ಉತ್ತಮ ಆಹಾರದ ಆಯ್ಕೆ ಮಹಿಳೆಯರದ್ದಾಗಲಿ : ಸವಿತಾ ಅಂಗಡಿ

Good food choice belongs to women: Savita Shop

ಉತ್ತಮ ಆಹಾರದ ಆಯ್ಕೆ ಮಹಿಳೆಯರದ್ದಾಗಲಿ : ಸವಿತಾ ಅಂಗಡಿ 

ಬಾಗಲಕೋಟೆ : ಮಹಿಳೆಯರಿಗಿಂದು ನಾರಯುಕ್ತವಾದ ಆಹಾರ ಪದ್ಧತಿ ದೊರೆಯುತ್ತಿಲ್ಲ. ಉತ್ತಮವಾದ ಶಿಸ್ತನ್ನು  ಹೊಂದಿದ್ದರೆ ಸರಳವಾದ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾಗಿರಿ ಬಿವಿವಿ ಸಂಘದ ನಸಿಂರ್ಗ್ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕಿಯಾದ ಸವಿತಾ ಅಂಗಡಿ ಹೇಳಿದರು.  

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ಅಡಿಯಲ್ಲಿ ಆಯೋಜಿಸಲಾದ" ಆರೋಗ್ಯ ಮತ್ತು ನೈರ್ಮಲ್ಯ"  ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಮಹಿಳೆಯರು ಪ್ರತಿ ಕ್ಷಣವು ಹಸನ್ಮುಖಿಯಾಗಿರಬೇಕು. ಉತ್ತಮವಾದ ಸಮಾಜವನ್ನು ಸೃಷ್ಟಿಸುವಲ್ಲಿ ಹೆಣ್ಣು ಮಕ್ಕಳು ಪ್ರಮುಖ ಪಾತ್ರ ನಿರ್ವಹಿಸಬಲ್ಲರು. ಆದರೆ ಆಹಾರ   ಪದ್ಧತಿ ಬದಲಾವಣೆಯಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು ಅನಾರೋಗ್ಯಕ್ಕೆ  ಕಾರಣವಾಗುತ್ತಿದ್ದು, ತಂಪಾದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಗ್ರಾಮೀಣ ಮಹಿಳೆಯರು 80ಅ ಸದೃಢ ಜೀವನ ಕಳೆಯುತ್ತಿದ್ದಾರೆ.  

ಹೆಣ್ಣು ಮಕ್ಕಳು ಮುಟ್ಟಿನ ಕುರಿತು ತಿಳುವಳಿಕೆ ಉಳ್ಳವರಾಗಬೇಕು.ಹಿರಿಯರು ಕಲಿಸಿದ ಪಾಠವನ್ನು ಅರಿತುಕೊಂಡು ಮುನ್ನಡೆಯಬೇಕು. ಸ್ವಚ್ಛವಾದ ವಾತಾವರಣದಲ್ಲಿ ಸಮಯವನ್ನು ಕಳೆಯಬೇಕು. ಸುಂದರವಾದ ಜೀವನಕ್ಕಾಗಿ ಕ್ರಿಯಾಶೀಲರಾಗಿ ಎಂದರು.  

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್‌.ಆರ್‌.ಮೂಗನೂರಮಠ  ಅವರು ಆರೋಗ್ಯ ಯಾವಾಗಲೂ ಅರಿವನ್ನು ಮೂಡಿಸುತ್ತದೆ. ಮಹಿಳೆ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು ಮಹಿಳೆಯರ ಕಣ್ಣಲ್ಲಿ ಕೋನಗಳ ಸಂಖ್ಯೆ ಹೆಚ್ಚಿರುತ್ತವೆ. ಸಿಪಿಆರ್ ನಲ್ಲಿ ಪರಿಣಿತೆ ಇರಬೇಕು. ಹೃದಯಘಾತಕ್ಕೂ ಮುನ್ನ ಎಚ್ಚರವಿರಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಘಟಕ ಡಾ. ಎಲ್‌.ಎಸ್‌.ಚವಡಿ ಪ್ರಾಧ್ಯಾಪಕಿಯರಾದ ವೀಣಾ ಕಲ್ಮಠ,ಜ್ಯೋತಿ ದಿವಟೆ, ಎಸ್‌.ಕೆ. ಪವಾರ, ಶೈಲಶ್ರೀ ಕಮತೆ, ಶ್ರೇಯಾ ಜೋರಾಪೂರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು   ಉಪಸ್ಥಿತರಿದ್ದರು.