ಬೆಳಗಾವಿ 08: ಗೋವಾ ರಾಜ್ಯದ ನೀರಾವರಿ ಇಲಾಖೆ ಸೇರಿ 8 ಜನ ತಂಡದ ಅಧಿಕಾರಿಗಳು ಖಾನಾಪುರ ತಾಲೂಕಿನ ಕಣಕುಂಬಿ ಪ್ರದೇಶದ ಕಳಸಾ ಬಂಡೂರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿರುವುದು ಬುಧವಾರ ಬಯಲಾಗಿದೆ.
ಎರಡು ವಾಹನಗಳಲ್ಲಿ ಗೋವಾ ರಾಜ್ಯದಿಂದ ಆಗಮಿಸಿದ್ದ ಗೋವಾ ಅಧಿಕಾರಿಗಳ ತಂಡ ಕಣಕುಂಬಿಯ ಕಳಸಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕನರ್ಾಟಕದ ಅಧಿಕಾರಿಗಳಿಗೆ ಮಾಹಿತಿ ನೀಡದೇ ಗೋವಾ ಅಧಿಕಾರಿಗಳು ಕಳಸಾ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟಿರುವುದು ಚಚರ್ೆಗೆ ಗ್ರಾಮವಾಗಿದೆ.
ಗೋವಾ ಅಧಿಕಾರಿಗಳ ಭೇಟಿ ಬಗ್ಗೆ ಮಾಹಿತಿ ಸಿಗುದಿದ್ದಂತೆ ಕನರ್ಾಟಕದ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಖಾನಾಪುರ ಪೊಲೀಸರು ಕಣಕುಂಬಿಗೆ ತೆರಳಿದಿದ್ದಾರೆ. ಆದರೆ ಅಷ್ಟರಲ್ಲಿ ಗೋವಾ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗುತ್ತಿದೆ.
ಮೊದಲ ಪುಟದಿಂದ
ಶೀಘ್ರದಲ್ಲೇ ಮಹದಾಯಿ ನ್ಯಾಯಾಧಿಕರಣದ ತೀಪರ್ು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಗೋವಾ ಅಧಿಕಾರಿಗಳು ಭೇಟಿ ನೀಡಿರುವ ಸಾಧ್ಯತೆ ಇದೆ. ಪದೇ ಪದೆ ಕನರ್ಾಟಕದ ಕಳಸಾ ಪ್ರದೇಶಕ್ಕೆ ಗುಪ್ತವಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವ ಗೋವಾ ಸಕರ್ಾರದ ಕ್ರಮ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಣಕುಂಬಿಯ ಕಳಸಾ ಕಾಮಗಾರಿ ಸ್ಥಳಕ್ಕೆ ಗೋವಾ ಅಧಿಕಾರಿಗಳ ತಂಡ ಗುಪ್ತ ಭೇಟಿಯನ್ನು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಸಮಥರ್ಿಸಿಕೊಳ್ಳುವ ಮೂಲಕ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಕಣಕುಂಬಿಗೆ ಅಧಿಕಾರಿಗಳ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಪ್ರತಿಕ್ರಿಯಿಸಿರುವ ಸಚಿವ ವಿನೋದ ಪಾಲೇಕರ್, ಕಣಕುಂಬಿಗೆ ನಮ್ಮ ಅಧಿಕಾರಿಗಳು ಭೇಟಿ ನೀಡಿರುವುದು ನಿಜ. ಆದರೆ ನಿಯೋಗದಲ್ಲಿದ್ದ ಅಧಿಕಾರಿಗಳನ್ನು ಕನರ್ಾಟಕ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಎಸ್ಪಿ ಸುಧೀರಕುಮಾರ್ ರೆಡ್ಡಿ, ಗೋವಾ ನಿಯೋಗ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿರುವುದು ನಿಜ. ಆದರೆ ಗೋವಾದ ಯಾರೊಬ್ಬ ಅಧಿಕಾರಿಯನ್ನೂ ನಾವು ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಮಹದಾಯಿ ನ್ಯಾಯಾಧೀಕರಣ ತೀಪರ್ಿಗೆ ದಿನಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂಥ್ ಇಂದು ಕಣಕುಂಬಿಗೆ ಭೇಟಿ ನೀಡಿದರು. ಎಡಿಜಿಪಿ ಕಮಲ್ ಪಂಥ್ಗೆ ಐಜಿಪಿ ಅಲೋಕ ಕುಮಾರ್, ಎಸ್ಪಿ ಸುಧೀರ ಕುಮಾರ್ ರೆಡ್ಡಿ ಸಾಥ್ ನೀಡಿದರು. ಕಳಸಾ ಕಾಮಗಾರಿ ಪರಿಶೀಲನೆ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿದರು.