ವಿದ್ಯಾಥರ್ಿಗಳ ಸಾಧನೆಗೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅವಕಾಶ ನೀಡಿ: ಚನ್ನಿ


ಕಾಗವಾಡ 11: ವಿದ್ಯಾಥರ್ಿಗಳು ಜೀವನದಲ್ಲಿ ಸಾಧನೆ ಮಾಡುಬೇಕಾಗಿದ್ದರೆ, ಎಲ್ಲರು ಮೊಬೈಲ್, ಟಿವಿಯಲ್ಲಿ ಹೆಚ್ಚಿನ ಸಮಯ ವೆಚ್ಚ ಮಾಡದೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅವಕಾಶ ನೀಡಿರಿ ಎಂದು ಬ್ರಾಹ್ಮಣ ಸಮಾಜದ ಹಿರಿಯರಾದ ಡಾ. ವಿಜಯಕುಮಾರ ಚನ್ನಿ ಉಗಾರದಲ್ಲಿ ಹೇಳಿದರು. 

ರವಿವಾರ ಸಂಜೆ ಉಗಾರದ ಮಹಾದೇವ ಮಂದಿರದಲ್ಲಿ ಉಗಾರ ಬ್ರಾಹ್ಮಣ ಸಮಾಜ ಸಂಘದ ವಾಷರ್ಿಕ ಸಭೆ ಜರುಗಿತು. ಸಭೆಯಲ್ಲಿ ಉಗಾರ ಹಾಗೂ ಪರಿಸರ ಗ್ರಾಮಗಳಲ್ಲಿಯ ಸಮಾಜದ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ, ಸಾಧಕರಿಗೆ ಸನ್ಮಾನಿಸಿ, ಡಾ. ವಿಜಯಕುಮಾರ ಚೆನ್ನಿ ಮಾತನಾಡಿದರು. 

ಉಗಾರ ಬ್ರಾಹ್ಮಣ ಸಮಾಜದ ಆಧ್ಯಕ್ಷ ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾದ ಡಾ. ವಿಜಯ ಚೆನ್ನಿ, ವಾಣಿ ವಿಜಯ ಚೆನ್ನಿ ದಂಪತಿಗಳಿಂದ ಒಂದನೆ ತರಗತಿಯಿಂದ ಮಹಾವಿದ್ಯಾಲಯದವರಗಿನ ವಿಶೇಷ ಸಾಧನೆ ಮಾಡಿರುವ 130 ವಿದ್ಯಾಥರ್ಿಗಳಿಗೆ ಸುಮಾರು 50 ಸಾವಿರ ರೂ.ಗಳಷ್ಟು ಶೈಕ್ಷಣಿಕ ಸಾಹಿತ್ಯ ಮತ್ತು ನಗಧ ಬಹುಮಾನ ನೀಡಿ, ಸನ್ಮಾನಿಸಿದರು. 

10ನೇ ತರಗತಿಯಲ್ಲಿ ರಾಜ್ಯದಲ್ಲಿ ದ್ವೀತಿಯ ಸ್ಥಾನ ಪಡೆದ ಅನಧಾ ಕುಲಕಣರ್ಿ ಮತ್ತು ಶ್ರೀಹರಿ ವಿದ್ಯಾಲಯದ ಮೊದಲನೆಯ 5 ಸ್ಥಾನಗಳಲ್ಲಿ ಸಾಧನೆ ಮಾಡಿರುವ ವಿದ್ಯಾಥರ್ಿಗಳನ್ನು ಸನ್ಮಾನಿಸಿದರು. ಉಗಾರ ಸಕ್ಕರೆ ಕಾಖರ್ಾನೆ ಕಾಮರ್ಿಕ ಸಂಸ್ಥೆಯಲ್ಲಿ ನಿದರ್ೇಶಕರಾಗಿ ಆಯ್ಕೆಯಾಗಿರುವ ರಾಘವೇಂದ್ರ ಪಾಟೀಲ, ಸುಜಾತಾ ದೇಶಪಾಂಡೆ, ಶೋಭಾ ಪೇಶ್ವೆ ಇವರನ್ನು ಸನ್ಮಾನಿಸಿದರು. 

ಬ್ರಾಹ್ಮಣ ಸಮಾಜ ಸಂಘದ ಸದಸ್ಯರಾದ ಸುಶ್ಮಾ ಗಲಗಲೆ, ಅಭಿಜೀತ ಗುಳವಣಿ, ಕಲ್ಪೇಶ್ ನಾಯಿಕ್, ನಿರ್ಮಲಾ ಕುಲಕಣರ್ಿ, ಸಂದೀಪ ದೇವಲ್, ಪ್ರಾಣೇಶ್ ಕುಲಕಣರ್ಿ, ವಿನಾಯಕ್ ಜೋಶಿ, ವಿಜಯ ದೇಶಮುಖ, ಚಿಂತಾಮನಿ ಜೋಶಿ ಇದ್ದರು. ನೇಹಾ ಪತಹಿ, ಅಚಿಜಲಿ ಕುಲಕಣರ್ಿ ನಿರೂಪಿಸಿದರು. ಲಕ್ಷ್ಮೀ ಮುತಾಲಿಕ್ ವಂದಿಸಿದರು. 

ಫೋಟೊ ಶಿಷರ್ಿಕೆ: 10 ಕಾಗವಾಡ 2 ಉಗಾರ ಬ್ರಾಹ್ಮಣ ಸಮಾಜದ ವಾಷರ್ಿಕ ಸಭೆಯಲ್ಲಿ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಸನ್ಮಾನಿಸುತ್ತಿರುವ ಡಾ. ವಿಜಯಕುಮಾರ ಚೆನ್ನಿ ಮತ್ತಿತರರು.