ಲೋಕದರ್ಶನ ವರದಿ
ಶಿರಹಟ್ಟಿ 17: ಪಟ್ಟಣದಲ್ಲಿನ ಎಲ್ಲಾ ವಾಡರ್ುಗಳಲ್ಲಿ ಮೂಲಭೂತ ಸಮಸ್ಯೆಗಳಿಂದ ಬಳಲಾಡುತ್ತಿದ್ದು, ಮನೆಗಳು, ಕುಡಿಯುವ ನೀರು, ಬೀದಿ ದೀಪಗಳು, ರಸ್ತೆ ಗಟಾರ, ಸಿಡಿಗಳಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಪಟ್ಟಣದ ಜನ ರೋಸಿ ಹೋಗಿದ್ದು, ಪಟ್ಟಣದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕೆಂದು ಪಟ್ಟಣ ಪಂಚಾಯತನ 18 ಸದಸ್ಯರು ಮುಖ್ಯಾಧಿಕಾರಿ ಮಲ್ಲೇಶ ರವರಿಗೆ ಒತ್ತಾಯಿಸಿದರು.
ಅವರು ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ 2020-21ನೇ ಸಾಲಿನ ಆಯ-ವ್ಯಯ ತಯಾರಿಸಲು ಸಲಹೆ ಸೂಚನೆ ನೀಡುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಪಂ ಸದಸ್ಯರು ಪಪಂ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಪಟ್ಟಣದಲ್ಲಿ ಬೀದಿ ದೀಪಗಳಿಲ್ಲದೇ ಕತ್ತಲಲ್ಲಿ ಮುಳಗಿದೆ. ಪಟ್ಟಣದಲ್ಲಿ 8-10 ದಿನಗಳಿಗೊಮ್ಮೆ ಕುಡಿಯುವ ನೀರು ಒದಗಿಸಲಾಗುತ್ತಿದ್ದು, ಮೊದಲು 4-5ದಿನಗಳಿಗೆ ಒಮ್ಮ ನೀರು ಒದಗಿಸುವಂತೆ ಕ್ರಮ ಜರುಗಿಸಿದರೆ ನೀರಿನ ಕರ ಸುಭವಾಗಿ ವಸೂಲು ಮಾಡಲಾಗುವುದು. ಜೊತೆಗೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಉತಾರ ಪಡೆಯಲು ತಿಂಗಳು ಗಟ್ಟಲೆ ಸಮಯ ಪಡೆದರೆ ಯಾರೂ ಕೂಡಾ ಮನೆ ಕರವನ್ನು ತುಂಬುವುದಿಲ್ಲ. ಆದ್ದರಿಂದ ಉತಾರ ಸುಲಭವಾಗಿ ಲಭ್ಯವಾಗುವಂತೆ ಕ್ರಮ ಜರುಗಿಸಬೇಕು. ಮ್ಯಾಗೇರಿ ಮತ್ತು ಖಾನಾಪೂರ ಗ್ರಾಮಗಳಲ್ಲಿನ ಸ್ಮಶಾನಕ್ಕೆ ಹೋಗಲು ಸುಗಮವಾದ ರಸ್ತೆ ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು. ಪಟ್ಟಣದ ಸ್ವಚ್ಛತೆಗಾಗಿ ಸಾಕಷ್ಟು ಕ್ರಮ ಜರುಗಿಸಿರುವುದು ಶ್ಲಾಘನೀಯವಾಗಿದೆೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಪರಮೇಶ ಪರಬ, ಎಮ್.ಆರ್. ಘಂಟಿ ಫಕ್ಕಿರೇಶ ರಟ್ಟಿಹಳ್ಳಿ, ಶಿವಕುಮಾರ ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ಮಹದೇವ ಗಾಣಿಗೇರ, ಲಕ್ಷ್ಮಣ ಬಾರಬಾರ, ಅಶರತಲಿ ಢಾಲಾಯತ, ಇಸಾಕ ಆದ್ರಳ್ಳಿ, ಹೊನ್ನಪ್ಪ ಶಿರಹಟ್ಟಿ, ಮುತ್ತು ಕಲಾದಗಿ, ದೇವಪ್ಪ ಆಡೂರ, ಮುಸ್ತಾಕ ಚೋರಗಸ್ತಿ, ಮಂಜುನಾಥ ಹುಬ್ಬಳ್ಳಿ, ಜೆ.ಆರ್.ಕುಲಕಣರ್ಿ, ಎನ್.ಎಮ್.ಹಾದಿಮನಿ, ಗುರುನಾಥ ಪಾತಾಳಿ ಮುಂತಾದವರು ಉಪಸ್ಥಿತರಿದ್ದರು.