿದ್ದೆ. ಆವಾಗ್ಯೆ ಇನ್ನೂ ಹರಟೆ ಚಾಲ್ತಿಯಲ್ಲಿ ಇರದ ಸಂದರ್ಭದಲ್ಲೇ ನನ್ನನ್ನು, ಡುಂಡಿರಾಜ, ಅನಂತ ಕಲ್ಲೋಳ ಮುಂತಾದವರನ್ನ ತಮ್ಮ ಮನೆಗೆ ಕರೆಯಿಸಿಕೊಂಡು. ಹರಟೆಗಳನ್ನ ಓದುವ ಕಾರ್ಯಕ್ರಮವನ್ನ ಪ್ರಾರಂಭಿಸಿದ ಪ್ರವರ್ತಕ ಗುಂಡೇನಟ್ಟಿ ಮಧುಕರ ಅಂತಾ ತುಂಬ ಅಭಿಮಾನದಿಂದ ಹೇಳಿಕೊಳ್ಳಲು ಇಚ್ಛೆ ಪಡ್ತಿನಿ. ಆದರಿಂದು ಹರಟೆ ಜನಪ್ರಿಯ ಮಾಧ್ಯಮವಾಗ್ತಿದೆ ಎಂಬುದಕ್ಕೆ ತುಂಬಿರುವ ಈ ಸಭಾಗೃಹವೇ ಸಾಕ್ಷಿ ಎಂದು ಪಾಪಾ ಪಾಂಡು ಖ್ಯಾತಿಯ, ನಗೆಬರಹಗಾರ ಎಂ. ಎಸ್. ನರಸಿಂಹಮೂತರ್ಿ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಸಂಘಟನೆಯವರು ಇದೇ ದಿ. 11 ಶನಿವಾರದಂದು ಸಾಯಂಕಾಲ 5 ಗಂಟೆಗೆ ಹಿಂದವಾಡಿಯ ಗೋಮಟೇಶ ವಿದ್ಯಾಪೀಠ ಹತ್ತಿರವಿರುವ ಆಯ್.ಎಂ.ಇ.ಆರ್. ಸಭಾಭವನದಲ್ಲಿ "ಮದುವೆ ಸುಖ ಜೀವನಕ್ಕೆ ಸಾಧವೆ?" ಎಂಬ ವಿಷಯ ಕುರಿತಂತೆ ಹರಟೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ. ಎಸ್ ನರಸಿಂಹಮೂತರ್ಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮಾತನಾಡುತ್ತ ನರಸಿಂಹಮೂತರ್ಿಯವರು ದೂರದರ್ಶನ ಹತ್ತು ಸಾವಿರ ಕಂತುಗಳನ್ನು ಪುರೈಸಿರುವ ಸಂದರ್ಭದಲ್ಲಿ ರಾಜ್ಯಪಾಲರಿಂದ ನನ್ನನ್ನು ಗೌರವಿಸಲಾಯಿತು. ಈ ಎಲ್ಲ ಕಂತುಗಳೂ ಜನರನ್ನು ರಂಜಿಸುವುದರೊಂದಿಗೆ ಸಮಾಜಕ್ಕೊಂದು ಒಳ್ಳೆಯ ಸಂದೇಶಗಳನ್ನು ನೀಡುವವೇ ಆಗಿದ್ದು. ರಕ್ತಪಾತ, ಹೆಣ, ಹೊಡೆದಾಟ ಮನಕೆರಳಿಸುವಂತಹ ದೃಶ್ಯ ಕಂಡು ಬರುವುದಿಲ್ಲ.ಒಳ್ಳೆಯ ವಿಚಾರಗಳನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣಲಾಗಿದೆ ಎಂದು ಹೇಳುತ್ತ ಹಲವಾರು ತಮ್ಮ ರಸಪ್ರಸಂಗಗಳನ್ನು ಹಂಚಿಕೊಂಡು ನಗೆಯಲೆ ಎಬ್ಬಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಆಯ್.ಎಂಇ.ಆರ್. ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್.ಎಸ್. ಮುತಾಲಿಕ ಮಾತನಾಡುತ್ತ ಇಂದಿನ ಯಾಂತ್ರಿಕೆ ಯುಗದಲ್ಲಿ ನಗೆಯನ್ನುವುದು ಜನರಿಂದ ದೂರವಾಗಿತ್ತಿದೆಯೇನೋ ಎಂದು ಅನ್ನಿಸುತ್ತಲಿದೆ. ದೂರದರ್ಶನ ನೋಡುವುದರಲ್ಲಿ ಇಲ್ಲಿವೇ ಮೊಬೈಲ್ ನೋಡುವುದರಲ್ಲಿ ನಿರತರಾಗಿರುತ್ತಾರೆ. ಇದನ್ನು ಬಿಟ್ಟು ದಿನಕ್ಕೆ ಒಂದು ಗಂಟೆಯಾದರೂ ಕುಟುಂಬದ ಎಲ್ಲ ಸದಸ್ಯರೂ ಕುಳಿತು ಹರಟೆಯನ್ನು ಹೊಡಯಬೇಕು. ಇಲ್ಲವೇ ಇಂಥ ಹರಟೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಕುಟುಂಬದಲ್ಲಿ ಸಾಮರಸ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಮದುವೆ ಸುಖಜೀವನಕ್ಕೆ ಸಾಧನವೆಂದು ಜಿ. ಎಸ್. ಸೋನಾರ, ಗುಂಡೇನಟ್ಟಿ ಮಧುಕರ, ಶ್ರೀಮತಿ ಶಾಂತಾ ಆಚಾರ್ಯ ಹೇಳುತ್ತ ಮದುವೆ ಜೀವನದ ಮಹತ್ವದ ಘಟ್ಟ ಅಲ್ಲಿಂದಲೇ ಮನುಷ್ಯನ ಜೀವನ ಆರಂಭವಾಗುವುದು. ಹುಡುಗಾಟಿಕೆ ಜೀವನ ಹೋಗಿ ಜವಾಬ್ಧಾರಿ ಜೀವನ ಪ್ರಾರಂಭವಾಗುವುದು. ಮದುವೆ ಸುಖಜೀವನಕ್ಕೆ ಸಾಧನವೆಂದು ಹಾಸ್ಯಪ್ರಸಂಗಗಳನ್ನು ಹಂಚಿಕೊಳ್ಳುತ್ತ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಇವರ ಮಾತಿಗೆ ಪ್ರೊ. ಜಿ. ಕೆ. ಕುಲಕಣರ್ಿ, ಎಂ. ಬಿ. ಹೊಸಳ್ಳಿ ಹಾಗೂ ಶ್ರೀಮತಿ ನಿರಜಾ ಗಣಾಚಾರಿ ನವಿರಾದ ಹಾಸ್ಯದೊಂದಿಗೆ ಮದುವೆ ಜೀವನದ ಸಾಧನೆಗೆ ಅಡ್ಡಿಯಾಗುತ್ತದೆ. ಮದುವೆ ಎಂಬುದು ಒಂದು ಬಂಧನವಾಗಿ ಪರಿದಾಡಬೇಕಾಗುತ್ತದೆ. ಸ್ವತಂತ್ರ್ಯ ಹರಣವಾಗುತ್ತದೆ. ಮದುವೆ ಸುಖಜೀವನಕ್ಕೆ ಅಡ್ಡಿಯಾಗುತ್ತದೆ ಎಂಬ ತಮ್ಮ ವಾದವನ್ನು ಮಂಡಿಸಿದರು. ಪ್ರೊ. ಜಿ.ಕೆ. ಕುಲಕಣರ್ಿ ಹಾಗೂ ಎಂ. ಬಿ. ಹೊಸಳ್ಳಿಯವರ ಮಾತುಗಳು ಎಲ್ಲರ ಗಮನ ಸೆಳೆದವು. ಎರಡು ಗಂಟೆಗಳ ಕಾಲ ಸತತವಾಗಿ ಎಲ್ಲರನ್ನು ನಗೆಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ವಸುಮತಿ ಅವರ ರಚನೆಯ ಪ್ರಾರ್ಥನೆಯನ್ನು ಡಾ. ಸ್ವಪ್ನಾ ಕುಲಕಣರ್ಿ ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರು ವಹಿಸಿದ್ದರು. ಕೆ. ತಾನಾಜಿ ಸ್ವಾಗತಿಸಿದರು. ಅರವಿಂದ ಹುನಗುಂದ ನಿರೂಪಿಸಿದರು. ಅರವಿಂದ ಕಡಗದಕೈ ವಂದಿಸಿದರು. ಪಿ.ಬಿ. ಸ್ವಾಮಿ, ಎಂ. ಎ. ಪಾಟೀಲ, ಮದನ ಕಣಬೂರ, ವಾಸಾಚಾರ್ಯ ಅಂಬೇಕರ, ಚಿದಂಬರ ಮುನವಳ್ಳಿ, ಜಯಶ್ರೀ ಅಬ್ಬಿಗೇರಿ, ಜಯಪ್ರಕಾಶ ಅಬ್ಬಿಗೇರಿ, ಸುನಿತಾ ಪಾಟೀಲ, ದೀಪಿಕಾ ಚಾಟೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.