ದುಶ್ಚಟ ತ್ಯಜಿಸಿ ಸುಸಂಸ್ಕೃತರಾಗಿ ಬದುಕಿ: ಯಶವಂತರಾಯಗೌಡ ಪಾಟೀಲ

 ದುಶ್ಚಟ ತ್ಯಜಿಸಿ ಸುಸಂಸ್ಕೃತರಾಗಿ ಬದುಕಿ: ಯಶವಂತರಾಯಗೌಡ ಪಾಟೀಲ Give up vices and live a civilized life: Yashwant Rayagouda Patil

ಲೋಕದರ್ಶನ ವರದಿ 

ದುಶ್ಚಟ ತ್ಯಜಿಸಿ ಸುಸಂಸ್ಕೃತರಾಗಿ ಬದುಕಿ: ಯಶವಂತರಾಯಗೌಡ ಪಾಟೀಲ 

ಇಂಡಿ 13: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಿಜಯಪೂರ ಜಿಲ್ಲೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮವನ್ನು ಇಂಡಿ ನಗರದ ಕಾಳಿಕಾ ದೇವಿಯ ಮಂಗಲ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

 ಈ ಕಾರ್ಯಕ್ರಮವನ್ನು ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಯಶವಂತರಾಯಗೌಡ ಪಾಟೀಲ ಅವರು ಯುವ ಜನತೆ ದುಶ್ಚಟಗಳನ್ನು ಬಿಟ್ಟು ಸುಸಂಸ್ಕೃತರಾಗಿ ಬದುಕಬೇಕು. ಮದ್ಯ ಮತ್ತು ಮಾದಕ ವ್ಯವಸನಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಸ್ವಾವಲಂಬನೆ ಜೀವನ ಸಾಧಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮ ಉಪಸ್ಥಿತರಿದ್ದ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರಾದ ಅಶೋಕ ಅಲ್ಲಾಪೂರ ಅವರು ಮಾತನಾಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಯುವ ಜನತೆಯು ದುಶ್ಚಟಗಳಿಂದ ದೂರವಾಗಬೇಕು. ಈ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು’ ಎಂದರು.ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಅವರು ಮಾತನಾಡಿ ಕೆಲವು ಕಿಡಿಗೇಡಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರು ಖೇಡಿಸಲು ಮುಂದಾಗಿದ್ದರು ಅವರು ವಿಫಲರಾದರು.ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಮಹಿಳಿಯರ ಬದುಕು ಬದಲಾವಣೆಯಾಗಿದೆ ಎಂದು ಹೇಳಿದರು.ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಅವರು ಮಾತನಾಡಿ‘ಯುವ ಜನತೆ ಮದ್ಯ, ಮಾದಕ ವ್ಯಸನಗಳಿಂದ ದೂರವಿದ್ದು, ವ್ಯಸನಮುಕ್ತ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ದುಶ್ಚಟಗಳು ಸಮಾಜ, ಕುಟುಂಬಕ್ಕೆ ಮಾರಕವಾಗಿವೆ. ಇದರ ಜೊತೆಗೆ ಯುವ ಜನತೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು, ಮೊಬೈಲ್ ಚಟ ಅಂಟಿಸಿಕೊಂಡಿರುವುದು ತುಂಬಾ ಆಘಾತಕಾರಿಯಾಗಿದೆ’ ಎಂದು ಹೇಳಿದರು.ಬೆಳೆಗೆ ಎಂಟು ಗಂಟೆಗೆ ಇಂಡಿ ನಗರದ ಉರ್ದು ಶಾಲೆಯ ಆವರಣದಲ್ಲಿ ಈ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಬೃಹತ್ ಜನಜಾಗೃತಿ ಜಾಥಾ ಇಂಡಿ ನಗರದ ಬಸವೇಶ್ವರ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಜಾಗೃತಿ ಜಾಥಾ ಮಾಡಲಾಯಿತು. 

ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬೀಮಣ್ಣ ಕವಲಿಗಿ , ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಯೋಗಪ್ಪ ಚನಗೊಂಡ ಭೀಮರಾಯ ಗುಡ್ಡದ ಶ್ರೀಕಾಂತ್ ಕೂಡಿಗನೂರ ಧನರಾಜ್ ಮುಜಗೊಂಡ ಹಾಗೂ ಕಲಬುರಗಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದೀನೇಶ ಪೂಜಾರಿ ವಿಜಯಪೂರ ಜಿಲ್ಲಾ ನಿರ್ದೆಶಕರಾದ  ಸಂತೋಷ ಕುಮಾರ ಇಂಡಿ ತಾಲೂಕು ಯೋಜನಾಧಿಕಾರಿ ನಟರಾಜ್ ಎಲ್ ಎಮ್ ಹಾಗೂ ಐದು ತಾಲ್ಲೂಕಿನ ಯೋಜನಾ ಅಧಿಕಾರಿಗಳು ಮೇಲ್ವಿಚಾರಕರು ಶ್ರೇಣಿಯ ಸಿಬ್ಬಂದಿ ವರ್ಗ ಹಾಗೂ ಕಛೇರಿ ಸಿಬ್ಬಂದಿಗಳು ವಿ ಎಲ್ ಇ ಗಳು ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.