ದೇವರು ಒಬ್ಬನೇ: ಪ್ರಭುಜಿ ಮಹಾರಾಜರು

ಸಂಗಮೇಶ್ವರ ಮಹಾರಾಜರ ಚಲನಚಿತ್ರದ ವಿಡಿಯೋ ಬಿಡುಗಡೆ ಸಮಾರಂಭ

ಜಮಖಂಡಿ 26: ರಾಮ, ರಹೀಮ, ಅಲ್ಲಾ ಎಂದು ಹೊಡೆದಾಡಬೇಡಿ ದೇವರು ಒಬ್ಬನೇ ಇದ್ದಾನೆ. ದೇವರ ನಾಮ ಸ್ಮರಣೆ ಮಾಡಬೇಕು ಅವಾಗ ಮಾತ್ರ ನಮಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಸಂಗಮೇಶ್ವರ ಮಠ ಹಿಪ್ಪರಗಿಯ ಪ್ರಭುಜಿ ಮಹಾರಾಜರು ಹೇಳಿದರು. 

ತಾಲೂಕಿನ ಸಮೀಪ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ, ಸಪ್ತಾಹ, ಮಹಾಮಂಗಳ ಕಾರ್ಯಕ್ರಮ ಹಾಗೂ ಸಂಗಮೇಶ್ವರ ಮಹಾರಾಜರ ಚಲನಚಿತ್ರದ ವಿಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. 

ಸಂಗಮೇಶ್ವರ ಮಹಾರಾಜರು ಜಾತಿ ,ಮತ ,ಪಂಥ ಎನ್ನದೇ ಎಲ್ಲಾ ಶೋಷಿತ ವರ್ಗದವರಿಗೆ, ಬಡವರು ದೀನ ದಲಿತರು, ಶೋಷಣೆ ಒಳಗಾದವರು, ಹಿಂದುಳಿದವರು ಹೀಗೆ ಎಲ್ಲರ ಸೇವೆಯನ್ನು ಮಾಡಿದ್ದಾರೆ. ನಾನು, ನನ್ನದು, ಎನ್ನುವುದನ್ನು ಮರೆತು ಬಿಡಬೇಕು. ಆಗ ನೀವೇ ಬ್ರಹ್ಮರಾಗುತ್ತೀರಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಯಾರು ಯಾವುದೇ ತಾರತಮ್ಯವನ್ನು ಮಾಡಬಾರದು. ಅವಾಗ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ನಾವು ಯಾವುದಾದರೂ ಸಾಧನೆಯನ್ನು ಮಾಡಬೇಕಾದರೆ ದಿನಾಲು ಬೇಗನೆ ಎದ್ದು ನಮ್ಮ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಆಗ ಮಾತ್ರ ಯಾವುದಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಡಬೇಕು, ನಮ್ಮ ಆತ್ಮದಲ್ಲಿ ಸುಖ, ಶಾಂತಿ, ನೆಮ್ಮದಿ ಇದೆ ನಾವೆಲ್ಲರೂ ಕೂಡಿ ಸುಖ ಸಮೃದ್ಧಿಯಾದ ನಾಡನ್ನು ಕಟ್ಟೋಣ ಎಂದು ಆಶೀರ್ವಚನ ನೀಡಿದರು. 

ಆನಂದ ಸಿದ್ದ ಮಹಾರಾಜರು ಕಾಡ ಸಿದ್ಧೇಶ್ವರ ಮಠ ಮಹಾರಾಜರು ಆಶೀರ್ವಚನ ನೀಡಿದರು. ಸಂಗಮೇಶ್ವರ ಮಹಾರಾಜರ ಸಿನಿಮಾದ ಹಾಡು ಬಿಡುಗಡೆ ಮಾಡಲಾಯಿತು.  

ಇದೇ ಸಂದರ್ಭದಲ್ಲಿ ಸುದರ್ಶನ ಮಹಾರಾಜ ಕಡಕಿ, ಆನಂದಸಿದ್ದ ಮಹಾರಾಜ ಅಸುರ್ಲೆ, ಮಹಾದೇವ ಮಹಾರಾಜ ನಂದಗಾಂವ,ಪ್ರಕಾಶ್ ಮಹಾರಾಜರು ಗೋವಾ,ವಿವೇಕಾನಂದ ಮಹಾರಾಜರು ಹಾಲಳ್ಳಿ,ಚಿಕ್ಕಯ್ಯ ಮುತ್ಯಾ ಸಾರವಾಡ,ಬಾಳಪ್ಪ ಮಹಾರಾಜರು ಬಂಡಿವಾಡ ,ಸಿದ್ದಾರೂಢ ಶರಣರು ಹಿಪ್ಪರಗಿ,ಸಿದ್ದಲಿಂಗ ಮಹಾರಾಜರು ಹಿಪ್ಪರಗಿ,ಪ್ರದೀಪ ಮೇಟಗುಡ್ಡ, ಸಂಗಪ್ಪ ದೇಸಾಯಿ,ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ, ಗೀರೀಶ ಜಿಡ್ಡಿಮನಿ,ಭಾವುರಾಜ ಜಿಡ್ಡಿಮನಿ, ನಟ ವಿಶ್ವಪ್ರಕಾಶ ಟಿ ಮಲಗೊಂಡ, ನಿರ್ದೇಶಕ ರಾಜರವಿಶಂಕರ, ರವೀಂದ್ರ ಸೊರಗಾವಿ, ಎ, ಟಿ, ರವೀಶ, ಸೇರಿದಂತೆ ಸಾಧು ಸತ್ಪುರುಷರು ಗಣ್ಯರು ,ಗೋವಾ, ಮಹಾರಾಷ್ಟ್ರ, ಉತ್ತರ ಭಾರತದ ಭಕ್ತರು, ಹಾಗೂ ಊರಿನ ಗುರುಹಿರಿಯರು, ಮಹಿಳಾ ಮಾತೇಯರು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.