ಶಶಿಧರ ಶಿರಸಂಗಿ
ಶಿರಹಟ್ಟಿ 13: ಸರ್ಕಾರ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಗಳ ಶ್ರೋಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿ ಉನ್ನತ ಜೀವನ ನಡೆಸುವಂತೆ ಶ್ರಮಿಸುತ್ತಿದೆ. ಅದಕ್ಕೆ ಸರ್ಕಾರವು ಅವರ ಎಲ್ಲ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಕಾರ್ಮಿ ಕ ಇಲಾಖೆಯನ್ನು ರಚಿಸಿದೆ. ಅಲ್ಲಿ ಎಲ್ಲ ಕಾರ್ಮಿಕರು ತಮಗೆ ಅವಶ್ಯವಿರುವ ಯೋಜನೆಗಳನ್ನು ಅರ್ಜಿ ಸಲ್ಲಿಸುವ ಮೂಲಕ ಸಾಕಾರಗೊಳಿಸಿಕೊಳ್ಳಬಹುದು. ಈ ಯೋಜನೆಗಳನ್ನು ಪಡೆಯಲು ಈ ಇಲಾಖೆಯು ಕಾರ್ಮಿಕರ ಸೇವೆಗೆ ಸದಾ ತೆಗೆದಿರಬೇಕು.
ಇದಕ್ಕೆ ತದ್ವಿರುದ್ದ ಎನ್ನುವಂತೆ ಈ ಇಲಾಖೆಯ ಅಧಿಕಾರಿಯಾಗಲೀ ಈ ಇಲಾಖೆಯ ಬಾಗಿಲಾಗಲೀ ತೆರೆಯದೇ ಇರುವುದು ದುರದೃಷ್ಠಕರ ಸಂಗತಿಯಾಗಿದ್ದು ತಾಲೂಕಿನ ಕಾಮರ್ಿಕರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಈ ಇಲಾಕಎಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ನೋಟೀಸ್ ನೀಡಿದರೂ ಸಹ ಕ್ಯಾರೇ ಎನ್ನದೇ ಇರುವುದು ಮಾತ್ರ ಸತ್ಯವಾಗಿದೆ.
ಪ್ರತಿದಿನ ಮಧ್ಯಾಹ್ನ 12 ಘಂಟೆಯಾದರು ಬಾಗಿಲು ತೆರೆಯದ ಕಾರ್ಮಿಕ ಕಚೇರಿಯನ್ನು ನೋಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಅಧಿಕಾರಿಗಳ ವಿರುದ್ಧ ಗರಂ ಆದರು. ಈ ಸಂದರ್ಭದಲ್ಲಿ ಇಒ ಮಾತನಾಡಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಬರುವುದಿಲ್ಲ ಎಂಬ ದೂರು ಸಾರ್ವಜನಿಕರಿಂದ ಪ್ರತಿದಿನ ಕೇಳಿ ಬರುತ್ತಿದೆ. ಹೀಗಾಗಿ ಇಂದು ಕಛೇರಿಗೆ ಬೇಟಿ ನೀಡಿದ್ದೇನೆ. ಮಧ್ಯಾಹ್ನ 12 ಘಂಟೆಯಾಗಿದ್ದರು ಕಚೇರಿ ಬಾಗಿಲು ತೆರೆದಿಲ್ಲ. ಕಾರ್ಮಿಕರ ಸಮಸ್ಯೆಯನ್ನು ಶೀಘ್ರದಲ್ಲಿ ಸ್ಪಂದಿಸಲು ಹಾಗೂ ಸರ್ಕಾ ರದ ವಿವಿಧ ಯೋಜನೆಗಳನ್ನು ಬಡ ಕಾಮರ್ಿಕರಿಗೆ ತಲುಪಿಸಲು ಕಚೇರಿ ತೆರೆಯಲಾಗಿದೆ. ಆದರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಪದೇ ಪದೇ ಕಛೇರಿ ಬಂದ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಬಡ ಕಾರ್ಮಿಕರು ಪ್ರತಿದಿನ ತಾಪಂ ಕಾಯರ್ಾಲಯಕ್ಕೆ ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ, ಇದರಿಂದ ಅಧಿಕಾರಿಗಳಿಗೆ ಪ್ರತಿ ಕೆಡಿಪಿ ಸಭೆ, ಸಾಮಾನ್ಯ ಸಭೆ ಸೇರಿದಂತೆ ಇತರ ಪ್ರಗತಿ ಪರಿಶೀಲನೆ ಸಭೆಗಳಿಗೆ ತಪ್ಪದೇ ಹಾಜರಾಗುವಂತೆ ನೋಟಿಸ್ ನೀಡಿದರೂ ಸಹ ಸಮರ್ಪಕ ವರದಿ ನೀಡುತ್ತಿಲ್ಲ. ಸಭೆಗೂ ಸಹ ಗೈರಾಗುತ್ತಾರೆ. ಹೀಗೆ ಆದರೆ ಸಕರ್ಾರದ ಯೋಜನೆಗಳು ಕಾರ್ಮಿಕರಿಗೆ ತಲುಪುವುದು ಹೇಗೆ, ಆದ್ದರಿಂದ ಕಾರ್ಮಿಕ ಕಚೇರಿಯನ್ನು ತಾಪಂ ಕಟ್ಟಡಕ್ಕೆ ಶೀಘ್ರದಲ್ಲಿ ಸ್ಥಳಾಂತರಿಸಿ, ಕಾರ್ಮಿಕರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲು ಹಾಗೂ ಶಾಸಕರ ಆದೇಶದ ಪ್ರಕಾರ ಅಧಿಕಾರಿಗಳನ್ನು ಅಮಾತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಆಚರಣೆಗಳಂದು ಈ ಇಲಾಖೆಯ ಎದುರು ತ್ರಿವರ್ಣ ಧ್ವಜ ಹಾರಿದ್ದೇ ಕಂಡಿಲ್ಲ. (ಮುತ್ತುರಾಜ ಭಾವಿಮನಿ, ಮಾಜಜಾವೇ ರಾಜ್ಯಾಧ್ಯಕ್ಷ.) ರಾಷ್ಟ್ರೀಯ ಆಚರಣೆಗಳಾದ ಅಗಷ್ಟ್ 15 ಹಾಗೂ ಜನೇವರಿ 26 ರಂದು ಈ ಇಲಾಖೆ ತೆರೆದಾಗಿನಿಂದ ಯಾವೊಬ್ಬ ಪ್ರಜೆನೂ ಈ ಇಲಾಖೆಯ ಮುಂದೆ ಧ್ವಜ ಹಾರಿದ್ದು ಕಂಡಿಲ್ಲ. ಇದನ್ನು ಖಂಡಿಸಿ ಪ್ರಶ್ನಿಸಲು ಹೋದ ನಮಗೆ ಇಲಾಖೆಯ ಅಧಿಕಾರಿ ನನಗೆ 2-3 ಕಡೆಗೆ ಸೇವೆಗೆ ನಿಯೋಜಿಸಿದ್ದಾರೆ ನಾನೇನು ಮಾಡಲಿ? ರಾಷ್ಟ್ರೀಯ ಆಚರಣೆಗಳಂದು ನಮ್ಮ ಸಿಬ್ಬಂದಿಗೆ ಧ್ವಜ ಹಾರಿಸಲು ತಿಳಿಸಿದ್ದರೂ ಅವರು ನನ್ನ ಮಾತನ್ನು ಕೇಳಿಲ್ಲ ಎಂದು ಸುಮ್ನೆ ಹಾರಿಕೆ ಉತ್ತರ ನೀಡುತ್ತಾರೆ. ಈ ರೀತಿಯ ಇಲಾಖೆಯ ಅಧಿಕಾರಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವ ಥರದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮರ್ಿಕ ಇಲಾಖೆಯ ಕಚೇರಿಯನ್ನು ಸ್ಥಳಾಂತರಿಸುವಂತೆ ಈಓ ಡಾ. ನಿಂಗಪ್ಪ ಓಲೆಕಾರ ಮನವಿ: ಈ ಇಲಾಖೆಯ ಕಟ್ಟಡ ಈವರೆಗೂ ಬಾಡಿಗೆ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆಯು ಬೆಳ್ಳಟ್ಟಿ ರಸ್ತೆಗೆ ಸ್ಥಳಾಂತರವಾಗಿದ್ದರಿಂದ ಈ ಕಟ್ಟಡ ಖಾಲಿ ಉಳಿದಿದ್ದು, ಆದಷ್ಟು ಬೇಗನೇ ಕಾಮರ್ಿಕ ಇಲಾಖೆಯ ಕಚೇರಿಯು ತಾಲೂಕ ಪಂಚಾಯಿತಿಯ ಮೇಲ್ಗಡೆ ಸ್ಥಳಾಂತರಗೊಳ್ಳುವುದರಿಂದ ಸಾರ್ವಜನಿಕರಿಗೆ ಹಾಗೂ ಕಾಮರ್ಿಕರಿಗೆ ಮುಕ್ತವಾಗಿ ಸೇವೆ ಸಿಗುತ್ತದೆ ಹಾಗೂ ಈ ಇಲಾಖೆಯ ಮೇಲೆ ಎಲ್ಲರ ಗಮನ ಬೀರುತ್ತದೆ ಹಾಗೂ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ತಿಳಿಸಿದರು.