ಗದಗ 02: ಬಡಜನರಿಗೆ ಶೌಚಾಲಯ, ಸ್ನಾನಗೃಹ, ಬಟ್ಟೆ ತೊಳೆಯುವ ಯಂತ್ರ, ಹೇರ್ ಡ್ರಯರ್, ಮುಂತಾದ ಆಧುನಿಕ ಸೌಲಭ್ಯಗಳನ್ನು ಒಂದೇ ಸೂರಿನಡಿ ಗೌರವಘಟಕವೆಂದು ಸೌಲಭ್ಯ ಒದಗಿಸಿರುವುದು ಉತ್ತಮ ಸೇವಾ ಸೌಲಭ್ಯವಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ. ವಿಜಯಭಾಸ್ಕರ್ ನುಡಿದರು.
ಗದಗ-ಬೆಟಗೇರಿ ನಗರದ ರಾಜೀವ ಗಾಂಧಿ ನಗರದಲ್ಲಿನ ಗೌರವ ಘಟಕಕ್ಕೆ ಅವರು ಭೇಟಿ ನೀಡಿ ಅಲ್ಲಿ ಪುರುಷ ಮತ್ತು ಸ್ತ್ರೀಯರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತಿರುವ ಶುಚಿ, ಶೌಚ ಸೌಲಭ್ಯಗಳನ್ನು ಪರಿಶೀಲಿಸಿ ಅವರ ಅಧಿಕಾರಿಗಳು ಹಾಗೂ ನಿರ್ವಾಹಕರೊಂದಿಗೆ ಮಾಹಿತಿ ಪಡೆದರು.
ಗೌರವ ಘಟಕದ ವಿದ್ಯುತ್ ಶುಲ್ಕ ಹಾಗೂ ಸಿಬ್ಬಂದಿ ಗೌರವಧನ ಗದಗ ಬೆಟಗೇರಿ ನಗರಸಭೆ ಪಾವತಿಸುತ್ತಿದೆ. ಸುತ್ತಲಿನ ಸಾಮಾನ್ಯ ಕುಟುಂಬಗಳು ಈ ಸೌಲಭ್ಯ ಪಡೆಯುತ್ತಿದ್ದು ಈ ಕುರಿತು ಇನ್ನೂ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಸಿಬ್ಬಂದಿ ತಿಳಿಸಿದರು.
ಇದೊಂದು ನಿಜಕ್ಕೂ ಮಾದರಿ ಸೇವಾ ಸೌಲಭ್ಯವಾಗಿದ್ದು ಸುತ್ತಲಿನ ಬಡಾವಣೆಗಳ ಜನಸಾಮಾನ್ಯರಿಗೆ ಇಲ್ಲಿನ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ ಬಹುಮುಖ್ಯವಾಗಿ ಇದರ ನಿರ್ವಹಣೆಗಾಗಿ ಯೋಗ್ಯ ಸೇವಾ ಶುಲ್ಕ ನಿಯಮಿತವಾಗಿ ಪಡೆಯಲು ವ್ಯವಸ್ಥೆ ಮಾಡಿ ಇದು ನಿರಂತರವಾಗಿ ಶುಚಿತ್ವ ಕಾಯ್ದುಕೊಂಡು ನಡೆದುಕೊಂಡು ಹೋಗುವದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹಾಗೂ ಮುಖ್ಯವಾಗಿ ಆಧುನಿಕ ಸೌಲಭ್ಯಗಳ ಹೆಸರು, ಹಾಗೂ ಉಪಯೋಗದ ಮಾಹಿತಿಯನ್ನು ಕನ್ನಡ ಭಾಷೆಯ ಫಲಕಗಳನ್ನು ಅಳವಡಿಸಲು ಮುಖ್ಯ ಕಾರ್ಯದಶರ್ಿಗಳು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ , ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಆನಂದ ಕೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೆಶಕ ರುದ್ರೇಶ, ಪೌರಾಯುಕ್ತ ಮನ್ಸೂರ ಅಲಿ, ಗುತ್ತಿಗೆದಾರ ಕಂಪನಿ ಪ್ರತಿನಿಧಿಗಳು ಇದ್ದರು.