ಕಂಪ್ಲಿ:08 ತಾಲ್ಲೂಕಿನಾದ್ಯಂತ ಹಿಂದೂ ಮುಸ್ಲಿಂ ಭಾಂದವರು ಭಾವೈಕ್ಯತೆಯ ಸಂಕೇತವಾದ ಮೋಹರಂ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಸೋಮವಾರ ಆಚರಿಸಲಾಯಿತು.
ಪ್ರತಿವರ್ಷದಂತೆ ಈಸಲ ಕೂಡ ಪೀರಲು ದೇವರ ಹಬ್ಬ ಅತ್ಯಂತ ವಿಜೃಂಭಣೆಯಿಂದ ಜರುಗಿತು ಪೀರಲು ದೇವರಿಗೆ ಹರಕೆ ಮತ್ತು ಹೂವಿನ ಹಾರಗಳನ್ನು ಹಾಕುವ ಮೂಲಕ ಭಕ್ತಾಧಿಗಳು ಸಮರ್ಪಕವಾಗಿ ಭಕ್ತಿ ಅರ್ಪಿಸಿದರು ಮೋಹರಂ ಹಬ್ಬದ ನಿಮಿತ್ಯ ಭಕ್ತರು ಹುಲಿ ವೇಷ ಬಣ್ಣ ಹಚ್ಚಿಸಿಕೊಳ್ಳಲು ನಿರತರಾಗಿದ್ದರು ಜೀನುಗಾರ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ ಇತ್ತು ಕಲಾವಿದರಾದ ಶಾರದಮ್ಮ ಶೀಲಬಾಯಿ ಕಮಲಮ್ಮ.ಪ್ರಸಾದ ಪಾಂಡುರಂಗ ರವರು ಹುಲಿವೇಷದ ಬಣ್ಣ ಹಚ್ಚುತ್ತಿದ್ದಾರೆ ಕಂಪ್ಲಿ . ಮೆಟ್ರಿ. ರಾಮಸಾಗರ .ನಂ10 ಮುದ್ದಾಪುರ ದೇವಾಲಪುರ ಚಿಕ್ಕಜಂತಕಲ್.ಸೇರಿದಂತೆ ತಾಲೂಕಿನ ಪ್ರತಿಯೊಂದು ಗ್ರಾಮದ ಯವಕರು.ಮತ್ತು ಮಕ್ಕಳು ವೃದ್ದರು ಹುಲಿ ವೇಷ ಬಳಿಸಿಕೊಳ್ಳಲು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂತು ಕಳೆದ ಸುಮಾರು 60ರಿಂದ70 ವರ್ಷಗಳಿಂದ ಪರುಶುರಾಮಪ್ಪ ಚಿತ್ರಗಾರ ಕಲಾವಿದರಾದ ಪರಶುರಾಮಪ್ಪ ಚಿತ್ರಗಾರ್ ಕುಟುಂಬದ, ರಾಮಕೃಷ್ಣಪ್ಪ ಚಿತ್ರಗಾರ, ರಾಮಚಂದ್ರ ಚಿತ್ರಗಾರ, ರಾಘವೇಂದ್ರ ಚಿತ್ರಗಾರ, ರವಿ ಚಿತ್ರಗಾರ, ರಾಮು ಚಿತ್ರಗಾರ, ಸುಮಂತ್ ಚಿತ್ರಗಾರ ಸುಮಾರು 40 ವರ್ಷಗಳಿಂದ ಇದೇ ಕಾಯಕದಲ್ಲಿ ನಿರತರಾಗಿದ್ದಾರೆ ಕಲಾವಿದರಿಂದ ಹುಲಿ ವೇಷದ ಬಣ್ಣ ಬರೆಯತ್ತಾ ಬಂದಿರುವುದು ವಿಶೇಷವಾಗಿದೆ ಮೊಹರಂ ಹಬ್ಬದಲ್ಲಿ 200ರಿಂದ 300 ಜನಗಳಿಗೆ ಹುಲಿವೇಷ ಹಾಕುತ್ತಾರೆ ಅಲ್ಲದೆ ಹುಲಿ ಮುಖಕ್ಕೆ ಬಣ್ಣ ಬರೆಯುತ್ತಾ ಬಂದಿರುವುದು ವಿಶೇಷವಾಗಿದೆ.
ಮೊಹರಂ ಹಬ್ಬದ ಒಂಭತ್ತನೇ ದಿನ ಕತ್ತಲ ರಾತ್ರಿ ಆಚರಣೆಗೆ ಬೆಲ್ಲದ ಹಾಲಿನ ಬಿಂದಿಗೆ, ಕೆಂಪು ಸಕ್ಕರೆ, ಲಾಡಿ, ಬೆಳ್ಳಿ ಛತ್ರಿ, ಕುದುರೆ, ಕೆಂಪು ವಸ್ತ್ರ ಇತ್ಯಾದಿ ಪೂಜಾ ಸಾಮಾಗ್ರಿ ಕೊಳ್ಳುವ ಭರಾಟೆಯಲ್ಲಿ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಸಂಚರಿಸುವ ದೃಶ್ಯ ಕಂಡುಬಂತು.