ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಬಾಯಿಗೆ ಗೂಗಲ್ ಗೌರವ

ಕೋಲ್ಕತಾ, ಆಗಸ್ಟ್ 12    ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ, ಮಹಾನ್ ಕೈಗಾರಿಕೋದ್ಯಮಿ, ಅನ್ವೇಷಣೆಕಾರ, ವಿಕ್ರಮ್ ಸಾರಬಾಯಿ  ಅವರ 100 ನೇ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ಅವರಿಗೆ  ಡೂಡಲ್ ರಚಿಸಿ ಗೌರವ ಸೂಚಿಸಿದೆ. ದೇಶ  ಅವರನ್ನು ಅವರ ಸಾಧನೆಯನ್ನೂ ಸ್ಮರಿಸಿಕೊಳ್ಳುತ್ತಿದೆ.   ಹುಟ್ಟುಹಬ್ಬದ ಅಂಗವಾಗಿ ಎಂಜಿನ್ ಗೂಗಲ್ ಸೋಮವಾರ  ಡೂಡಲ್  ಸಮರ್ಪಿಸಿದೆ ಮುಂಬೈ ಮೂಲದ ಅತಿಥಿ ಕಲಾವಿದ ಪವನ್ ರಾಜೂರ್ಕರ್ ರಚಿಸಿದ  ಇಂದಿನ ಡೂಡಲ್, ಭೌತಶಾಸ್ತ್ರಜ್ಞ, ಕೈಗಾರಿಕೋದ್ಯಮಿ ಮತ್ತು ನವೀನಕಾರ ವಿಕ್ರಮ್ ಸಾರಾಬಾಯಿ ಅವರ 100 ನೇ ಹುಟ್ಟುಹಬ್ಬ ಮತ್ತು ಭಾರತೀಯ  ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹರಾಗಿದ್ದ ಅವರ ನೆನಪಿನ ಗೌರವದ ಸಂಕೇತವಾಗಿದೆ.  ಕಾಸ್ಮಿಕ್ ಕಿರಣಗಳು, ರಾಕೆಟ್ಗಳು ಮತ್ತು ಉಪಗ್ರಹಗಳಲ್ಲಿನ ಆಸಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹಳವಾಗಿತ್ತು .  1919 ಆಗಸ್ಟ್  12 ರಂದು  ಅಹಮದಾಬಾದ್ ನಗರದಲ್ಲಿ ಜನಿಸಿದ ಅವರು ಕೇಂಬ್ರಿಡ್ಜ್ನಲ್ಲಿ ಡಾಕ್ಟರೇಟ್ ಗಳಿಸಲು ಇಂಗ್ಲೆಂಡ್ಗೆ ಹೋಗುವ  ಮೊದಲು ಗುಜರಾತ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು  ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಸ್ತುತತೆ  ಪ್ರಶ್ನಿಸುವ ಕೆಲವರು ನಮ್ಮಲ್ಲಿ ಇದ್ದಾರೆ  ಎಂದು ರಷ್ಯಾದ ಸ್ಪುಟ್ನಿಕ್ ಉಪಗ್ರಹವನ್ನು ಉಡಾಯಿಸಿದ ನಂತರ ಡಾ. ಸಾರಾಬಾಯಿ  ಪ್ರಶ್ನೆ ಮಾಡಿ, ನಮಗೆ, ಉದ್ದೇಶದ  ಅಸ್ಪಷ್ಟತೆಯಿಲ್ಲ  ಸುಧಾರಿತ ಅನ್ವಯಿಕೆಯಲ್ಲಿ ನಾವು ಹಿಂದೆ ಬೀಳಬಾರದು ಎಂದೂ  ಪ್ರತಿಪಾದಿಸಿದ್ದರು.   ಡಾ. ಸಾರಾಬಾಯಿ 1962 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆಗಾಗಿ ರಾಷ್ಟ್ರೀಯ ಸಮಿತಿ ಸ್ಥಾಪಿಸಿದ್ದರು , ನಂತರ ಇದನ್ನು ಮುಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಂದು ಮರುನಾಮಕರಣ ಮಾಡಲಾಯಿತು. ಇದು ದಕ್ಷಿಣ ಭಾರತದ ಥುಂಬಾ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರಕ್ಕೂ ಕಾರಣವಾಗಿ,  ಇದು 1963 ರ ನವೆಂಬರ್ 21 ರಂದು ಮೊದಲ ಯಶಸ್ವಿ ಉಡಾವಣೆಯಾಗಿತ್ತು . 1975 ರಲ್ಲಿ ಆರ್ಯಭಟ ಕಕ್ಷೆಗೆ ತಲುಪಿದಾಗ ಅವರ ಮತ್ತು  ಕೋಟಿ ಕೋಟಿ ಭಾರತೀಯರ  ಉಪಗ್ರಹದ ಕನಸು ನನಸಾಯಿತು. ಅವರು ತಮ್ಮ ತಾಯ್ನಾಡಿನಲ್ಲಿ ಭೌತಿಕ ಸಂಶೋಧನೆಯಂತಹ ಅನೇಕ ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸಿದ್ದರು  ಜೊತೆಗೆ ಭಾರತದ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ,  ತನ್ನ ಸಂಸ್ಥಾಪಕ ಡಾ.ಸಾರಬಾಯಿ  ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ವರ್ಷಪೂರ್ತಿ ಕಾರ್ಯಕ್ರಮ,  ಪ್ರದರ್ಶನಗಳು, ಶಾಲಾ ಮಕ್ಕಳಿಗೆ ಸ್ಪರ್ದಿಗಳು, ಪತ್ರಿಕೋದ್ಯಮ ಪ್ರಶಸ್ತಿಗಳು,  ಪ್ರಖ್ಯಾತ ವ್ಯಕ್ತಿಗಳ ಭಾಷಣದ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮ ದೇಶದ 100 ನಗರಗಳಲ್ಲಿ ಇಂದಿನಿಂದ ಪ್ರಾರಂಭವಾಗಿ 2020 ರ ಆಗಸ್ಟ್ 12 ರಂದು ಕೊನೆಯಾಗಲಿದೆ.