ಕಾಟಾಚಾರಕ್ಕೆ ಗೋಶಾಲೆ ನಿಮರ್ಾಣ: ಅನುದಾನ ದುರ್ಬಳಕೆ

ಲೋಕದರ್ಶನ ವರದಿ

ಮುಂಡಗೋಡ 6: ಅನುದಾನದ ಆಸೆಗೆ ಕಾಟಾಚಾರಕ್ಕೆ ಗೋಶಾಲೆ ನಿಮರ್ಾಣ ಮಾಡಿ ಜಾನುವಾರಗಳಿಗೆ ತಿನ್ನಲು ಮೇವು ಇಲ್ಲಾ ಕುಡಿಯಲು ನೀರಿಲ್ಲಾ ಅವುಗಳ ಪಾಲನೆ ಪೊಷಣೆ ಇಲ್ಲದೆ ಒಂದೊಂದಾಗಿ ಅರಣ್ಯದ ಅಂಚಿನಲ್ಲಿರುವ ಈ ಗೋಶಾಲೆಯ ಎದುರೆ ಪ್ರಾಣ ಕಳೆದುಕೊಂಡಿವೆ ಇವಕ್ಕೆಲ್ಲಾ ಹೋಣೆ ಯಾರು ? ಉಳಿದ ಜಾನುವಾರಗಳ ಪಾಡೆನು ? ಹಾಗಾದರೆ ಗೋಶಾಲೆಯ ಅನುದಾನ ದುರ್ಭಳಕೆ ಮಾಡಿಕೊಳ್ಳುತ್ತಿರುವವರು ಯಾರು ?

ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಲರ್ಿ ಎಂಬ ಗ್ರಾಮದಿಂದಾ  ಒಂದು ಕಿಲೋ ಮೀಟರ ದೂರದಲ್ಲಿ ರಸ್ತೆಯ ಪಕ್ಕದಲ್ಲಿದೆ. ಈ ಗೋಶಾಲೆಯು ಹುಬ್ಬಳ್ಳಿ_ಶಿರಶಿ ರಸ್ತೆಯ ಮಳಗಿ ಗ್ರಾಮದಿಂದಾ 2_3 ಕಿಲೋ ಮೀಟಟರ ದೂರದಲ್ಲಿರುವ ಗೋಟಗೋಡಿ ಕೊಪ್ಪಾ ಕ್ರಾಸ ಹತ್ತಿರವಿರುವ ಧರ್ಮ ಭೂಮಿ ಮುಕ್ತಿ ಮಠದ ಸುಪಧರ್ಿಯಲ್ಲಿರುವ ಗೋಶಾಲೆ ಇದಾಗಿದೆ. 

ಧರ್ಮದ ಹೆಸರು ಹೇಳಿಕೊಂಡು ಮುಕ್ತಿಮಠದ ಸ್ವಾಮಿಗಳು ಜನರಲ್ಲಿ ಅಧಿಕವಾದ ಹಿಂದು ಧರ್ಮದ ನಂಬಿಕೆ ಹುಟ್ಟಿಸಿದಾಗ ಊರ ಸಾರ್ವಜನಿಕರೆಲ್ಲರು ಸೇರಿ ಗ್ರಾಮ ಪಂಚಾಯತದ ಆಸ್ತಿ 27 ಎಕರೆ ಗಾವಟನ ಜಾಗೆಯನ್ನು ಗೋಶಾಲೆ ಕಟ್ಟಿಸಲು ಪಂಚಾಯತ ಟರಾವು ಮಾಡಿಸಿ ಗೋಶಾಲೆ ನಿಮರ್ಾಣಕ್ಕೆ ನೀಡಲಾಯಿತು.

ಮುಕ್ತಿಮಟದ ಸ್ವಾಮಿಗಳು ಮಾನವ ಧರ್ಮ ವಿಶ್ವಕ್ಕೆ ಶಾಂತಿ ಎಂದು ಬಂದು ನಮ್ಮ ಊರಿನಲ್ಲಿ ಲಕ್ಷ ಲಕ್ಷ ಕೊಟ್ಟು ಜಾಗೆ ಕರುದಿ ಮಾಡುತ್ತಾರೆ. ಜಾನುವಾರಗಳಿಗೆ ಮೇವು ನೀರು ಹಾಕಲು ಆಗುವುದಿಲ್ಲಾ ಗೋಶಾಲೆಗೆ ಸಂಬಂದ ಪಟ್ಟ ಒಂದು ಕಮೀಟಿ ಇದೆ ಆಕಮೀಟಿಯ ಯಾರೋಬ್ಬರು ಗೋಶಾಲೆಯ ನಿರ್ವಹಣೆ ಸರಿಯಾಗಿ ಮಾಡುವುದಿಲ್ಲಾ ನಾಲ್ಕು ವರ್ಷದಿಂದಾ ಗೋಶಾಲೆಯನ್ನು ಇಲ್ಲಿಯವರೆಗೂ ಒಂದು ಸಾರೆಯಾದರು ಬಂದು ನೋಡಿಲ್ಲಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಸುಮಾರು ಆರಂಭಗೊಂಡು ನಾಲ್ಕು ವರ್ಷ ಕಳೆಯಿತು ಇಲ್ಲಿಯವರೆ ಸುಮಾರು 15 ಜಾನೂವಾರಗಳು ಆಹಾರ ನೀರು ಇಲ್ಲಾದೆ ಕಾಡಿನಲ್ಲಿ ಬಿದ್ದು ಸತ್ತು ಹೋಗಿವೆ. ಕಳೆದ ಸೂಮಾರು ದಿನಗಳ ಹಿಂದೆ ಕೂಡಾ  ಒಂದು ಆಕಳು ಸತ್ತು ಬಿದ್ದುದ್ದನ್ನು ಎಂಟು ದಿನವಾದರು ಸಂಬಂದಪಟ್ಟವರು ಬಂದು ಇಲ್ಲೆನಾಗಿದೆ ಎಂದು ಯಾರು ನೋಡುಲಿಲ್ಲಾ ಜಾನುವಾರಗಳು ಇರುವ ಗೋಶಾಲೆಗೆ ಹೋದರೆ ಮೇವು ನೀರು ಕಾಣದೆ ಎಷ್ಟು ದಿನ ಹಾಗೆ ಇವೆಯೊ ಎಂದು ಜನರು ಹೋದಾಗ ಬೋಗರಿಯುವುದನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಈಗ ಸದ್ಯದಲ್ಲಿ 17 ಜಾನುವಾರಗಳಿವೆ ಜಾನುವಾರಗಳ ಪಾಲನೆಯಂತು ಇಲ್ಲವೆ ಇಲ್ಲಾ ಅವುಗಳ ಆಹಾರ ಶೇಕರಣಿಯ ಕೋಟ್ಟಡಿಯಲ್ಲಿ ಒಂದು ಕಡ್ಡಿ ಹುಲ್ಲು ಇಲ್ಲಾ ಇನ್ನು 15 ದಿನ ಕಳೆದರೆ ನೀರು ಮೇವು ಇಲ್ಲದೆ ಇರುವ ಜಾನುವಾರಗಳು ಕೂಡ ಬದುಕಿ ಊಳಿಯುವುದು ಕಷ್ಟ ಎನಿಸುತ್ತಿದೆ.     ಇದು ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಜನರು ಹೋಗುವುದು ಅಷ್ಟಕಷ್ಟೆ. ಇನ್ನಾದರು ಸಂಬಂದಪಟ್ಟವರು ಇಲ್ಲಿರುವ ಜಾನುವಾರಗಳ ಬಗ್ಗೆ ಕಾಳಜಿ ವಹಿಸಿ ಜಾನುವಾರಗಳು ಮೇವು ನೀರು ಇಲ್ಲದೆ ಪ್ರಾಣ ಕಳೆದುಕೊಳ್ಳುವ ಮೊದಲು ಸುರಕ್ಷಿತ ಗೋಶಾಲೆಗಳಿಗೆ ರವಾನಿಸುವುದು ಅತಿ ಅವಶ್ಯಕತೆ ಇದೆ ಸಂಬಂದ ಪಟ್ಟವರು ಇನ್ನಾದರು ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಾಗಿದೆ.


ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗೋಶಾಲೆ ಇರುವುದು ಸುತ್ತು ಮುತ್ತಲಿನ ಗ್ರಾಮಸ್ಥರಿಗೆ ಖುಷಿಯನ್ನು ತಂದಿತ್ತು ಕಳೆದ 5 ವರ್ಷಗಳ ಹಿಂದೆ ಗೋಶಾಲೆಗೆ ಭೇಟಿ ನೀಡಿದಾಗ ಒಳ್ಳೆಯದೆನಿಸಿತ್ತು. ಆದರೆ ಮುಕ್ತಿ ಮಠದ ಹೆಸರಿನಲ್ಲಿ ನಡೆಯುತ್ತಿದೆ ಆದರು ಇಲ್ಲಿಯ ಸ್ವಾಮಿಗಳು ಗೋಶಾಲೆಯ ಬಗ್ಗೆ ಕಾಳಜಿ ವಹಿಸಬೇಕಿತ್ತು ಇಗಿನ ಪರಿಸ್ಥಿತಿಯಲ್ಲಿ ಗೋಶಾಲೆಯನ್ನು ನೋಡಿದರೆ ಬೇಜಾರವೆನಿಸುತ್ತಿದೆ ಈ ಮೊದಲು ಎಷ್ಟೂ ಜಾನುವಾರಗಳು ರಸ್ಥೆಯಲ್ಲೆ ಆಹಾರವಿಲ್ಲದೆ ಪ್ರಾಣ ಕಳೆದು ಕೊಂಡಿವೆ ಸಕರ್ಾರದ ಅನುದಾನ ದುರ್ಭಳಕೆ ಆಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲಾ ಒಂದು ವೇಳೆ ಗೋಶಾಲೆಯನ್ನು ಆಡಳಿತ ಕಮೀಟಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ ಬೆಡಸಗಾಂವ ಗ್ರಾಮ ಪಂಚಾಯತದ ರಾಮಲಿಂಗ ದೇವಸ್ಥಾನದ ಟ್ರಷ್ಟನವರಿಗೆ ಸ್ಥಳಾಂತರಿಸಿದರೆ ಇದರ ಹೊಣೆಗಾರಿಕೆ ನೋಡಿಕೊಳ್ಳಲು ಸಿದ್ದರಿದ್ದೆವೆ ಎಂದರು. ದೆವೇಂದ್ರ ನಾಯ್ಕ ಗೋವು ಪ್ರಿಯ