ಚಿನ್ನದ ಪದಕ ವೀಜೆತ ಸಂದೀಪ ಕುಂಬಾರಗೆ ಸತ್ಕಾರ

ಲೋಕದರ್ಶನ ವರದಿ

ಶೇಡಬಾಳ 24: ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ ಕೇಂದ್ರ ಮೇಲ್ವಿಚಾರಕರ ಸಂಘ ಬೆಂಗಳೂರು ಇದರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಾಬಾಸಾಬ ಅಣ್ಣಪ್ಪಾ ಕುಂಬಾರ ಹಾಗೂ ರಾಷ್ಟ್ರಮಟ್ಟದ ಲಾಂಗಜಂಪ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಸಂದೀಪ ರಾಮು ಕುಂಬಾರ ಇವರ ಸತ್ಕಾರ ಸಮಾರಂಭ ಉಗಾರ ಖುರ್ದ ಪಟ್ಟಣದಲ್ಲಿ ಜರುಗಿತು.

ಶುಕ್ರವಾರ ದಿ. 24 ರಂದು ಉಗಾರ ಖುರ್ದ ಪಟ್ಟಣದ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರ ಸಂಘ ನಿ., ಕಾರ್ಯಾಲಯದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪಣ್ಣ ಕುಂಬಾರ ಹಾಗೂ ಆಡಳಿತ ಮಂಡಳಿ ಸದಸ್ಯರು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ ಕೇಂದ್ರ ಮೇಲ್ವಿಚಾರಕರ ಸಂಘ ಬೆಂಗಳೂರು ಇದರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಲೂಳ ಗ್ರಾಮದ ಬಾಬಾಸಾಬ ಅಣ್ಣಪ್ಪಾ ಕುಂಬಾರ ಹಾಗೂ ರಾಷ್ಟ್ರಮಟ್ಟದ ಲಾಂಗಜಂಪ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಸಪ್ತಸಾಗರ ಗ್ರಾಮದ ಹಳ್ಳಿ ಹೈದ ಸಂದೀಪ ರಾಮು ಕುಂಬಾರ ಅವರನ್ನು ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿದರು. 

ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಗುರುರಾಜ ಕುಂಬಾರ, ಆಡಳಿತ ಮಂಡಳಿ ಸದಸ್ಯರಾದ ಸುಭಾಷ ಕುಂಬಾರ, ರಾವಸಾಬ ಕುಂಬಾರ, ರಾಮಪ್ಪ ಕುಂಬಾರ, ಯೋಗೇಶ ಕುಂಬಾರ, ಬಾಳಪ್ಪ ಕುಂಬಾರ, ಸುನೀತಾ ಕುಂಬಾರ, ಸದಾಶಿವ ಕಾಂಬಳೆ, ಸದಾಶಿವ ಕುಂಬಾರ, ದತ್ತಾ ಕುಂಬಾರ, ಸುಜಾತಾ ಕುಂಬಾರ, ಸುನಂದಾ ಕುಂಬಾರ ಹಾಗೂ ಸಿಬ್ಬಂದಿ ವರ್ಗ, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.