ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಗೋಕುಲೋತ್ಸವ, ವೇಷಭೂಷಣ
ಯಲಬುರ್ಗಾ 17: ಶ್ರಾವಣಮಾಸವು ಧ್ಯಾನ, ಜಪ, ಯೋಗ ಸಾಧನೆಗೆ ಬಹು ಪ್ರಶಸ್ತವಾದ ಮಾಸ ಈ ವೇಳೆ ಆಗಮಿಸುವ ಹಬ್ಬಗಳನ್ನು ಆಚರಿಸುವುದರಿಂದ ಭವಿಷ್ಯದಲ್ಲಿ ಸದ್ಗತಿ ದೊರೆಯುತ್ತದೆ ಎಂದು ಹಿಂದು ಸೇವಾ ಪ್ರತಿಷ್ಠಾನದ ಬಳ್ಳಾರಿ ಕೊಪ್ಪಳ ವಿಭಾಗ ಸಂಚಾಲಕರಾದ ಭೀಮರಾವ್ ದೇಶಪಾಂಡೆ ಹೇಳಿದರು.
ಪಟ್ಟಣದ ಶ್ರೀಧರ ಮುರಡಿ ಮಠದಲ್ಲಿ ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಶನಿವಾರ ನಡೆದ ಗೋಕುಲೋತ್ಸವ ಕಾರ್ಯಕ್ರಮದ ಪ್ರಯುಕ್ತ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಕೃಷ್ಣನ ಭವ್ಯ ಚರಿತಾಮೃತ ಕುರಿತು ವಿವರಿಸಿದರು. ಶಾಲಾ ಮಕ್ಕಳು ಶ್ರೀಕೃಷ್ಣ, ರುಕ್ಮಿಣಿ, ರಾಧೆಯರ ವೇಷಭೂಷಣ ಧರಿಸಿ ನೋಡುಗರ ಮನಸೆಳೆದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಮಹಿಳಾ ಮುರ್ಚಾ ಅಧ್ಯಕ್ಷೆ ಸಂತೋಷಿಮಾ ಜೋಶಿ, ಬಸವಲಿಂಗೇಶ್ವರ ಅಕ್ಕನ ಬಳಗ ಅಧ್ಯಕ್ಷರಾದ ಸವಿತಾ ಮುರಡಿಮಠ್, ಬಸವಲಿಂಗೇಶ್ವರ ಶಾಲೆಯ ಮುಖ್ಯಗುರುಗಳು ಸುನೀತಾ ಪತಂಗರಾಯ್, ಧರ್ಮಸ್ಥಳ ಸಂಘದ ಮ್ಯಾನೇಜರ್ ಗೀರೀಶ್ , ಈರನಗೌಡ ಈಳಿಗೇರ್ ಸೇರಿ ಮಕ್ಕಳ ಪಾಲಕರು, ಪೋಷಕರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 