ಲೋಕದರ್ಶನವರದಿ
ಶೇಡಬಾಳ : ದಸರಾ ಮಹೋತ್ಸವದ ಅಂಗವಾಗಿ ಸಮೀಪದ ಉಗಾರ ಬುದ್ರುಕ ಗ್ರಾಮದ ಗ್ರಾಮ ದೇವತೆ ಹಾಗೂ ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರ ಆರಾಧ್ಯ ದೇವತೆ ಶ್ರೀ ಪದ್ಮಾವತಿ ದೇವಿಯ ಪಲ್ಲಕ್ಕಿ ಮೆರವಣಿಗೆ ಹಾಗೂ ಹೊಳೆ ಪೂಜೆ (ಕೃಷ್ಣಾ ನದಿ) ಮಹೋತ್ಸವ ಕಾರ್ಯಕ್ರಮ ಸೋಮವಾರ ದಿ. 7 ರಂದು ಜರುಗಲಿದೆ.
ಸೋಮವಾರ ದಿ. 7 ರಂದು ಮುಂಜಾನೆ 10 ಗಂಟೆಗೆ ಮಂದಿರದ ಮುಖ್ಯಸ್ಥರಾದ ಶೀತಲಗೌಡ ಪಾಟೀಲ ಗೌಡರ ಮನೆತನದಿಂದ ಆಯುಧ ಪೂಜೆ, ಖಂಡೇ ಮಹಾನವಮಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 12 ಗಂಟೆಗೆ ಪದ್ಮಾವತಿ ದೇವಿಯ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಕೃಷ್ಣಾ ನದಿಗೆ ತೆರಳಿ ನದಿ ನೀರಿನಲ್ಲಿ ದೇವಿಗೆ ಪೂಜಾಭೀಷೇಕ ಕಾರ್ಯಕ್ರಮ ಜರುಗುತ್ತದೆ. 3 ಗಂಟೆಗಳ ಕಾಲ ಜರುಗಲಿರುವ ಪೂಜಾ ಕಾರ್ಯಕ್ರಮದಲ್ಲಿ ಹಾಲು, ತುಪ್ಪ, ಮೊಸರು, ಎಳೆನೀರು, ಅಷ್ಟದ್ರವ್ಯಗಳಿಂದ ದೇವಿ ಹಾಗೂ ಭಗವಂತರಿಗೆ ಪೂಜಾಭಿಷೇಕ ಕಾರ್ಯಕ್ರಮಗಳು ಜರುಗುತ್ತವೆ. ಈ ಕಾರ್ಯಕ್ರಮವನ್ನು ವಿಕ್ಷೀಸಲು ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ.
ಮಂಗಳವಾರ ದಿ. 8 ರಂದು ಸಾಯಂಕಾಲ ಶ್ರೀ ಪದ್ಮಾವತಿ ದೇವಿಯ ಪಲ್ಲಕ್ಕಿ ಮಹೋತ್ಸವದೊಂದಿಗೆ ಬನ್ನಿ ಮುರಿಯುವ ಕಾರ್ಯಕ್ರಮ ಜರುಗಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಕಳೆದ 8 ದಿನಗಳಿಂದ ವಿಶೇಷ ಅಲಂಕಾರ ಪೂಜೆ ಕಾರ್ಯಕ್ರಮಗಳು ಜರುಗುತ್ತಿವೆ. ಪದ್ಮಾವತಿ ದೇವಿಯ ಮಂದಿರದಲ್ಲಿ ಅಖಂಡ 40 ತುಪ್ಪದ ಜ್ಯೋತಿಗಳನ್ನು ಬೆಳಗಲಾಗುತ್ತಿವೆ. ದಿನನಿತ್ಯ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ಕುಂಕುಮಾರ್ಚನೆ ಸಂಜೆ ಪದ್ಮಾವತಿ ಆದರ್ಶ ಮಹಿಳಾ ಮಂಡಳದವರಿಂದ ಸಾಂಸ್ಕೃತಿಕ ಹಾಗೂ ಧಾಮರ್ಿಕ ದಾಂಡಿಯಾ ಕಾರ್ಯಕ್ರಮಗಳು ಜರುಗುತ್ತಿವೆ