“ಗೋಕಾವಿ ಹೊಳಿಸಾಲು” ಗ್ರಂಥ ಜನಾರೆ​‍್ಣ

“ಗೋಕಾವಿ ಹೊಳಿಸಾಲು” ಗ್ರಂಥ ಜನಾರೆ​‍್ಣ Gokavi Holisalu’ Book Launch

ಲೋಕದರ್ಶನ ವರದಿ 

“ಗೋಕಾವಿ ಹೊಳಿಸಾಲು” ಗ್ರಂಥ ಜನಾರೆ​‍್ಣ 

ಗೋಕಾಕ 12: ಗೋಕಾವಿ ನಾಡಿನ ಸಮಗ್ರ ಮಾಹಿತಿಯುಳ್ಳ “ಗೋಕಾವಿ ಹೊಳಿಸಾಲು” ಗ್ರಂಥವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತರು ಹಾಗೂ ಹಿರಿಯ ಸಾಹಿತಿ ಅಶೋಕಬಾಬು ನೀಲಗಾರ ಅವರು ಜನಾರೆ​‍್ಣಗೊಳಿಸಿದರು.  

ಅವರು ಸಮೀಪದ ದುರದುಂಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗೋಕಾವಿ ಗೆಳೆಯರ ಬಳಗ, ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಗೋಕಾಕ, ಸರಕಾರಿ ಪ್ರೌಢಶಾಲೆ ದುರದುಂಡಿ ಕಥೀ. ಕಥೀ, ಕಾರಣ? ಶಾಲೆಗೊಂದು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ಜಯಾನಂದ ಮಾದರ ಅವರ ಗೋಕಾವಿ ಹೊಳಿಸಾಲು ಗ್ರಂಥ ಜನಾರೆ​‍್ಣಗೊಳಿಸಿದ ನಂತರ ಮಾತನಾಡಿದ ಅವರು ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿಯೂ ಸೇರಿದಂತೆ ಅನೇಕ ಕ್ಷೇತ್ರದಲ್ಲಿನ ಇತಿಹಾಸವನ್ನು ಒಳಗೊಂಡ “ಗೋಕಾವಿ ಹೊಳಿಸಾಲು” ಗ್ರಂಥವು ಜನಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆತಮಿಸಿದ ಹಿರಿಯ ಸಾಹಿತಿ ಲಕ್ಷ್ಮಣ ಚೌರಿ ಅವರು ಮಾತನಾಡಿ ಒಳ್ಳೇಯ ಕೃತಿಯನ್ನು ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಸಾಹಿತಿ ಜಯಾನಂದ ಮಾದರ ಅವರ ನಾಡಾಭಿಮಾನ ಸಂಕೇತವೆಂದು ಹೇಳಿದರಲ್ಲದೇ ಭಾರತೀಯ ಸಂಸ್ಕೃತಿಯಲ್ಲಿ 64 ಕಲೆಗಳ ಅಧ್ಯಯನವನ್ನು ಜಯಾನಂದರು ಪರಿಚಯಿಸಿದ್ದಾರೆ. ಅವರು ಇವರು ಎನ್ನದೇ ಎಲ್ಲರೂ ತನ್ನವರೆಂದು ಹಿರಿತನವನ್ನು ಮರೆತು ಕಿರಿಯರಾಗಿರುವುದರಲ್ಲಿಯೇ ಪ್ರಭುದ್ಧತೆಯನ್ನು ಸಾಧಿಸಿದ, ಸೃಜನಶೀಲ ವ್ಯಕ್ತಿತ್ವದ ಸಮಾಜದ ಶಕ್ತಿ ಜಯಾನಂದ ಮಾದರಎಂದು ಹೇಳಿದರು. ಸಾಹಿತಿ ವಿದ್ಯಾ ರೆಡ್ಡಿ ಅವರು ಗ್ರಂಥದ ಕುರಿತು ಮಾತನಾಡಿ ಸಾಹಿತ್ಯ ಸಿರಿ, ರಂಗ ಪರಿಸರ, ಕಲೆ, ಸಂಸ್ಕೃತಿ, ಸಾಂಸ್ಕೃತಿಕ ವೈಭವ, ಕ್ಷೇತ್ರ ದರ್ಶನ, ರಾಜಕೀಯ ಪರಿಚಯ, ಗೋಕಾವಿ ಜಾತ್ರೆ ಸೇರಿದಂತೆ ಸಮಗ್ರ ಮಾಹಿತಿಯುಳ್ಳ ಹಾಗೂ ಪ್ರತಿಯೊಬ್ಬರೂ ಓದಲೇ ಬೇಕಾದ ಗ್ರಂಥ ಇದಾಗಿದೆ ಎಂದರು. ಜಾನಪದ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಮಾತನಾಡಿ ಈ ಕಾರ್ಯಕ್ರಮವು ಪ್ರೌಢಶಾಲೆಯಲ್ಲಿಯೇ ಏಕೆ ಆಯೋಜನೆ ಮಾಡಬೇಕು. ಪ್ರೌಢಾ ವ್ಯವಸ್ಥೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಾಹಿತ್ಯದ ಪ್ರಜ್ಞೆ, ಅದರ ಆಸಕ್ತಿ ಹೊಂದಲಿ ಎಂಬ ಹಿತದೃಷ್ಠಿಯಿಂದ ಈ ಕಾರ್ಯಕ್ರವನ್ನು ಪ್ರತಿಯೊಂದ ಪ್ರೌಢಶಾಲಾ ಮಟ್ಟದಲ್ಲಿ ಆಯೋಜನೆ ಮಾಡುವ ಮೂಲಕ ಜಯಾನಂದ ಮಾದರ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.  ಪ್ರಾಸ್ತಾವಿಕವಾಗಿ ಜಾನಪದ ಕಲಾವಿದ ಉದ್ದಣ್ಣಾ ಗೋಡೇರ ಮಾತನಾಡಿದರು. ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕ ಆನಂದ ಸೋರಗಾಂವಿ ಅವರು ತಮ್ಮ ಯೋಗ ಶಾಲೆಯ ವಿದ್ಯಾರ್ಥಿಗಳಿಂದ ಯೋಗದ ಆಯಾಮಗಳನ್ನು ಪ್ರದರ್ಶಿಸಿದರು. ವೇದಿಕೆ ಮೇಲೆ ಮುಖ್ಯೋಪಾಧ್ಯಾಯ ಎಂ.ಸಿ.ಅಗಸಗಿ, ಎಸ್‌.ಆರ್‌.ನಲವಡೆ, ಗಣಪತಿ ಉಪ್ಪಾರ, ವಿಠ್ಠಲ ಕರೋಶಿ, ಜ್ಯೋತಿ ಕೌಜಲಗಿ ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಎಂ.ಕೆ.ವಡೇರ ಸ್ವಾಗತಿಸಿದರು. ಶಿಕ್ಷಕ ಗೌಸಖಾಧೀರ ಮಿರ್ಜಾಭಾಯಿ ನಿರೂಪಿಸಿದರು. ಶಿಕ್ಷಕ ಕೆ.ಡಿ.ಕೆಂಗಾರೆ ವಂದಿಸಿದರು.