ರಾಣೇಬೆನ್ನೂರು 19: ಸ್ಥಳೀಯ ಗೋ ಗ್ರೀನ್ ಸಮಿತಿಯ ಪದಾಧಿಕಾರಿಗಳು ಹಾಗೂ ನಾಗರಿಕರ ಸಹಯೋಗದೊಂದಿಗೆ ಇಲ್ಲಿನ ಸಿದ್ದೇಶ್ವರ ನಗರದಲ್ಲಿ ಬುಧವಾರ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 80 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದರು.
ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ ಮತ್ತು ಪಾಂಡುರಂಗ ಗಂಗಾವತಿಯವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಸಿ ಸಂರಕ್ಷಣೆ ಹಾಗೂ ಮರಗಳಿಂದ ಆಗುವ ಅನುಕೂಲತೆಗಳ ಬಗ್ಗೆ ವಿವರವಾಗಿ ಮಾತನಾಡಿ ಜನಜಾಗೃತಿ ಮೂಡಿಸಿದರು.
ಡಾ. ನಾರಾಯಣ ಪವಾರ, ಡಾ.ಗೀರೀಶ ಕೆಂಚಪ್ಪನವರ, ಡಾ.ವೀಣಾ ಕೆಂಚಪ್ಪನವರ, ಸದಸ್ಯೆ ಕಮಲಾಕ್ಷಿ ವಿನಾಯಕ ಚಿನ್ನಿಕಟ್ಟಿ, ಪುಟ್ಟಪ್ಪ ಬಾಕರ್ಿ, ವಿನಾಯಕ ಚಿನ್ನಿಕಟ್ಟಿ, ಸುಧೀರ ಕುರವತ್ತಿ, ವಿಜಯಶ್ರೀ ಮುಂಡಾಸದ ಸೇರಿದಂತೆ ನಾಗರಿಕರು ಪಾಲ್ಗೊಂಡಿದ್ದರು.