ಲೋಕದರ್ಶನವರದಿ
ಮಹಾಲಿಂಗಪೂರ : ಎಂದೂ ಕಂಡರಿಯದ ಪ್ರವಾಹ ಕನರ್ಾಟಕದಲ್ಲಿ ಬಂದು ಜನರ ಬದುಕು ಅತಂತ್ರವಾಗಿದೆ ನಿಯಮಗಳನ್ನು ಬದಿಗೊತ್ತಿ ಹಾನಿಗೊಳಗಾದ ಜನರಿಗೆ ಸರಕಾರ ಹೆಚ್ಚಿನ ಪರಿಹಾರ ನೀಡಬೇಕು.ತಪ್ಪಿದಲ್ಲಿ ಜನರ ಜೊತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕನರ್ಾಟಕ ಸರಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೊಂದರೆಗೊಳಗಾದ ಜನತೆಯ ಸಮಸ್ಯೆಗಳನ್ನು ಆಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟ ಜಿಲ್ಲೆಯಲ್ಲಿ ಆ.26 ರಂದು ಪ್ರವಾಸ ಕೈಗೊಂಡು ನೆರೆ ಸಂತ್ರಸ್ಥ ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮಗಳಾದ ಡವಳೇಶ್ವರ,ನಂದಗಾಂವ್ ಗ್ರಾಮಗಳಲ್ಲಿ ಸಂತ್ರಸ್ಥರನ್ನುದ್ದೇಶಿಸಿ ಮಾತನಾಡಿದ ಅವರು ತೇರದಾಳ ಮತ ಕ್ಷೇತ್ರದ 5 ಹಳ್ಳಿಗಳು ಸಂಪೂರ್ಣ ಜಲಾವೃತಗೊಂಡು ನಾಶವಾಗಿ 5 ಹಳ್ಳಿಗಳ ಜಮೀನುಗಳಲ್ಲಿಯ ವಿವಿಧ ಬೆಳೆ ಕಬ್ಬು,ಅರಿಸಿಣ ಇತ್ಯಾದಿ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಅನೇಕ ವಾಸದ ಮನೆಗಳು ಬಿದ್ದು ಇನ್ನೂ ಬೀಳುತ್ತಲಿವೆ. ಧವಸಧಾನ್ಯಗಳು,ಮನೆಯಲ್ಲಿನ ಸಾಮಾನುಗಳು,ಬಟ್ಟೆ ಬರೆ, ಜಾನುವಾರುಗಳೂ ಕೊಚ್ಚಿ ಹೋಗಿ ಜನರ ಸ್ಥಿತಿ ಚಿಂತಾಜನಕವಾಗಿದ್ದು ಕಂಡು ಬಂದಿದೆ. ಆದ್ದರಿಂದ ಜನರು ಪದೆ ಪದೆ ಸಂಕಷ್ಟಕ್ಕೆ ಸಿಲುಕಬಾರದು ಮುಳಗಡೆಯಾದ ಗ್ರಾಮಗಳನ್ನು ಮುಳಗಡೆ ಪ್ರದೇಶವೆಂದು ಘೋಷಿಸಿ ಯೋಗ್ಯ ಕಡೆ ಸ್ಥಳಾಂತರಿಸಬೇಕು ಮತ್ತು ಸ್ಥಳದಲ್ಲಿ ತಹಶಿಲ್ದಾರರಿಗೆ ಸೂಕ್ತ ರೀತಿಯಲ್ಲಿ ವರದಿ ತಯಾರಿಸಿ ಬಡವರ ಬದುಕು ಕಟ್ಟಿಕ್ಕೊಳ್ಳಲು ಅನುವು ಮಾಡಿ ಕೊಡಿ ಎಂದು ತಾಕೀತು ಮಾಡಿದರು. ಅದರಂತೆ ಅವರೂ ಸಹ ಸರಕಾರವನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಗ್ರಾಮಸ್ತರು ಗ್ರಾಮ ಸ್ಥಳಾಂತರ , ರೈತರ ಸಾಲ ಮರುಪಾವತಿಗೆ ಕಾಲಾವಕಾಶ ಹಾಗೂ ಪರಿಹಾರ ಹೆಚ್ಚಳದ ಬಗ್ಗೆ ಮನವಿ ಸಲ್ಲಿಸಿದರು.
ಮುಧೋಳ ಮತಕ್ಷೇತ್ರದ ಚಿಚಖಂಡಿ, ಗುಲಗಾಲ ಜಂಬಗಿ, ಮುಧೋಳ, ಮಳಲಿ ಹಾಗೂ ತೇರದಾಳ ಮತ ಕ್ಷೇತ್ರದ ನಂದಗಾಂವ, ಡವಳೇಶ್ವರ,ಅಸಕಿ, ಹಿಪ್ಪರಗಿ ಹಾಗೂ ಜಮಖಂಡಿ ಮತ ಕ್ಷೇತ್ರದ ತುಬಚಿ, ಸೂರಪಾಲಿ, ಟಕ್ಕಳಕಿ ಗ್ರಾಮಗಳಿಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು.
ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಚಿವರಾದ ಆರ್.ಎಸ್.ಪಾಟೀಲ,ಎಚ್.ವಾಯ್.ಮೇಟಿ ಮತ್ತು ಆರ್ಬಿ.ತಿಮ್ಮಾಪುರ, ಜಮಖಂಡಿ ಮತ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ, ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ, ತೇರದಾಳ ಮತ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಡಾ.ಎ.ಆರ್.ಬೆಳಗಲಿ,ರಂಗಣ್ಣಗೌಡ ಪಾಟೀಲ್, ಸಿದ್ದು ಕೊಣ್ಣೂರ, ದುಂಡಪ್ಪ ಪಟ್ಟಣಶೆಟ್ಟಿ,ರವಿ ಬ್ಯಾಳಿ,ಶಿದ್ರಾಮ್ ಯರಗಟ್ಟಿ, ಮಹಾಲಿಂಗಪ್ಪ ಲೋಕುರೆ, ಇತರರಿದ್ದರು.