ವ್ಯಾಯಾಮ ಮತ್ತು ಆರೋಗ್ಯಕ್ಕೆ ಮಹತ್ವ ನೀಡಿ: ಪ್ರೊ. ಸಿ.ಎಂ. ತ್ಯಾಗರಾಜ
Give importance to exercise and health: Prof. C.M. Thyagaraja
ಬೆಳಗಾವಿ 19: ಸದೃಢ ದೇಹ, ಮನಸ್ಸು ಮತ್ತು ಬುದ್ಧಿ ಪಡೆಯಲು ವ್ಯಾಯಾಮ, ಆರೋಗ್ಯ ಪೂರ್ಣವಾದ ಆಹಾರ ಮತ್ತು ಉತ್ತಮ ಚಿಂತನೆ ಹೊಂದುವ ಅವಶ್ಯಕತೆಯಿದೆ ಆದ್ದರಿಂದ ವಿದ್ಯಾರ್ಥಿನಿಯರು ವ್ಯಾಯಾಮ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಆರ್‌ಸಿಯು ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಮತ್ತು ಸ್ನಾತಕೋತ್ತರ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ವಿವಿಯ ಕುವೆಂಪು ಸಭಾಭವನದಲ್ಲಿ ವಿದ್ಯಾರ್ಥಿನಿಯರಿಗೆ ಆಯೋಜಿಸಲಾದ ಸ್ವ ರಕ್ಷಣೆೆ ಒಂದು ವಾರದ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗು, ನೆಮ್ಮದಿ, ಸುಖ ಮತ್ತು ಶಾಂತಿ ಹೊಂದಿರುವ ವ್ಯಕ್ತಿಗಳು ಮಾತ್ರ ಯಶಸ್ಸು ಮತ್ತು ಸಮೃದ್ಧಿ ಹೊಂದಲು ಸಾಧ್ಯ. ಪ್ರತಿ ನಿತ್ಯ ಲಘು ವ್ಯಾಯಾಮ ಮತ್ತು ಉತ್ತಮ ಆಹಾರ ಸೇವನೆಗೆ ಆದ್ಯತೆ ನೀಡಿದಾಗ ದೇಹ ಸಡೃಢವಾಗುವುದು. ಅದರಂತೆ ಉತ್ತಮ ಚಿಂತನೆ ಮತ್ತು ಓದು ಮನಸ್ಸು ಮತ್ತು ಬುದ್ಧಿಯನ್ನು ಕೂಡಾ ಚುರುಕನ್ನಾಗಿಸುತ್ತದೆ ಎಂದರು.
ಸ್ವ ರಕ್ಷಣೆ ತರಬೇತು ನೀಡುವ ನಗರದ ವಿವಿಧ ತರಬೇತಿ ಕೇಂದ್ರಗಳ ಜೊತೆ ಶೈಕ್ಷಣಿಕ ಒಪ್ಪಂದ ಕೂಡಾ ಮಾಡಿಕೊಳ್ಳಲಾಗುವುದು ಮತ್ತು ಸ್ವರಕ್ಷಣೆ ಕಲೆಯ ಕುರಿತಾದ ಮುಕ್ತ ಆಯ್ಕೆ ವಿಷಯವನ್ನಾಗಿ ಆರ್‌ಸಿಯು ಮತ್ತು ಆರ್‌ಸಿಯು ಪದವಿ ಕಾಲೇಜುಗಳಲ್ಲಿ ಕೋರ್ಸ್ ಪರಿಚಯಿಸುವ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ತರಬೇತುದಾರ ಶ್ರೀಪಾದ ರಾವ್ ಮಾತನಾಡಿ, ಮಧ್ಯರಾತ್ರಿಯಲ್ಲಿ ಮಹಿಳೆ ಮುಕ್ತವಾಗಿ ನಿರ್ಭಿತೆಯಿಂದ ಸಂಚಾರ ಮಾಡಿದಾಗ ಮಾತ್ರ, ಭಾರತ ಸ್ವಾತಂತ್ರ್ಯ ಪಡೆದಂತೆ ಎಂದು ಮಹಾತ್ಮ ಗಾಂಧಿಜಿ ಹೇಳಿದ್ದರು. ಏಳು ದಶಕ ಕಳೆದರೂ ಭಾರತದಲ್ಲಿ ಮಹಿಳೆ ಅಸುರಕ್ಷಿತವಾಗಿರುವುದು ಬೇಸರ ಸಂಗತಿ ಎಂದರು.
ಒಂದು ವಾರದ ಸ್ವರಕ್ಷಣಾ ತರಬೇತಿಯಲ್ಲಿ ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆಯ ವಿವಿಧ ತಂತ್ರಗಳನ್ನು ಹೇಳಿಕೊಡಲಾಗುವುದು. ಒಂದು ವಾರದ ನಂತರ ವಿದ್ಯಾರ್ಥಿನಿಯರು ನಿರಂತರವಾಗಿ ಸ್ವ ರಕ್ಷಣೆ ಕುರಿತಾಗಿ ಹೇಳಿದ ತಂತ್ರಗಳನ್ನು ಅಭ್ಯಾಸ ಮಾಡುವ ಅವಶ್ಯಕತೆಯಿದೆ. ಇದರಿಂದ ಅವರ ಮನಸ್ಸಿನಲ್ಲಿ ಧೈರ್ಯ ಮತ್ತು ವಿಶ್ವಾಸ ಬಂದರೆ ಅವರು ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಕ್ಷಮರಾಗುತ್ತಾರೆ ಎಂದು ತಿಳಿಸಿದರು.
ಹಣಕಾಸು ಅಧಿಕಾರಿ ಸ್ವಪ್ನಾ ಎಂ. ಎ. ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ವಿವಿಯ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಮಹಿಳಾ ಸಬಲೀಕರಣ ಘಟಕದ ಸದಸ್ಯರು ಹಾಜರಿದ್ದರು.
ಘಟಕದ ನಿರ್ದೇಶಕಿ ಪ್ರೊ. ಕೆ.ಬಿ. ಚಂದ್ರಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಗದೀಶ ಗಸ್ತಿ ವಂದಿಸಿದರು. ಡಾ. ದೇವತಾ ಗಸ್ತಿ ಪರಿಚಯಿಸಿದರು. ಫರ್ಜಾನಾ ಸಿಪಾಯಿ ನಿರೂಪಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 