ಬೆಂಗಳೂರು 25: ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸ್ಯಾಂಡಲ್ ವುಡ್ ತಾರಾದಂಪತಿ ಯಶ್ ಮತ್ತು ಪತ್ನಿ ರಾಧಿಕಾ ಅಪ್ಪ ಅಮ್ಮ ಆಗುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಯಶ್ ವಿಡಿಯೋ ಮೂಲಕ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಮೊಗ್ಗಿನ ಮನಸು ಸಿನಿಮಾ ಮೂಲಕ ಸಿನಿ ಪಯಣ ಆರಂಭಿಸಿದ ರಾಧಿಕಾ ಪಂಡಿತ್ ಮತ್ತು ಯಶ್ ಪ್ರೀತಿಸಿ 2016ರ ಡಿಸೆಂಬರ್ 9 ರಂದು ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಇನ್ನೂ ನಟಿ ರಾಧಿಕಾ ಪಂಡಿತ್ ಕೂಡ ತಾವು ತಾಯಿಯಾಗುತ್ತಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ ವರ್ಡ, ಮತ್ತು ಡ್ರಾಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದಾರೆ.