ಜಾಗತಿಕ ಯುವ ತಂಬಾಕು ಸಮೀಕ್ಷೆ ಉತ್ತಮ ಆರೋಗ್ಯ ನಿರ್ಮಾಣಕ್ಕೆ ಸಹಕಾರಿ: ಶಾಂತಮ್ಮ

ಲೋಕದರ್ಶನವರದಿ

ಆಲಮಟ್ಟಿ೧೨: ಇಂದಿನ ಯುವ ಜನತೆ ಭಾಗಶಃ ಧೂಮಪಾನಗಳ ದಾಸರಾಗಿ ಜೀವನೋತ್ಸಾಹ ಕಳೆದುಕೊಳ್ಳುತ್ತಲಿದ್ದಾರೆ. ಬೀಡಿ,ಸಿಗರೇಟು,ಹುಕ್ಕಾ,ಸಿಗಾರ,ಚುಲುಮೆ, ಚುಟ್ಟ,ಗುಟ್ಕಾ,ಜದರ್ಾ,ಮಾವಾ,ತಂಬಾಕು ಹೀಗೆ ಇತರೆ ಮಾದಕ ವ್ಯಸನಗಳಿಗೆ ಆಕಷರ್ಿತರಾಗಿ ನಶ್ಯದ ಆಮಲು ಏರಿಸಿಕೊಳ್ಳುತ್ತಲಿದ್ದಾರೆ. ಧೂಮಪಾನ ಹಾಗೂ ಮಧ್ಯಪಾನದ ಸೆಳೆತಕ್ಕೆ ತುತ್ತಾಗಿ ತಮ್ಮ ಸುಂದರ ಬದುಕನ್ನು ಸ್ವತಃ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರಲ್ಲದೇ ನಂಬಿದ ಕುಟುಂಬಸ್ಥರಿಗೆ ಕಂಟಕಪ್ರಾಯ ತಂದೊಡ್ಡುತ್ತಲಿದ್ದಾರೆ ಎಂದು ಕ್ಷೇತ್ರ ಸಂಶೋಧಕಿ ಹೊಪೇಟೆಯ ಶಾಂತಮ್ಮ ಚಲವಾದಿ ಹೇಳಿದರು.

ಇಲ್ಲಿನ ರಾವಬಹದ್ದೂರ ಡಾ|| ಫ.ಗು.ಹಳಕಟ್ಟಿ(ಆರ್.ಬಿ.ಪಿ.ಜಿ.) ಪ್ರೌಢಶಾಲೆಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಾಗತಿಕ ಯುವ ತಂಬಾಕು ಸಮೀಕ್ಷೆ ( ಜೀ.ವೈ.ಟಿ.ಎಸ್.4)ಭಾರತ ಅಧ್ಯಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಧೂಮಪಾನಗಳಿಂದ ಉಂಟಾಗುವ ಹಾನಿಗಲಬಗ್ಗೆ ಶಾಲಾ ಮಕ್ಕಳಲ್ಲಿರುವ ಜ್ಞಾನಮಟ್ಟ ಎಷ್ಟಿದೆ ಎಂಬುದನ್ನು ಅರಿಯಲು ಸಮೀಕ್ಷೆ ಸಹಕಾರಿಯಾಗಿದೆ ಎಂದರು.

ಈ ಸಮೀಕ್ಷೆಯು ಸ್ವಾಸ್ಥ್ಯ ಮತ್ತು ಪರಿವಾರ ಕಲ್ಯಾಣ ಮಂತ್ರಾಲಯ ( ಎಮ್.ಓ.ಎಚ್.ಎಫ್.)ಡಬ್ಲೂ) ಆರೋಗ್ಯ ಇಲಾಖೆ ಭಾರತ ಸರಕಾರ ನವದೆಹಲಿಯವರ ಮಾರ್ಗದರ್ಶನ್ವಯ ಮುಂಬೈಯ ಅಂತರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ ಐ.ಐ.ಪಿ.ಎಸ್. ನಡೆಸುತ್ತಿದ್ದು ಇದಕ್ಕೆ ರಾಜ್ಯ ತಂಬಾಕು ಘಟಕ,ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗ ನೀಡಿದೆ.

       ಹೀಗಾಗಿ ರಾಜ್ಯದ ಆಯ್ದ 34 ಶಾಲೆಗಳಲ್ಲಿ ಅಧ್ಯಯನವನ್ನು ಸೆಂಟರ್ ಫಾರ್ ಸೋಸಿಯಲ್ ಎಕಾನಾಮಿ ಆ್ಯಂಡ್ ಎನ್ವೈರಮೆಂಟಲ್ ಸ್ಟಡೀಸ್ ಕ್ಷೇತ್ರ ಸಂಶೋಧಕರು ಶಾಲೆಗಳಿಗೆ ಭೇಟಿ ನೀಡಿ ದತ್ತಾಂಶಗಳನ್ನು ಕಲೆಹಾಕಿ ಅಗತ್ಯ ಮಾಹಿತಿಗಳನ್ನು ಶಾಲಾ ಮಕ್ಕಳಿಂದ ಸಂಗ್ರಹಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಸಮೀಕ್ಷೆಯ 13 ರಿಂದ 15 ವರ್ಷ ವಯಸ್ಸಿನ ಯುವಜನತೆಯು ಉಪಯೋಗಿಸುವ ತಂಬಾಕಿನ ಪದಾರ್ಥಗಳ ಕುರಿತಾಗಿದೆ. ಅನೇಕ ರಾಷ್ಟ್ರಗಳಲಿ ಈ ರೀತಿಯ ಸಮೀಕ್ಷೆಗಳು ಆಯೋಜಿಸಲ್ಪಡುತ್ತಿದ್ದು ಭಾರತದಾದ್ಯಂತ ಆಯ್ದ ಶಾಲೆ ವಿದ್ಯಾಥರ್ಿಗಳು ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. 

ಪ್ರಶ್ನಾವಳಿಯ ಪುಸ್ತಕದಲ್ಲಿ ಮಕ್ಕಳು ಸರಿ, ತಪ್ಪು ಎಂದು ಉತ್ತರಿಸಿದ ಮಾಹಿತಿಯನ್ನು ರಹಸ್ಯವಾಗಿಡಲಾಗುತ್ತದೆ. ಗೌಪ್ಯ ಸಂಶೊಧನಾ ಉದ್ದೇಶಕ್ಕೆ ಮಾತ್ರ  ಬಳಸಲಾಗುತ್ತದೆ. ತರಗತಿಯ ಅಂಕ ಅಥವಾ ಸ್ಥಾನದ ಮೇಲೆ ಈ ಸಮೀಕ್ಷೆ ಪರಿಣಾಮ ಬಿರದು.

  ಬುಕ್ಲೇಟದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಕ್ಕಳು ನೀಡುವ ಉತ್ತರ ಅತ್ಯಂತ ಮಹತ್ವದಾಗಿರುತ್ತದೆ. ಯುವ ಜನತೆಗೆ ಇದರಿಂದ ಉತ್ತಮ ಆರೊಗ್ಯ ಕಾರ್ಯಕ್ರಮ ರೂಪಿಸುವಲ್ಲಿ ಇದು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ಭಾರತದ ಎಲ್ಲ ರಾಜ್ಯಗಳಲ್ಲಿ ಜಾಗತಿಕ ಯುವ ತಂಬಾಕು ಸವರ್ೇ ನಡೆಯುತ್ತಲಿದೆ. ರಾಜ್ಯದ ಆಯ್ದ 34 ಶಾಲೆಗಳಲ್ಲಿ ವಿಜಯಪುರ ಜಿಲ್ಲೆಯಿಂದ ಆಲಮಟ್ಟಿಯ ಹಳಕಟ್ಟಿ ಶಾಲೆ ಆಯ್ಕೆಯಾದ ಹಿನ್ನಲೆಯಲ್ಲಿ ಸಮೀಕ್ಷೆ ಕಾರ್ಯಕೈಗೊಳ್ಳಲಾಗಿದೆ ಎಂದು ಶಾಂತಮ್ಮ ಚಲವಾದಿ ತಿಳಿಸಿದರು.

ಹಿರಿಯ ಶಿಕ್ಷ ಆರ್.ಪಿ.ಸಂತರ ಮಾತನಾಡಿ, ಧೂಮಪಾನದ ಕರಾಮತ್ತು ಭಿಕರತೆಯಿಂದ ಕೂಡಿದೆ. ವ್ಯಸನಿಗಳಾದರೆ ನಮಗರಿವಿಲ್ಲದೇ ಆರೋಗ್ಯದ ಮೇಲೆ ವ್ಯತರಿಕ್ತ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆ ದಿಸೆಯಲ್ಲಿ ಎಚ್ಚೆತ್ತುಕೊಳ್ಳಬೇಕು.

   ಅನಾದರ ಖಂಡಿತ ಸಲ್ಲದೆಂದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ,ಇದೊಂದು ಒಳ್ಳೆಯ ಕಾರ್ಯಕ್ರಮ, ನಮ್ಮ ಶಾಲೆಯಲ್ಲಿ ಸಂಯೋಜಿಸಿರುವುದು ಖುಷಿತಂದಿದೆ. ಮಕ್ಕಳಿಗೆ ದುಶ್ಚಟಗಳಿಂದಾಗುವ ಹಾನಿಯ ಬಗೆಗೆ ತಿಳುವಳಿಕೆ ನೀಡಿದ್ದು ಉತ್ತಮಕಾರ್ಯ. ಮನೋಬಲ,ಆತ್ಮವಿಶ್ವಾಸದಂಥ ನಂಬಿಕೆ ಶಕ್ತಿ ಯುವಕರಲ್ಲಿ ಹೆಚ್ಚಾಗಲಿದೆ ಎಂದರು.

 ಕ್ಷೇತ್ರ ಸಂಶೊಧಕ ಗೋಕಾಕ ತಾಲೂಕಿನ ತುಕಾನಟ್ಟಿಯ ಚಂದ್ರಿಕಾ ಬಟ್ಲಿ, ಶಿಕ್ಷಕ ಜಿ.ಆರ್.ಜಾಧವ, ಕ್ಷೇತ್ರ ಸಂಶೋಧಕಿ ಗೋಕಾಕ ತಾಲೂಕಿನ ತುಕಾನಟ್ಟಿಯ ಚಂದ್ರಿಕಾ ಬಟ್ಲಿ,ಶಿಕ್ಷಕ ಜಿ.ಆರ್.ಜಾಧವ, ಎಸ್.ಎಚ್.ನಾಗಣಿ, ಎಲ್.ಆರ್.ಸಿಂಧೆ, ಡಿ.ಕೆ.ಮುದ್ದಾಪುರ, ಅನಿತಾ ರಾಠೋಡ ಇತರರಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಶಾಲೆಯ ಎಲ್ಲ ವಿದ್ಯಾಥರ್ಿಗಲಿಗೆ ಸಮೀಕ್ಷೆ ಅಂಗವಾಗಿ ಪ್ರಶ್ನೋತ್ತರ ಮಾಲಿಕೆಯ ಪರೀಕ್ಷೆ ನಡೆಸಲಾಯಿತು.