ಲೋಕದರ್ಶನ ವರದಿ
ಬೆಳಗಾವಿ 18: ಕಳೆದ 50 ವರ್ಷಗಳಿಂದ ಶೈಕ್ಷಣೀಕ ಕ್ಷೇತ್ರದಲ್ಲಿ ತನ್ನದೇ ವಿಶೇಷ ಕೊಡುಗೆ ನೀಡುವ ಮೂಲಕ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಸೇವೆ ನೀಡುತ್ತ ಬಂದಿರುವ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಇದೇ ಜ. 23 ರಂದು ಬೆಳಗಾವಿಯಲ್ಲಿ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಗದೀಶ ಸವದತ್ತಿ ಅವರು ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನರ್ಾಟಕ ರಾಜ್ಯದ ಹೆಬ್ಬಾಗಿಲು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಸುಶಿಕ್ಷಿತ ಜನರು ಕೂಡಿ ಸಹಕಾರಿ ತತ್ವದ ಅಡಿಯಲ್ಲಿ 1951 ರಲ್ಲಿ 'ಸನ್ಮತಿ ಶಿಕ್ಷಣ ಸಹಕಾರಿ ಸಮಿತಿ' ಎಂದು ಸಂಸ್ಥೆಯನ್ನು ನೋಂದಾಯಿಸಿದರು. ಹೆಮ್ಮೆಯ ವಿಷಯ ಎಂದರೆ ಇದು ಅಂದಿನ ಮೈಸೂರು ರಾಜ್ಯದಲ್ಲಿ ಪ್ರಪ್ರಥಮ ಸಹಕಾರಿ ಕ್ಷೇತ್ರದ ಅಡಿಯಲ್ಲಿ ಜನ್ಮ ತಾಳಿದ ಶಿಕ್ಷಣ ಸಂಸ್ಥೆಯಾಗಿತ್ತು. ಇದರ ಅಡಿಯಲ್ಲೇ ಮುಂದೆ ಕ್ರಿ. ಶ. 1952 ರಲ್ಲಿ ಸನ್ಮತಿ ವಿದ್ಯಾಲಯ ಎಂಬ ಪ್ರೌಢ ಶಾಲೆಯನ್ನು ಪ್ರಾರಂಭಿಸಿದರು. ಸ್ವಂತ ಕಟ್ಟಡ, ಒಳ್ಳೆಯ ಶೈಕ್ಷಣಿಕ ಪರಿಸರ ಹೊಂದಿದ ಈ ಪ್ರೌಢಶಾಲೆ ದಿನೇ ದಿನೇ ಬೆಳೆಯುತ್ತಾ ಮುನ್ನುಗ್ಗಿ ಇಂದು ಒಂದು ಉತ್ತ್ತಮ ಪ್ರೌಢಶಾಲೆ ಎಂಬ ಕೀತರ್ಿಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದರು.
ಸಂಸ್ಥೆಯು ವಾಣಿಜ್ಯ ಶಿಕ್ಷಣದ ಮಹತ್ವವನ್ನಿಟ್ಟುಕೊಂಡು ಎಲ್ಲರ ಪರಿಶ್ರಮದಿಂದ 1968 ರಲ್ಲಿ ಶೇಡಬಾಳದಲ್ಲಿಯೇ ಒಂದು ವಾಣಿಜ್ಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಬೆಳಗಾವಿ ನಂತರ ಬೆಳಗಾವಿ ಜಿಲ್ಲೆಯಲ್ಲಿಯ ಎರಡನೆಯ ವಾಣಿಜ್ಯ ಮಹಾವಿದ್ಯಾಲಯ ಇದಾಗಿತ್ತು. ಕನರ್ಾಟಕ ವಿಶ್ವವಿದ್ಯಾಲಯದಡಿಯಲ್ಲಿ ಪದವಿ ಪೂರ್ವ ಮತ್ತು ಬಿ. ಕಾಂ. ಮೊದಲನೆಯ ವರ್ಷಕ್ಕೆ 35 ವಿದ್ಯಾಥರ್ಿಗಳಿಂದ ಕೂಡಿದ ಈ ವಾಣಿಜ್ಯ ಮಹಾವಿದ್ಯಾಲಯ ಕಾರ್ಯ ನಿರ್ವಹಿಸಿತು. ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಸಂಸ್ಥೆ ಅನೇಕ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಈ ಗ್ರಾಮೀಣ ಭಾಗದಲ್ಲಿನ ವಿದ್ಯಾಥರ್ಿಗಳಿಗೆ ಅವಶ್ಯಕವಾದ ಉತ್ತಮ ಶಿಕ್ಷಣ ನೀಡಿತು ಎಂದು ಅವರು ತಿಳಿಸಿದರು.
1972 ರಲ್ಲಿನ ಭೀಕರ ಬರಗಾಲ ಈ ಸಂಸ್ಥೆಗೆ ಸಂಚಕಾರ ತಂದೊಡ್ಡಿತು. ಬರಗಾಲದ ಕಾರಣ ಈ ಭಾಗದ ಜನರೆಲ್ಲಾ ಹೊಟ್ಟೆ ತುಂಬಿಕೊಳ್ಳುವುದೇ ದುಸ್ತರವಾಗಿ ಊರು ಬಿಟ್ಟು ಬೇರೆ ಕಡೆ ಗುಳೆ ಹೋಗತೊಡಗಿದರು. ಮಹಾವಿದ್ಯಾಲಯಕ್ಕೆ ಬರುವ ವಿದ್ಯಾಥರ್ಿಗಳ ಸಂಖ್ಯೆಯು ಕುಸಿಯಿತು. 1973-74 ರ ಶೈಕ್ಷಣಿಕ ವರ್ಷದಲ್ಲಿ ಬೆಳಗಾವಿಗೆ ಬಂದ ವಾಣಿಜ್ಯ ಮಹಾವಿದ್ಯಾಲಯ ಮತ್ತೆ ಹಿಂದೆ ನೋಡಲಿಲ್ಲ ಯಶಸ್ಸಿನ ಮೇಲೆ ಯಶಸ್ಸನ್ನು ಸಾಧಿಸುತ್ತ ಹೋಯಿತು. 1986 ರಲ್ಲಿ ಮಹಾವೀರ ಪಿ. ಮಿಜರ್ಿ ಅವರ ದೇಣಿಗೆಯಿಂದ ಈ ವಾಣಿಜ್ಯ ಮಹಾವಿದ್ಯಾಲಯವನ್ನು ಮಹಾವೀರ ಪಿ. ಮಿಜರ್ಿ ವಾಣಿಜ್ಯ ಮಹಾವಿದ್ಯಾಲಯವೆಂದು ನಾಮಕರಣ ಮಾಡಿತು. ತದೇಕವಾಗಿ ಸಂಯುಕ್ತ ಪದವಿ ಮಹಾವಿದ್ಯಾಲಯದಿಂದ ಪದವಿ ಪೂರ್ವ ವಿದ್ಯಾಲಯವನ್ನು ಕನರ್ಾಟಕ ಸಕರ್ಾರವು ಬೇರ್ಪಡಿಸಿದ್ದರಿಂದ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯಕ್ಕೆ ಜಗದೀಶ ಸವದತ್ತಿಯವರು ಬೃಹತ್ ದೇಣಿಗೆ ನೀಡಿದ್ದರಿಂದ 2001 ರಲ್ಲಿ ಸಂಸ್ಥೆಯ ಪದವಿಪೂರ್ವ ವಿದ್ಯಾಲಯವನ್ನು ಜಗದೀಶ ಎ. ಸವದತ್ತಿ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯ ವೆಂದು ನಾಮಕರಣ ಮಾಡಲಾಯಿತು ಎಂದು ಅವರು ಹೇಳಿದರು.
ತದನಂತರ ಸನ್ಮತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬಿ.ಬಿ.ಎ., ಎಂ. ಕಾಂ., ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲಾಗಿದೆ. ಹೆಣ್ಣುಮಕ್ಕಳ ವಸತಿಯ ಸೌಲಭ್ಯಕ್ಕೊಸ್ಕರ ಒಂದು ವಸತಿನಿಲಯವನ್ನು ಕಟ್ಟಿ ದೂರದ ಭಾಗಗಳಿಂದ ಬರುವ ವಿದ್ಯಾಥರ್ಿನಿಯರಿಗೆ ಅನೂಕೂಲ ಮಾಡಿ ಕೊಡಲಾಗಿದೆ. ಅದೇ ರೀತಿಯಾಗಿ ಶೇಡಬಾಳ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪದವಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ. 2018 ರ ವರ್ಷದುದ್ದಕ್ಕೂ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಈಗ ಸುವರ್ಣ ಮಹೋತ್ಸವ ಸಮಾರಂಭವನ್ನು ದಿ.23ರಂದು ಮುಂಜಾನೆ 10.30 ಗಂಟೆಗೆ ನೆಹರು ನಗರದಲ್ಲಿ ಇರುವ 'ಸನ್ಮತಿ ಶಿಕ್ಷಣ ಸಹಕಾರಿ ಸಮಿತಿ' ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೆ ಸಂದರ್ಭದಲ್ಲಿ ಸನ್ಮತಿ ಶಿಕ್ಷಣ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯ ಕಟ್ಟಡದ ಉದ್ಘಾಟನೆಯನ್ನು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಹೆಸರನ್ನು ದಿ.ಶೋಭಾ ಜಗದೀಶ ಸವದತ್ತಿ ಇಂಗ್ಲಿಷ್ ಮಾಧ್ಯಮ ಶಾಲೆ ಎಂದು ನಾಮಕರಣ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಸ್ತಿಶ್ರೀ ಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸೋಂದಾ ಇವರ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಬಿ. ಹೊಸಮನಿಯವರು ಆಗಮಿಸಲಿದ್ದಾರೆ. ಅದೇ ರೀತಿಯಾಗಿ ಅತಿಥಿಗಳಾಗಿ ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಅಭಯಚಂದ್ರ ಜೈನ ಮತ್ತು ಬೆಳಗಾವಿಯ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲರು ಆಗಮಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿಯ ಸಂಸದರಾದ ಸುರೇಶ ಅಂಗಡಿ ಯವರು ವಹಿಸುವರು. ಇದೆ ಸಂಸ್ಥೆಯಲ್ಲಿ ಓದಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾಥರ್ಿಗಳನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. 4.00 ಗಂಟೆಗೆ ಸಂಸ್ಥೆಯ ಎಲ್ಲ ಉದ್ಯೋಗಿಗಳನ್ನು ಸನ್ಮಾನಿಸಲಾಗುವುದಲ್ಲದೆ ವಿದ್ಯಾಥರ್ಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಎಲ್ಲ ಹಳೆಯ ವಿದ್ಯಾಥರ್ಿಗಳು ಮತ್ತು ಸಂಸ್ಥೆಯಿಂದ ನಿವೃತ್ತಿ ಹೊಂದಿದ ಎಲ್ಲ ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸನ್ಮತಿ ಶಿಕ್ಷಣ ಆಡಳಿತ ಮಂಡಳಿಯ ಸದಸ್ಯರಾದ ಮಹಾವೀರ ಹರದಿ, ಡಾ.ಸಾವಿತ್ರಿ ದೊಡ್ಡಣ್ಣವರ, ಅಶೋಕ ಕುಸನಾಳೆ, ಪ್ರಕಾಶ ದೊಡ್ಡಣ್ಣವರ, ಡಾ.ಎ.ಆರ ರೊಟ್ಟಿ ಮೊದಲಾದವರು ಉಪಸ್ಥಿತರಿದ್ದರು.