ಕಾಂಗ್ರೆಸ್ ಐಎನ್ಟಿಯುಸಿ ರಾಜ್ಯ ಕಾರ್ಯದಶರ್ಿಯಾಗಿ ಗೊಂಡಬಾಳ ನೇಮಕ

ಲೋಕದರ್ಶನ ವರದಿ

ಕೊಪ್ಪಳ 16: ನಗರದ ಯುವ ಮುಖಂಡ, ಭಾಗ್ಯನಗರ ಪಟ್ಟಣ ಪಂಚಾಯತ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಅವರನ್ನು ಕನರ್ಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾಮರ್ಿಕ ವಿಭಾಗ (ಐಎನ್ಟಿಯುಸಿ ರಾಜ್ಯ ಸಮಿತಿ) ದ ರಾಜ್ಯ ಕಾರ್ಯದಶರ್ಿಯಾಗಿ ನೇಮಕ ಮಾಡಿ ರಾಜ್ಯ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಆದೇಶ ಹೊರಡಿಸಿದ್ದಾರೆ.

ರಾಜ್ಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನಿದರ್ೇಶನದ ಮೇರೆಗೆ ರಾಜ್ಯ ಸಮಿತಿಗೆ ನೇಮಿಸಿದ್ದು, ಕೊಪ್ಪಳ, ಬಳ್ಳಾರಿ, ಗದಗ, ರಾಯಚೂರ, ಬಿಜಾಪೂರ ಮತ್ತು ಬಾಗಲಕೋಟ ಜಿಲ್ಲೆಗಳಿಗೆ ಕಾಂಗ್ರೆಸ್ ಕಾಮರ್ಿಕ ವಿಭಾಗದ ಉಸ್ತುವಾರಿಯನ್ನು ಸಹ ನೀಡಿದ್ದು ಸದರಿ ಜಿಲ್ಲೆಗಳಲ್ಲಿ ಕಾಮರ್ಿಕ ವಿಭಾಘದ ಮೂಲಕ ಎಲ್ಲಾ ಪ್ರಕಾರದ ಕಾಮರ್ಿಕರನ್ನು ಒಳಗೊಂಡ ಸಮಿತಿಗಳ ನೇಮಕ ಮತ್ತು ಅವುಗಳ ಕ್ರಿಯಾಶೀಲತೆ ಹಾಗೂ ಸರಕಾರದ ಕಾಮರ್ಿಕ ಇಲಾಖೆಯಲ್ಲಿ ಕಾಡರ್್ ಕೊಡಿಸಲು ಶ್ರಮಿಸುವಂತೆ ಕರೆ ನೀಡಿದ್ದು. ಮುಂಬರುವ 2019ರ ಲೋಕಸಭೆ ಚುನಾವಣೆಗೆ ಈ ಜಿಲ್ಲೆಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ರಿಯಾಶೀಲ ಕಾರ್ಯಕರ್ತರನ್ನು ತಯಾರಿ ಮಾಡಬೇಕು ಎಂದು ಸೂಚಿಸದ್ದಾರೆ.