ಬೇರೆ ಜಿಲ್ಲೆ, ವಿದೇಶದಿಂದ ಗ್ರಾಮಗಳಿಗೆ ಬಂದಿರುವ ಜನರ ಮಾಹಿತಿ ನೀಡಿ

ಬಳ್ಳಾರಿ,27 ಬೇರೆ ಜಿಲ್ಲೆಯಿಂದ ಹಾಗೂ ವಿದೇಶದಿಂದ ಗ್ರಾಮಗಳಿಗೆ ಬಂದಿರುವ ಜನರು ತಮ್ಮ ವ್ಯಾಪ್ತಿಯ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಜಿಲ್ಲಾ ಆಸ್ಪತ್ರೆಗೆ ಮಾಹಿತಿಯನ್ನು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ವಿಭಾಗೀಯ ಸವರ್ೇಕ್ಷಾಣಾಧಿಕಾರಿ ಡಾ.ಶ್ರೀಧರ್ ಅವರು ಹೇಳಿದರು.  

     ಜಿಲ್ಲಾಧಿಕಾರಿ ಕಚೇರಿಯ ವಿಡೀಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಇಒ ಮತ್ತು ಗ್ರಾಪಂಗಳ ಪಿಡಿಒ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ನೋವೆಲ್ ಕರೋನ್ ವೈರಸ್ ಕುರಿತು ಅವರು ಮಾತನಾಡಿದರು.

     ಕೆಲಸಕ್ಕಾಗಿ ನಗರಕ್ಕೆ ಮತ್ತು ವಿದೇಶಗಳಿಗೆ ಹೋದ ಜನರು ಮರಳಿ ಗ್ರಾಮಗಳಿಗೆ ಪ್ರತಿ ದಿನ ಬರುತ್ತಿದ್ದು, ಹಾಗೇ ಬಂದ ಜನರನ್ನು ಆಯಾ ಗ್ರಾಮದ ಆಶಾ ಕಾಯರ್ೆಕತರ್ೆಯರು ಗುರುತಿಸಿ 14 ದಿನಗಳವರೆಗೆ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಮೇಲೆ ನಿಗಾವಹಿಸಿಬೇಕು. ಒಂದು ವೇಳೆ ಆರೋಗ್ಯದಲ್ಲಿ  ಏನಾದರೂ ಕರೋನಾ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು ಎಂದರು.

 ಗ್ರಾಮಗಳಲ್ಲಿ 5ಕ್ಕಿಂತ ಹೆಚ್ಚಿನ ಜನರು ಗುಂಪು ಸೇರದಂತೆ ನೋಡಿಕೊಳ್ಳಬೇಕು. ವಯೋ ವೃದ್ಧರು, ಗಭರ್ಿಣೀಯರ ಪಟ್ಟಿ ಮಾಡಿ ಅವರ ಆರೋಗ್ಯ ಬಗ್ಗೆ ಗಮನಹರಿಸಬೇಕು. ಅಲ್ಲದೇ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಕರೋನಾ ವೈರಸ್ಗೆ ಯಾವುದೇ ಔಷಧಿ ಕಂಡುಹಿಡಿದಿಲ್ಲ ಆ ಬಗ್ಗೆ ಸುಳ್ಳು ಸುದ್ದಿಗಳು ಗ್ರಾಮಗಳಲ್ಲಿ ಹರಡದಂತೆ ನೋಡಿಕೊಳ್ಳಬೇಕು. ಸಕರ್ಾರ ಸೂಚಿಸಿದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದು ಎಲ್ಲಾ ಇಒ ಮತ್ತು ಪಿಡಿಒ ಅವರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.  

ಗ್ರಾಮಮಟ್ಟದ ಟಾಸ್ಕ್ಫೋಸರ್್ ಸಮಿತಿ ರಚನೆ: ಕರೋನ್ ವೈರಸ್ ಸಮುದಾಯದಲ್ಲಿ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದ ಟಾಸ್ಕ್ ಫೋಸರ್್ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ಆಯಾ ಗ್ರಾಮ ಪಂಚಾಯತಿಯ ಅಧ್ಯಕ್ಷರನ್ನು ನೇಮಕ ಮಾಡಬೇಕು. ಪಂಚಾಯತಿ ಇತರೆ ಸದಸ್ಯರು, ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು, ಸ್ಥಳೀಯ ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಬೀಟ್ ಪೊಲೀಸ್ ಅವರು ಸದಸ್ಯರಾಗಿ ಕಾರ್ಯನಿರ್ವಹಿಸಬೇಕು ಎಂದು ಎಲ್ಲಾ ಇಒ ಮತ್ತು ಪಿಡಿಒ ಅವರಿಗೆ ಇದೇ ಸಂದರ್ಭದಲ್ಲಿ ಅವರು ಸೂಚನೆ ನೀಡಿದರು.   ವಿಡಿಯೋ ಕಾನ್ಪರೆನ್ಸ್ನಲ್ಲಿ ತಾಲೂಕುಮಟ್ಟದ ಇಒಗಳು ಹಾಗೂ ಪಿಡಿಒಗಳು ಇದ್ದರು