ಹುಬ್ಬಳ್ಳಿ, ಜ 18: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನೆರೆದಿದ್ದ ಸುಮಾರು ಹತ್ತಾರು ಸಾವಿರ ಜನರಿಗೆ ಏಕಕಾಲದಲ್ಲಿ ಮೊಬೈಲ್ ಕೈಗೆತ್ತಿಕೊಂಡು ಸಿಎಎ ಬೆಂಬಲಿಸಿ ಮಿಸ್ಡ್ ಕಾಲ್ ನೀಡುವಂತೆ ಸೂಚಿಸಿದರು.
ಬಹಿರಂಗ ಸಭೆಯಲ್ಲಿಯೇ ಮೊಬೈಲ್ ಸಂಖ್ಯೆಯನ್ನು ಪ್ರಕಟಿಸಿದ ಅಮಿತ್ ಶಾ, ನೆರೆದವರೆಲ್ಲರೂ ಏಕಕಾಲಕ್ಕೆ ಮಿಸ್ಡ್ ಕಾಲ್ ನೀಡುವಂತೆ ನಿರ್ದೇಶಿಸಿದರು. ಇದರಿಂದ ಪ್ರೇರೇಪಿತರಾದ ಸಾವಿರಾರು ಜನ ಈ ಸಂಖ್ಯೆಗೆ ಕರೆ ಮಾಡಿ ಬೆಂಬಲ ಸೂಚಿಸಿದರು.