ವಿಜಯಪುರ 30: ಸರಿಯಾದ
ಆಹಾರ ಕ್ರಮ, ಉತ್ತಮ ನಿದ್ದೆ, ದೈಹಿಕ ವ್ಯಾಯಾಮ ಹಾಗೂ ನಗುವಿನೊಂದಿಗೆ ಕೆಲಸ
ನಿರ್ವಹಣೆಯಂತಹ ಉತ್ತಮ ಹವ್ಯಾಸಗಳಿಂದ ಕಾರ್ಯಕ್ಷೇತ್ರದಲ್ಲಿ ಮಾನಸಿಕ ಒತ್ತಡವನ್ನು ನಿರ್ವಹಣೆ ಮಾಡಿಕೊಂಡು ಮಾನಸಿಕ ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದು ಜಿಲ್ಲಾ ಮನೋರೋಗ
ತಜ್ಞರಾದ ಡಾ.ಮಂಜುನಾಥ ಮಸಳಿ
ಅವರು ಹೇಳಿದರು.
ನಗರದ
ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಒಂದು ದಿನದ ಕಾಯರ್ಾಗಾರದಲ್ಲಿ
ಭಾಗವಹಿಸಿ ಅವರು ಮಾತನಾಡಿ, ದುಶ್ಚಟಗಳಿಂದ
ದೂರವಿದ್ದು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ಮಾನಸಿಕ ಒತ್ತಡದಿಂದ ದೂರ ಇರಬಹುದು ಎಂದು ಹೇಳಿದರು.
ಕಾಯರ್ಾಗಾರವನ್ನು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ,
ಉದ್ಘಾಟಿಸಿದರು. ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾಜರ್ುನ ಸ್ವಾಮಿ
, ಕಾರ್ಯಕ್ರಮ ಅಧಿಕಾರಿಗಳಾದ ಡಾ.ರಾಜೇಶ್ವರಿ ಗೊಲಗೇರಿ,
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಂಪತ್ ಗುಣಾರಿ,
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಐ.ಎಸ್.
ಧಾರವಾಡಕರ ಸೇರಿದಂತೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು, ಕೇಂದ್ರ ಕಾರಾಗೃಹದ ಸಿಬ್ಬಂದಿಗಳು, ಇತರರು
ಉಪಸ್ಥಿತರಿದ್ದರು. ಜೈಲರ್ ಅಂಬರಿಶ ಪೂಜಾರಿ ಪ್ರಾರಂಭದಲ್ಲಿ
ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.