ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಮುಖ್ಯ : ಲಯನ್ಸ್ ಸಿದ್ದು ನಕಾತಿ
Good morals are important among students: Lions Siddu Nakathi
ಮಹಾಲಿಂಗಪುರ 27: ಪಾಲಕರು ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಅವರು ಒಳ್ಳೆಯ ನಾಗರಿಕರಾಗುತ್ತಾರೆ. ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡಿ ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ ಹೇಳಿದರು.
ಸ್ಥಳೀಯ ಬಸವಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಆಪ್ ಗ್ರೀನ್ ಬೇಸಿನ್ ವತಿಯಿಂದ ನಡೆದ ‘ವಿಶ್ವ ಪಾಲಕರ ದಿನಾಚರಣೆ’ಯಲ್ಲಿ ಮಾತನಾಡಿದರು.
ಮುಖ್ಯ ಅತಿಥಿ ಹನಗಂಡಿಯ ಚನ್ನಬಸವ ಗುರೂಜಿ ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ನಡತೆ, ಆಚಾರ,ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು.ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ವಿದ್ಯಾರ್ಥಿಗಳಿರಬೇಕು ಎಂದರು.
ನಂತರ ಶಾಲಾ ಮಕ್ಕಳು ಪಾಲಕರ ಪಾದಪೂಜೆ ಮಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ರಾ್ಯಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಖಜಾಂಚಿ ಪ್ರಶಾಂತ ಅಂಗಡಿ, ಜಂಟಿ-ಕಾರ್ಯದರ್ಶಿ ಅಶ್ವಿನಿ ಕೋಳಿಗೂಡ್ದ, ಹುಚ್ಚೇಶ ವಡ್ಡರ, ಸೋಮು ಸಂಶಿ, ಡಾ.ಅಶೋಕ ದಿನ್ನಿಮನಿ, ಸಂದೀಪ ಚಿಕ್ಕೋರ್ಡೇ, ಕಿರಣ ಸಣ್ಣಕ್ಕಿ, ವಿಷ್ಣು ಪಾಟೀಲ, ಪ್ರವೀಣ ನಡಕಟ್ನಿ, ಸಂತೋಷ ತಾಳಿಕೋಟಿ, ಶಿಕ್ಷಕ ಎಸ್ ಕೆ ಗಿಂಡೆ ಸೇರಿದಂತೆ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 