ಭಾರತಕ್ಕೆ ಚಿನ್ನದ ಪದಕ: ಶಶಾಂಕ್ ಹುರಳಿಗೆ ಭವ್ಯ ಸನ್ಮಾನ
Gold medal for India: Shashank Bhurali receives a grand honour
ಲೋಕದರ್ಶನ ವರದಿ
ಶಿಗ್ಗಾವಿ 18 : ತಾಲೂಕಿನ ಪಾಣ್ಣಿಗಟ್ಟಿ ಗ್ರಾಮದ ಯುವ ಪ್ರತಿಭೆ ಕು. ಶಶಾಂಕ್ ಹುರಳಿಯು ಭೂತಾನ್‌ನಲ್ಲಿ ನಡೆದ ಜೂನಿಯರ್ ಏಷ್ಯನ್ ಅಟ್ಯಾ-ಪಟ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಅಭಿನಂದಿಸಿ ಸನ್ಮಾನಿಸಿದರು.
ಸನ್ಮಾನಿಸಿ ಮಾತನಾಡಿದ ಅವರು, ಭಾರತದ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯಾದ ಅಟ್ಯಾ-ಪಟ್ಯಾ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯತೆ ಗಳಿಸುತ್ತಿದ್ದು, ಕರ್ನಾಟಕದ ಯುವಕರು ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಅದೇ ರೀತಿ ಈ ಯುವ ಕ್ರೀಡಾಪಟು ಶಶಾಂಕ್ ಅವರ ಈ ಸಾಧನೆ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿದೆ, ಶಶಾಂಕ್ ಅವರ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿದ್ದು ಅವರ ಕ್ರೀಡಾಸ್ಪೂರ್ತಿ ಇನ್ನೂ ಹೆಚ್ಚನ ಮಟ್ಟದಲ್ಲಿ ಬೆಳೆಯಲಿ ಅವರ ಆಧನೆಗೆ ಪೂರಕ ಸಹಯ ಸಹಕಾರ ನಾವೂ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶೋಭಾ ನಿಶಿಮ್ಮಗೌಡ್ರ, ನಿಂಗನಗೌಡ ದೊಡ್ಮನಿ, ದೇವಣ್ಣ ಚಾಕಲಬ್ಬಿ, ಶಿವಾನಂದ ಸೊಬರದ, ಚಂದ್ರು ಆಚೆಬಣದ, ಚಂದ್ರು ಕೊತಂಬರಿ, ಸಂತೋಷಗೌಡ ಹಿರೇಗೌಡ್ರ, ರೇಣುಕನಗೌಡ ಪಾಟೀಲ, ದೇವು ಸೊರಟೂರ್, ನವೀನ್ ರಾಮಗೇರಿ, ಅನಿಲ ಸಾತಣ್ಣನವರ, ಶರೀಫ್ ನದಾಫ್, ಸತೀಶ್ ಬಾಣದ, ಗುರುರಾಜ್ ಹೊನ್ನಣ್ಣನವರ, ಸಂತೋಷ ದೊಡ್ಡಮನಿ ಸೇರಿದಂತೆ ಶಶಾಂಕ್ ಕುಟುಂಬದವರು, ಸ್ನೇಹಿತರು ಹಾಗೂ ಗ್ರಾಮದ ಮುಖಂಡರು, ಕ್ರೀಢಾಭಿಮಾಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 