ಡಿ22ರಂದು ಗೋ ಗ್ರೀನ್.. ಗೋ ಸಿಎನ್ಜಿ ಮ್ಯಾರಥಾನ್

ಲೋಕದರ್ಶನ ವರದಿ

ಬೆಳಗಾವಿ: ಮೆಗಾ ಇಂಜಿನಿಯರಿಂಗ್ ಮತ್ತು ಇನಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಹಸಿರು ಬೆಳಗಾವಿ-ಸ್ವಚ್ಛ ಬೆಳಗಾವಿ ಘೋಷವಾಕ್ಯದಡಿ ಡಿ.22ರಂದು ಸಂಜೆ 6.30ಕ್ಕೆ ನಗರದಲ್ಲಿ ಗೋ ಗ್ರೀನ್.. ಗೋ ಸಿಎನ್ಜಿ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಮೆಘಾ ಗ್ಯಾಸ್ ಸಹಾಯಕ ವ್ಯವಸ್ಥಾಪಕ ಕಾಮಿಲಪಾಶಾ ಪಟೈತ್ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗಾವಿಯಲ್ಲಿ ಪ್ರಥಮ ಸಿಎನ್ಜಿ ಸ್ಟೇಶನ್ ಸಂಕಮ ಹೋಟೆಲ್ ಹತ್ತಿರ ಆರಂಭಗೊಂಡಿದೆ. ಮುಂದಿನ ಆಥರ್ಿಕ ವರ್ಷದಲ್ಲಿ ನಗರದಲ್ಲಿ ಮತ್ತೆ ನಾಲ್ಕು ಸ್ಟೇಶನ್ಗಳನ್ನು ಪ್ರಾರಂಭಿಸಲಾಗುವುದು. ಕೇಂದ್ರ ಸಕರ್ಾರ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಡಿಸೇಲ್ ಹಾಗೂ ಪೆಟ್ರೋಲ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಸಿರು ಇಂಧನಕ್ಕೆ ಆದ್ಯತೆ ನೀಡುತ್ತಿದೆ. ಸಿಎನ್ಜಿ ಮಾಲಿನ್ಯರಹಿತ ಹಸಿರು ಇಂಧನವಾಗಿದ್ದು, ಈಗಾಗಲೇ ದೇಶ ದೊಡ್ಡ ದೊಡ್ಡ ನಗರಗಳಲ್ಲಿ ಸಿಎನ್ಜಿ ಸ್ಟೇಶನ್ಗಳು ಸ್ಥಾಪಿತಗೊಂಡಿವೆ.

ಹಸಿರು ಇಂಧನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಡಿ.22ರಂದು ಸಂಕಮ್ ಹೋಟೆಲ್ನಿಂದ ಗೋ ಗ್ರೀನ್ ಗೋ ಸಿಎನ್ಜಿ ಮ್ಯಾರಥಾನ್ ಆಂಭಗೊಂಡು ಚನ್ನಮ್ಮ ವೃತ್ತದ ತಲುಪಿ ಮತ್ತೆ ಅದೇ ಮಾರ್ಗವಾಗಿ ಸಂಕಮ್ ಹೋಟೆಲ್ ತಲುಪಲಿದ್ದು, ಇದರಲ್ಲಿ ಸಚಿವ ಸುರೇಶ ಅಂಗಡಿ, ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಗಣ್ಯರು ಪಾಲ್ಗೊಳ್ಳುವರು. ಬೆಳಗಾವಿಯನ್ನು ಹಸಿರು ಮತ್ತು ಸ್ವಚ್ಛ ನಗರವನ್ನಾಗಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮ್ಯಾರಥಾನ್ನಲಿ ಹೆಚ್ಚಿನ ಸಂಖ್ಯೆಯಲ್ಲಿ ನರು ಭಾಗವಹಿಸಬೇಕೆಂದು ಕರೆ ನೀಡಿದರು.