ಮಕ್ಕಳ ಆರೋಗ್ಯ ಕಾಪಾಡಲು ಜಂತು ಹುಳು ನಿಯಂತ್ರಣ ಮಾತ್ರೆ ನೀಡಿ : ಡಾ. ನೀರಜ್‌

Give deworming pills to protect children's health: Dr. Neeraj

ಮಕ್ಕಳ ಆರೋಗ್ಯ ಕಾಪಾಡಲು ಜಂತು ಹುಳು ನಿಯಂತ್ರಣ ಮಾತ್ರೆ ನೀಡಿ : ಡಾ. ನೀರಜ್‌

ಕಾರವಾರ 09: ಮಕ್ಕಳಲ್ಲಿನ ಅಪೌಷ್ಟಿಕತೆ ತಡೆದು , ಜಂತುಹುಳುಗಳ ಬಾಧೆಯಿಂದ ತಡೆಯಲು ಅಲ್ಬೇಂಡಜೋಲ್ ಮಾತ್ರೆ ನೀಡುವುದರ ಮೂಲಕ ಆರೋಗ್ಯವಂತರನ್ನಾರಾಗಿ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನೀರಜ್‌ ಹೇಳಿದರು.ಅವರು ಸೋಮವಾರ ಕಾರವಾರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳು ಶಾಲೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚಾರಣೆಯನ್ನು ಮಕ್ಕಳಿಗೆ ಮಾತ್ರೆ ತಿನ್ನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆಗೊಳಿಸಲು ಹಾಗೂ ಜಂತುಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಪ್ರತಿ ವರ್ಷ ಫೆಬ್ರವರಿ 10 ಮತ್ತು ಆಗಷ್ಟ 10 ರಂದು ಜಂತು ಹುಳು ನಿವಾರಣಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1 ವರ್ಷದಿಂದ 19 ವರ್ಷದೊಳಗಿನ ಅಂಗನವಾಡಿ, ಸರ್ಕಾರಿ, ಅನುದಾನ ಶಾಲಾ, ಕಾಲೇಜುಗಳ ಮಕ್ಕಳಿಗೆ ಮಾತ್ರೆಯನ್ನು ನೀಡಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಸರ್ಕಾರಿ ಅನುದಾನ ರಹಿತ ಶಾಲೆಗಳಲ್ಲಿನ ಮಕ್ಕಳಿಗೂ ಸಹ ಮಾತ್ರೆಯನ್ನು ವಿತರಿಸಲಾಗುತ್ತದೆ ಎಂದರು.1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ನೀಡಲಾಗುತ್ತದೆ ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಹಾಗಾಗಿ ಮಕ್ಕಳು ಆರೋಗ್ಯವಂತರಾಗಿ ಪೌಷ್ಟಿಕಾಂಶದ ಕೊರತೆಯನ್ನು ಹೊಗಲಾಡಿಸಲು ಮತ್ತು ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.  

ಇಂದು ಮಾತ್ರೆಯನ್ನು ಪಡೆಯದ ವಿದ್ಯಾರ್ಥಿಗಳಿಗೆ ಡಿ. 16 ರಂದು ನೀಡಲಾಗುತ್ತದೆ ಎಂದರು.ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಲತಾ ನಾಯ್ಕ ಸರ್ಕಾರ ಮಕ್ಕಳು ಆರೋಗ್ಯವಂತರಾಗಿರಲು ಬಿಸಿಯೂಟ, ಅಕ್ಷರ ದಾಸೋಹ , ಹಾಲು ವಿತರಣೆ ಜೊತೆಗೆ ಪ್ರತಿ ವರ್ಷಕ್ಕೆ ಎರಡು ಬಾರಿ ಜಂತು ಹುಳು ಮಾತ್ರೆ ಹಾಗೂ ವಾರಕ್ಕೆ ಒಂದು ಕಬ್ಬಿಣಾಂಶ ಮಾತ್ರೆಗಳು ಹೀಗೇ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  

ಇದರರಿಂದ ಮಕ್ಕಳು ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಿ ಜಿಲ್ಲೆಗೆ ರಾಜ್ಯಕ್ಕೆ ಉತ್ತಮ ಕೀರ್ತಿ ತರಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಹಾಸ ರಾಯ್ಕರ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ ವಾಗಿದ್ದು ಎಲ್ಲರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಆಹಾರ ಸೇವನೆ ಮಾಡಿ ಅಪೌಷ್ಠಿಕತೆಯನ್ನು ಹೊಗಲಾಡಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಜಂತು ಹುಳ ನಿವಾರಣೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರುಪಾಕ್ಷ , ಆರ್‌ಸಿಎಚ್ ಅಧಿಕಾರಿ ಡಾ. ನಾಟರಾಜ್, ಎಸ್‌ಡಿಎಂ ಅಧ್ಯಕ್ಷ ನಾಗೇಂದ್ರ ನಾಯ್ಕ, ಮತ್ತಿತರರು ಇದ್ದರು......