ಜಾಗತಿಕ ಮಾರುಕಟ್ಟೆಗಳು ಸದೃಢ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 802 ಅಂಕ ಏರಿಕೆ

ಮುಂಬೈ, ಏಪ್ರಿಲ್ 30,ಜಾಗತಿಕ ಮಾರುಕಟ್ಟೆಗಳಲ್ಲಿನ ಸದೃಢ ವಹಿವಾಟು ಹಾಗೂ ವಲಯ ಸೂಚ್ಯಂಕಗಳ ಉತ್ತಮ ಏರಿಕೆಯೊಂದಿಗೆ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಸತತ ನಾಲ್ಕನೇ ದಿನವಾದ ಗುರುವಾರವೂ ಏರುಗತಿಯಲ್ಲಿ ಸಾಗಿದ್ದು, ಆರಂಭಿಕ ವಹಿವಾಟಿನಲ್ಲಿ 802 ಅಂಕ ಏರಿಕೆಯೊಂದಿಗೆ 33,552.72 ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಸೂಚ್ಯಂಕ ನಿಫ್ಟಿ ಸಹ 196 ಅಂಕ ಏರಿಕೆ ಕಂಡು 9,749.45 ಕ್ಕೆ ತಲುಪಿದೆ.ಸೆನ್ಸೆಕ್ಸ್ ಬೆಳಗಿನ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 33,570 ಮತ್ತು 33,354 93 ಮಟ್ಟವನ್ನು ದಾಖಲಿಸಿದೆ.ನಿಫ್ಟಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 9,763.20 ಮತ್ತು 9731.50 ಮಟ್ಟದಲ್ಲಿ ವಹಿವಾಟು ನಡೆಸಿದೆ. ಲೋಹ, ಹಣಕಾಸು, ಆಟೋ, ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಹಕರ ವಿವೇಚನೆಯ ಸರಕು ಮತ್ತು ಸೇವೆ ವಲಯಗಳ ಸೂಚ್ಯಂಕಗಳು ಹೆಚ್ಚು ಏರಿಕೆ ದಾಖಲಿಸಿವೆ. ಮಾರುತಿ ಸುಜುಕಿ ಶೇ 6.19ರಷ್ಟು ಏರಿಕೆ ಕಂಡು 5382.15 ರೂ.ನಲ್ಲಿ, ಐಸಿಐಸಿಐ ಬ್ಯಾಂಕ್ ಶೇ 4.89ರಷ್ಟು ಏರಿಕೆ ಕಂಡು 388.35 ರೂ.ನಲ್ಲಿ, ಎಂ ಅಂಡ್‍ ಎಂ ಶೇ 4.11ರಷ್ಟು ಏರಿಕೆ ಕಂಡು 362.35 ರೂ.ನಲ್ಲಿ, ಬಜಾಜ್ ಫೈನಾನ್ಸ್ ಶೇ 4.01 ರಷ್ಟು ಏರಿಕೆ ಕಂಡು 2384.70 ರೂ.ನಲ್ಲಿ ಮತ್ತು ಟಾಟಾ ಸ್ಟೀಲ್‍ ಶೇ 4.14ರಷ್ಟು ಏರಿಕೆಯೊಂದಿಗೆ 294.20 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದವು.