ಗೋಪಾಲಕೃಷ್ಣ ಅಡಿಗ್ ಒಂದು ಜನಾಂಗದ ಕಣ್ಣು ತೆರೆಯಿಸಿದ ಕವಿ: ಮಹಾಂತಪ್ಪ ನಂದೂರ
Gopalakrishna Adig is the poet who opened the eyes of a nation: Mahanthappa Nandura
ಧಾರವಾಡ 24 : ಗೋಪಾಲಕೃಷ್ಣ ಅಡಿಗರ ಕಾವ್ಯವು ತನ್ನ ವಸ್ತು ವೈಶಿಷ್ಟ್ಯ, ಸೂಕ್ಷ್ಮತೆ, ನವ್ಯತೆ ಮತ್ತು ಆಧುನಿಕತೆಯಿಂದ ಇಂದಿಗೂ ಓದುಗರ ಗಮನ ಸೆಳೆಯುತ್ತಿದೆ ಎಂದು ಲೇಖಕ ಮಹಾಂತಪ್ಪ ನಂದೂರ ಹೇಳಿದರು. ಅವರು ಧಾರವಾಡ ಕಟ್ಟೆ ಆಯೋಜಿಸಿದ್ದ “ಗೋಪಾಲಕೃಷ್ಣ ಅಡಿಗ ಮತ್ತು ಟಿ.ಎಸ್. ಎಲಿಯಟ್: ಪರಂಪರೆ ಮತ್ತು ನವ್ಯತೆ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಡಿಗರು ಕಾವ್ಯವನ್ನು ಉದ್ಯೋಗವಾಗಿ ಪರಿಗಣಿಸದೆ, ಅದನ್ನು ಕಾಯಕವಾಗಿ ಕಂಡಿದ್ದರು. ಅವರ ಕಾವ್ಯಪ್ರಯಾಣದ ಅಧ್ಯಯನವು ಓದುಗರಲ್ಲಿ ಆಧುನಿಕ ಪ್ರಜ್ಞೆಯನ್ನು ರೂಪಿಸುತ್ತದೆ. ಹೀಗಾಗಿ ಲಂಕೇಶ್ ಅವರು ಅಡಿಗರನ್ನು “ಒಂದು ಜನಾಂಗದ ಕಣ್ಣು ತೆರೆಯಿಸಿದ ಕವಿ” ಎಂದು ಕರೆದಿದ್ದಾರೆ. ಆದರೆ ಅವರ ವೈದಿಕ ಪ್ರಜ್ಞೆ ಅಡಿಗರ ಕಾವ್ಯಕ್ಕೆ ಒಂದು ಮಿತಿಯನ್ನು ತಂದಿತು ಎಂದು ಮಹಾಂತಪ್ಪ ನಂದೂರ ಅಭಿಪ್ರಾಯಪಟ್ಟರು.
ಟಿ.ಎಸ್. ಎಲಿಯಟ್ ಆಧುನಿಕ ಜಗತ್ತಿನ ಮಹತ್ವದ ಕವಿಯಾಗಿದ್ದ. ಇಂಗ್ಲಿಷ್ ಕಾವ್ಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಕವಿ, ಗೀತನಾಟಕಕ್ಕೆ ಪುನರುಜ್ಜೀವನ ನೀಡಿದ ನಾಟಕಕಾರ ಹಾಗೂ ವಿಮರ್ಶೆಗೆ ಪರಂಪರೆಯ ಭದ್ರ ಬುನಾದಿ ಹಾಕಿದ ವಿಮರ್ಶಕ ಎಂದು ಲೇಖಕ ವಿ.ಟಿ. ನಾಯಕ ಹೇಳಿದರು.
ತನ್ನ ಧಾರ್ಮಿಕ, ರಾಜಕೀಯ ಮತ್ತು ಸಾಹಿತ್ಯಿಕ ಬದ್ಧತೆಗಳ ಕುರಿತು ಸ್ಪಷ್ಟ ಚೌಕಟ್ಟು ಹೊಂದಿದ್ದ ಎಲಿಯಟ್, ಆಧುನಿಕ ಜಗತ್ತಿನ ಬಹುಮುಖ್ಯ ಸಮಸ್ಯೆಗಳನ್ನು ತನ್ನ ಕಾವ್ಯ ಮತ್ತು ನಾಟಕಗಳಲ್ಲಿ ಚರ್ಚಿಸಿದರು ಎಂದು ಅವರು ವಿ.ಟಿ. ನಾಯಕ ಹೇಳಿದರು.
ಗೋಪಾಲಕೃಷ್ಣ ಅಡಿಗರು ಕನ್ನಡದ ಪ್ರಮುಖ ನವ್ಯ ಕವಿಗಳಾಗಿದ್ದರು. ಆಧುನಿಕತೆಯನ್ನು ಅವರಷ್ಟು ಸಮರ್ಥವಾಗಿ ಬೇರಾವ ಕನ್ನಡ ಕವಿಯೂ ಹಿಡಿದಿಲ್ಲ. ಸಾಹಿತ್ಯ ಮತ್ತು ಕಾವ್ಯ ಪರಂಪರೆಯ ಕುರಿತು ಅವರು ಆಳವಾದ ಚಿಂತನೆ ನಡೆಸಿದ್ದರು. ಟಿ.ಎಸ್. ಎಲಿಯಟ್‌ಗಿಂತಲೂ ಹೆಚ್ಚು ನಿಖರವಾಗಿ ಹಾಗೂ ಹೆಚ್ಚು ಪ್ರಕಾರವಾಗಿ ತಮ್ಮ ಕಾಲದ ರಾಜಕೀಯವನ್ನು ಅಡಿಗರು ಕಾವ್ಯದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಬಸವರಾಜ್ ಡೋಣೂರ ಹೇಳಿದರು. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡಿಗರ ವೈದಿಕ ಪ್ರಜ್ಞೆ ಅವರ ಕಾವ್ಯದ ಮಿತಿಯಾಗಿರಲಿಲ್ಲ; ಅದು ಅವರ ಕಾವ್ಯಪ್ರಜ್ಞೆಯೂ ಆಗಿತ್ತು. ಎಲಿಯಟ್‌ಗೆ ಕ್ಯಾಥೊಲಿಕ್ ಪ್ರಜ್ಞೆ ಇದ್ದಂತೆ, ಶೇಕ್ಸ್‌ಪಿಯರ್ ಮತ್ತು ಟಾಲ್ಸ್ಟಾಯ್ ಅವರಿಗೆ ಕ್ರೈಸ್ತ ಪ್ರಜ್ಞೆ ಇದ್ದಂತೆ, ಅಡಿಗರಿಗೆ ವೈದಿಕ ಪ್ರಜ್ಞೆ ಏಕೆ ಇರಬಾರದು? ಪ್ರತಿಯೊಬ್ಬ ಲೇಖಕನಿಗೂ ತನ್ನದೇ ಆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಇರುತ್ತದೆ. ಆದರೆ ಆ ಪ್ರಜ್ಞೆ ವಿಶ್ವಾತ್ಮಕತೆಯನ್ನು ಪಡೆದುಕೊಳ್ಳಬೇಕು ಎಂದು ಬಸವರಾಜ ಡೋಣೂರ ಹೇಳಿದರು.
ಟಿ.ಎಸ್. ಎಲಿಯಟ್ ತನ್ನ ಕಾವ್ಯದಲ್ಲಿ ಆಧುನಿಕ ಯುರೋಪ್ ಎದುರಿಸಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಬಿಕ್ಕಟ್ಟುಗಳನ್ನು ಚರ್ಚಿಸಿದ. ಯುರೋಪಿನ ಸಂಕಟಗಳನ್ನು ಎದುರಿಸಲು ಅವನು ಭಾರತದ ಉಪನಿಷತ್ತುಗಳ ಮೊರೆ ಹೋದ. ಪ್ರಪಂಚದ ಅನೇಕ ಲೇಖಕರ ಮೇಲೆ ಎಲಿಯಟ್ ಗಾಢ ಪ್ರಭಾವ ಬೀರಿದ್ದ; ಅಡಿಗರ ಮೇಲೂ ಆ ಪ್ರಭಾವವಿತ್ತು. ಆದರೆ ಅಡಿಗರ ಕಾವ್ಯಪ್ರತಿಭೆ ಎಲಿಯಟ್‌ನ ಪ್ರಭಾವವನ್ನು ಸ್ವೀಕರಿಸಿ, ಅದನ್ನು ತನ್ನದೇ ಸ್ವರೂಪಕ್ಕೆ ರೂಪಾಂತರಿಸಿಕೊಂಡಿತು. ಅಡಿಗರ “ಭೂಮಿಗೀತ” ಮತ್ತು ಎಲಿಯಟ್‌ನ ಖಿಜ ಘಛಿಣಜ ಐಚಿಟಿಜ ಕಾವ್ಯಗಳ ಕುರಿತು ತೌಲನಿಕ ಅಧ್ಯಯನ ನಡೆಸಬಹುದಾಗಿದೆ.
ವಿಮರ್ಶಕನಾಗಿ ಎಲಿಯಟ್ ಕೆಲವೊಮ್ಮೆ ಬೀಸು ಹೇಳಿಕೆಗಳನ್ನು ನೀಡುತ್ತಿದ್ದ. “ಊಚಿಟಟಜಣ ಚಿಟಿ ಚಿಡಿಣಣಛಿ ಜಿಚಿಟಣಡಿಜ” ಎಂದು ಶೇಕ್ಸ್‌ಪಿಯರ್‌ನ ಮೇರುಕೃತಿಯ ಕುರಿತು ಸಮಸ್ಯಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದ. ತನ್ನ ಹೇಳಿಕೆಯನ್ನು ಸಮರ್ಥಿಸಲು ಅವನು ಒಂದು ಸಿದ್ಧಾಂತವನ್ನೇ ರೂಪಿಸಿದ. ಎಲಿಯಟ್ ಇಂತಹ ಹೇಳಿಕೆ ನೀಡಿದ ಮೇಲೂ ಓದುಗರು ಶೇಕ್ಸ್‌ಪಿಯರನ ಮೇರುಕೃತಿಯನ್ನು ಕಡೆಗಣಿಸಲಿಲ್ಲ; ಬದಲಿಗೆ ಹೆಚ್ಚಿನ ಆಸಕ್ತಿಯಿಂದ ಓದಿದರು ಎಂದು ಬಸವರಾಜ್ ಡೋಣೂರ ಹೇಳಿದರು.
ಡಾ. ವಿಜಯಲಕ್ಷ್ಮಿ ದಾನರಡ್ಡಿ ಕಾರ್ಯಕ್ರಮ ನಿರೂಪಿಸಿದರು. ಮುತ್ತು ಮಠಪತಿ ತಾಂತ್ರಿಕ ಸಹಾಯ ನೀಡಿದರು. ಪಿ.ಎ. ಪೋಲಿಸ್‌ಪಾಟೀಲ, ಪ್ರೊ.ಮುಕುಂದ ಲಮಾಣಿ, ನಿಖಿತಾ ಪಾಟೀಲ ಹಾಗೂ ವಿಶ್ವಾಸ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 