ಅಪಾರ ಭಕ್ತರ ಆರಾಧ್ಯ ದೇವಿ ದಾನಮ್ಮ ದೇವಿ ಜಾತ್ರಾ ಮಹೋತ್ಸವ

Goddess Danamma Devi Fair

ಮಹಾಲಿಂಗಪುರ ದಾನಮ್ಮ ದೇವಿ ಜಾತ್ರೆ 

ಮಹಾಲಿಂಗಪುರ 06: ಗುಡ್ಡಾಪುರದ ಒಡತಿ ಮಹಿಳೆಯರ ಪಾಲಿನ ಮಹಾದೈವ ಶ್ರೀ ದಾನಮ್ಮ ದೇವಿ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದು ಹನ್ನೆರಡನೆಯ ಶತಮಾನದ ಮಹಾ ಶರಣಿ ತಾಯಿ ದಾನಮ್ಮ ನಿರ್ಮಲ ಭಕ್ತಿಯಿಂದ ಬೇಡಿ ಬರುವ ಭಕ್ತರಿಗೆ ಸಕಲ ಸೌಭಾಗ್ಯ ಕರುಣಿಸುವ ತಾಯಿ ದಾನಮ್ಮ. 

ಸ್ಥಳೀಯ ಬಸ್ ನಿಲ್ದಾಣದ ಹತ್ತಿರವಿರುವ ಮರೆಗುದ್ದಿ ಪ್ಲಾಟಿನಲ್ಲಿರುವ ಶ್ರೀ ದಾನಮ್ಮದೇವಿ ಜಾತ್ರೆ ಅತೀ ವಿಜೃಂಭಣೆಯಿಂದ ಜರುಗಿತು. 

ಉಡಿ ತುಂಬುವ ಕಾರ್ಯ : ದೇವಿ ಜಾತ್ರೆ ನಿಮಿತ್ಯ ಸಾವಿರಾರು ಮುತೈದೆಯರಿಗೆ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾದರು. 

ಮಹಾಲಿಂಗಪುರಕ್ಕೆ ಬಂದ ದಾನಮ್ಮ : ನಗರದ ಮರೆಗುದ್ದಿಯವರ ತೋಟದಲ್ಲಿರುವ ಬಾಂವಿಯ ಮಾಡಿನಲ್ಲಿ ಒಂದು ದಾನಮ್ಮ ದೇವಿ ಫೋಟೋ ಇಟ್ಟು ಪೂಜಿಸಲಾಗುತಿತ್ತು. ಒಂದು ದಿನ ಯಾರೋ ಅದನ್ನು ಭಾಂವಿಗೆ ಎಸೆದು ಬಿಟ್ಟರು ನಂತರ ನಡೆದಿದ್ದೆ ಪವಾಡ ದೇವಿ ದಿನ ನಿತ್ಯವೂ ಮರೆಗುದ್ದಿಯವರ ಹೆಣ್ಣು ಮಗಳ ಕನಸ್ಸಿನಲ್ಲಿ ಬಂದು ನನ್ನನ್ನು ಏಕೆ ಬಾಂವಿಗೆ ಎಸೆದಿರಿ ಎಂದು ಕೆಳ ತೊಡಗಿದಳು. ನಾನು ಇಲ್ಲೇ ನೆಲೆಸುತ್ತೇನೆ ನನ್ನನ್ನು ಪುನ್ಹ ತಂದು ಪ್ರತಿಷ್ಠಾಪನೆ ಮಾಡು ಎಂದು ನಿತ್ಯವು ಭೇಡ ತೊಡಗಿದಾಗ ಮರೆಗುದ್ದಿಯರು ಮತ್ತೆ ಒಂದು ದಾನಮ್ಮ ದೇವಿ ಫೋಟೋ ತಂದು ಬಾಂವಿಯ ಮಾಡಿನಲ್ಲಿಟ್ಟು ಪೂಜಿಸ ತೊಡಗಿದಾಗ ಕನಸ್ಸಿನಲ್ಲಿ ಬರುವುದು ನಿಲ್ಲಿಸುತ್ತಾಳೆ ತಾಯಿ ದಾನಮ್ಮ ಭಕ್ತರಿಗೆ ಮತ್ತೆ ದರ್ಶನ ಕೊಡತೊಡಗಿದಳು. 

ಇದು ಬೃಹತ ಪ್ರಮಾಣದಲ್ಲಿ ನಡೆಯುವ ಜಾತ್ರೆ ದಾನಮ್ಮನ ಇರುವಿಕೆಗೆ ಸಾಕ್ಷಿಯಾಗಿದೆ ಅಪಾರ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. 

ಈ ಸಂಧರ್ಭದಲ್ಲಿ ಊರಿನ ಎಲ್ಲ ವರ್ಗದ ಜನರು ಭಕ್ತಿಯಿಂದ ಸೇರಿ ದೇವಿ ಜಾತ್ರೆ ಯಶಸ್ಸುಗೊಳಿಸಿದರು. ಇದೇ ಸಂಧರ್ಭದಲ್ಲಿ ಶೇಖರ ಅಂಗಡಿ, ಸಿದ್ದು ಶಿರೋಳ, ಅಶೋಕ ದಿನ್ನಿಮನಿ, ಚಿದಾನಂದ ಚಿಂದಿ, ದುಂಡಪ್ಪ ಬಂಡಿ, ವಿರೂಪಾಕ್ಷಯ್ಯಾ ಪಂಚಕಟ್ಟಿಮಠ, ಮಹೇಶ ಸವದಿ, ಪ್ರಭು ಕುಳ್ಳೊಳ್ಳಿ,ಎಸ್ ಬಿ ಮಠಗಾರ,ಜಿ ಎ ಮಠಪತಿ,ಚೇತನ ಸುಣದೊಳಿ, ಪ್ರಶಾಂತ ಅಂಗಡಿ, ಬಸು ಪರಿಟ್, ದಯಾನಂದ ಕಲ್ಲೇದ, ಅರ್ಜುನ ಪವಾರ, ಬಸು ಹೊಳ, ಸೇರಿದಂತೆ ಹಲವರು ಇದ್ದರು.