ಬೈಲಹೊಂಗಲ: ಬಾಯಿ ಶುಚಿತ್ವದಿಂದ ಉತ್ತಮ ಆರೋಗ್ಯ: ಡಾ.ಸಂಗೊಳ್ಳಿ

ಲೋಕದರ್ಶನ ವರದಿ

ಬೈಲಹೊಂಗಲ 04: ಬಾಯಿ ಶುಚಿತ್ವ ಕಾಪಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ನ್ಯಾಶನಲ್ ಸ್ಮೈಲ್ ಜೋನ್ ಮತ್ತು ಇಂಪ್ಲಾಂಟ್ ಸೆಂಟರ್ ಮಲ್ಟಿಸ್ಪೆಶಾಲಿಟಿ ಡೆಂಟಲ್ ಕ್ಲಿನಿಕ್ನ ದಂತವೈದ್ಯ ಡಾ. ತೌಸಿಪ್ ಸಂಗೊಳ್ಳಿ ಹೇಳಿದರು. 

   ಅವರು ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಭಾರತೀಯ ದಂತ ಸಂಘ ಬೆಳಗಾವಿ ಘಟಕ ಹಾಗೂ ಶಾಲಾ ಅರೋಗ್ಯ ಸಂಘದ ಅಡಿಯಲ್ಲಿ ವಿದ್ಯಾಥರ್ಿಗಳಿಗಾಗಿ ಬಾಯಿ ಶುಚಿತ್ವದ ಕುರಿತು ಆಯೋಜಿಸಿದ ದಂತ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾಥರ್ಿಗಳು ಹಲ್ಲುಗಳ ಸ್ವಚ್ಛತೆಗಾಗಿ ಪ್ರತಿದಿನ ಎರಡು ಸಲ ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಹಲ್ಲಿನ ಸಮಸ್ಯೆ ಇದ್ದಾಗ ಅಲಕ್ಷ ಮಾಡದೇ ವೈದ್ಯರನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎನ್.ಆರ್ ಠಕ್ಕಾಯಿ ಮಾತನಾಡಿ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮೆರಗು ನೀಡುವ ಹಲ್ಲುಗಳ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಹಾಗೂ ದೇಹಕ್ಕೆ ಎಲ್ಲ ಆಹಾರ ಪೂರೈಸುವ ಪ್ರವೇಶ ದ್ವಾರದಂತಿರುವ ಬಾಯಿಯ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.  

ದಂತವೈದ್ಯೆ ಡಾ. ಮಿಸ್ಬಾಹ ಸಂಗೊಳ್ಳಿ ಶಿಬಿರದಲ್ಲಿ ಮಕ್ಕಳ ತಪಾಸಣೆ ನಡೆಸಿದರು. ಶಾಲೆಯ ಎಲ್ಲ ವಿದ್ಯಾಥರ್ಿಗಳ ಹಲ್ಲುಗಳನ್ನು ಪರೀಕ್ಷಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಸಲಹೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಎ.ಎಚ್. ಪಾಟೀಲ, ಆರ್. ಸಿ ಸೊರಟೂರ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು. ಎಸ್.ಬಿ ಭಜಂತ್ರಿ ನಿರೂಪಿಸಿದರು. ಜೆ.ಆರ್ ನರಿ ಸ್ವಾಗತಿಸಿದರು. ಐ.ಎಸ್ ಮುದಗಲ್ ವಂದಿಸಿದರು.