ಲೋಕದರ್ಶನ ವರದಿ
ಕೊಪ್ಪಳ 21: ಗೋವುಗಳ ರಕ್ಷಣೆ ಈ ದೇಶದ ಪ್ರತಿಯೊಬ್ಬ ಪ್ರಜೆಗಳ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಇದನ್ನು ರಕ್ಷಣೆ ಮಾಡಿ ಬೆಳವಣಿಗೆ ಹಾದಿಯತ್ತ ಕೊಂಡೊಯ್ಯಬೇಕು. ಗೋ ರಕ್ಷಣೆ ಮತ್ತು ಬೆಳವಣಿಗೆ ರೈತರಿಗೆ ವರದಾನವಾಗಿದೆ ಎಂದು ಹಿರಿಯ ಸಮಾಜ ಸೇವಕ ಹೇಮರಾಜ ಶರ್ಮಾ ಹೇಳಿದರು.
ಅವರು ಮಂಗಳವಾರದಂದು ತಮ್ಮ ಸಂಸ್ಥೆಯ ವತಿಯಿಂದ ನಿರ್ಮಿಸಿರುವ ಗೋಶಾಲೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ಪ್ರಯುಕ್ತ ಹೋಮ, ಹವನ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ ಸಂದರ್ಭದಲ್ಲಿ ಮಾತನಾಡಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಗೋವುಗಳಿಂದ ಹಾಲು, ಗೋಮೂತ್ರ, ಗೊಬ್ಬರ ಸಿಗುತ್ತದೆ. ಹಾಲು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಅವಶ್ಯಕ. ಗೋ ಮೂತ್ರದಲ್ಲಿ ರೋಗ ನಿವಾರಕ ಶಕ್ತಿ ಅಡಗಿದೆ. ಮತ್ತು ಗೊಬ್ಬರದಿಂದ ಫಲವತ್ತಾದ ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ಗೋವುಗಳ ರಕ್ಷಣೆ ಮತ್ತು ಬೆಳವಣಿಗೆ ಅವಶ್ಯಕವಾಗಿದೆ ಎಂದ ಅವರು, ನಮ್ಮ ನೂತನ ಗೋಶಾಲೆಯಲ್ಲಿ ಸುಮಾರು 125 ಗೋವುಗಳು ಇವೆ. ಪ್ರತಿದಿನ ಸುಮಾರು 150 ಲೀಟರ್ ಹಾಲು ಕೊಡುತ್ತದೆ. ಹಾಲು ಮಾರಾಟದಿಂದ ಬಂದ ಹಣ ಗೋಶಾಲೆ ನಿರ್ವಹಣೆ ಮತ್ತು ಮೇವುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ಹೇಮರಾಜ ಶಮರ್ಾ ವಿವರಿಸಿದರು.
ನೂತನ ಗೋಶಾಲೆ ಕಟ್ಟಡದ ನಿಮರ್ಾಣದ ಪ್ರಯುಕ್ತ ಸೋಮವಾರ ಹೋಮ, ಹವನ, ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಮಂಗಳವಾರದಂದು ಸಾರ್ವಜನಿಕರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಗಿ ಇದರಲ್ಲಿ ದೇವಪ್ಪ ಕಟ್ಟಿಮನಿ, ಸಿದ್ದಲಿಂಗ ರೆಡ್ಡಿ ಸೇರಿದಂತೆ ಅನೇಕ ಜನ ರೈತರು ಮತ್ತು ರೈತಾಪಿ ವರ್ಗದ ಕುಟುಂಬಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು ಪಾಲ್ಗೊಂಡಿದ್ದರು.