ಬೆಳಗಾವಿ 16 : ಬಗರ್ ಹುಕುಂ ಅಡಿಯಲ್ಲಿ 70 ವರ್ಷಕ್ಕೂ ಹೆಚ್ಚು ಕಾಲ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟಿಸಿದರು.
ರಾಜ್ಯದ ಎಲ್ಲಾ ತಾಲೂಕಗಳಲ್ಲಿ ಭೂ ಮಂಜೂರಾತಿ ಸಮಿತಿ ಯನ್ನು ರಚನೆ ಮಾಡಬೇಕು.ಈಗಾಗಲೇ ಜಿಲೆಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಪರೀಶೀಲಿಸಿ ರೈತರಿಗೆ ಕೂಡಲೇ ಹಕ್ಕು ಪತ್ರ ನೀಡಿ, ಅರಣ್ಯ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ರೈತರ ಮೇಲೆ ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ನಿಲ್ಲಿಸಿ. ಮತ್ತು ರೈತರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ಹಿಂದೇಪಡೆದು, ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ಎಲ್ಲ ರೈತರಿಗೂ ಈ ಕೂಡಲೇ ಭೂಮಿ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.
ಬಗರ್ ಹುಕುಂ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ಹಾಗೂ ರೈತರಿಗೆ ಕೊಡುತ್ತಿರುವ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ದೊರಕಿಸಲು ಸರ್ಕಾರವು ಸೂಕ್ತ ಕ್ರಮ ಕೈಗೊಳಿ,ಭೂಮಿ ಇರುವ ಸ್ಥಳದಲ್ಲಿ ನಕಾಶೆ ಬೇರೆ ಮತ್ತು ಸರ್ವೇ ನಂಬರ್ ಬೇರೆ ಕಡೆ ಬರುತ್ತಿದೆ. ಇದನ್ನು ಸರಿಪಡಿಸಬೇಕು.ಹಕ್ಕುಪತ್ರ ಕೊಡುವ ವಿಷಯದಲ್ಲಿ ರೈತರನ್ನು ಮೋಸ ಮಾಡಿ ನಂಬಿಸಿ ಹಣ ಲೂಟಿ ಮಾಡುವ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ. ರೈತರಿಗೆ ಇಂತಹ ಲೂಡಿ ಮತ್ತು ಮೊಸಗಳಿಂದ ರಕ್ಷಣೆ ನೀಡಿ.ಈಗಾಗಲೇ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಲು ತಂದಾಯ ಸಚಿವರು ನಿಗದಿಪಡಿಸಿದ ಸಮಯವನ್ನು ವಿಸ್ತರಬೇಕೆಂದು ಮನವಿ ಮಾಡಿದರು.
ಮುಖಂಡರಾದ ಬಿ. ಭಗವಾನ್ ರೆಡಿ, ಎಸ್.ಸ್ವಾಮಿ, ಲಕ್ಷ್ಮಣ ಜಡಗನ್ನವರ್, ಎನ್. ಬಿ.ಮಹೇಶ್, ದೀಪಾ ಧಾರವಾಡ ಸೇರಿದಂತೆ ಇತರರಿದ್ದರು.