ಬಾಗಲಕೋಟೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಡ ವಿಭಾಗದ ಶಾಲಾ ಕುಸ್ತಿ ಪಂದ್ಯಾವಳಿಗಳಲ್ಲಿ ಬಾಗಲಕೋಟೆ ಕ್ರೀಡಾ ಶಾಲೆಯ ಕ್ರೀಡಾಪಟುಗಳು 4 ಚಿನ್ನ, 2 ಬೆಳ್ಳಿ ಹಾಗು 5 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರ ಮಟ್ಟದ ಪ್ರಾಥಮಿಕ ಮತ್ತು ಪ್ರೌಡ ವಿಭಾಗದ ಶಾಲಾ ಕುಸ್ತಿ ಪಂದ್ಯಾವಳಿಗಳಲ್ಲಿಯೂ ಸಹ ಬಾಗಲಕೋಟೆಯ ಕ್ರೀಡಾ ಶಾಲೆಯ ಕಲ್ಪಣಾ ಕೆಂಪನ್ನವರ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ವಿಜಪುರದಲ್ಲಿ ಜರುಗಿದ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಸಹ 2 ಚಿನ್ನ, 2 ಬೆಳ್ಳಿ, ಮತ್ತು 1 ಕಂಚಿನ ಪದಕಗಳನ್ನು ಕ್ರೀಡಾ ಶಾಲೆಯ ಕ್ರೀಡಾಪಟುಗಳು ಪಡೆದುಕೊಂಡಿದ್ದಾರೆ.
ಪದಕ ವಿಜೇತರಾದ ಎಲ್ಲ ಕುಸ್ತಿ ಮತ್ತು ಸೈಕ್ಲಿಂಗ್ ಕ್ರೀಡಾಪಟುಗಳಿಗೂ ಹಾಗೂ ಕುಸ್ತಿ ತರಬೇತುದಾರರಾದ ಕಾಡೇಶ ನ್ಯಾಮಗೌಡ ಹಾಗೂ ಸೈಕ್ಲಿಂಗ್ ತರಬೇತುದಾರರಾದ ಅನಿತಾ ನಿಂಬರಗಿ ಹಾಗೂ ಸಂಗಪ್ಪ ನ್ಯಾಮಗೌಡ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಎಂ.ಎನ್.ಮೇಲಿನಮನಿ ಅಭಿನಂದಿಸಿದ್ದಾರೆ.