ಪ್ರಾಮಾಣಿಕ ಬದುಕಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಪಟ್ಟಣಕುಡೆ

ಹಾವೇರಿ:ನ. ಸಮಾಜದಲ್ಲಿ ಪ್ರಾಮಾಣಿಕವಾಗಿ ಬದುಕಲು ಮಕ್ಕಳಿಗೆ ಆರಂಭದಲ್ಲೇ ಉತ್ತಮ ಸಂಸ್ಕಾರ ನೀಡಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳದ ನಿರೀಕ್ಷಕ ಸುದರ್ಶನ ಕೆ.ಪಟ್ಟಣಶೆಟ್ಟಿ ಅವರು ಹೇಳಿದರು.

ಗುರುವಾರ ನಗರದ ಪ್ರಧಾನ ಅಂಚೆ ಇಲಾಖೆಯಲ್ಲಿ ಆಯೋಜಿಸಲಾದ ಜಾಗತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ಭ್ರಷ್ಟಾಚಾರ ನಿಮರ್ೂಲನೆಯಲ್ಲಿ ಸಮಾಜದ ಪಾತ್ರ ಪ್ರಮುಖವಾಗಿದೆ.  ಲಂಚ ತೆಗೆದುಕೊಳ್ಳುವುದಷ್ಟೇ ಅಪರಾಧವಲ್ಲ ಕೊಡುವುದೂ ಸಹ ಅಪರಾಧವಾಗಿದೆ.  ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ಧ್ವನಿಯತ್ತಿ ಭ್ರಷ್ಟಾಚಾರಿಗಳ ಅವಿರುದ್ಧ ದೂರು ಸಲ್ಲಿಸಲು ಮುಂದಾಗದಿರುವುದು  ವಿಷಾದದ ಸಂಗತಿ ಎಂದು ಹೇಳಿದರು.

ಪ್ರಧಾನ ಅಂಚೆ ಕಚೇರಿ ಅಂಚೆ ಪಾಲಕ ಎಸ್.ಎನ್.ಕೊಪ್ಪಳ ಅವರು ಮಾತನಾಡಿ, ನಾಗಾಲೋಟದ ಜೀವನದಲ್ಲಿ ಸಾರ್ವಜನಿಕರು ಸಂದರ್ಭದ ಕೈಗೊಂಬೆಯಾಗಿ ಲಂಚ ಕೊಡುವ ಪ್ರವೃತ್ತಿಯನ್ನು ಅನಿವಾರ್ಯವಾಗಿ ಬೆಳೆಸಿಕೊಂಡಿದ್ದು ಇದು ಹಾಗೆಯೇ ಮುಂದುವರೆದರೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅಂಚೆ ಅಧೀಕ್ಷಕ ನಿಂಗನಗೌಡ ಬಂಗಿಗೌಡ್ರ ಅವರು ಭ್ರಷ್ಟಾಚಾರ ನಿಮರ್ೂಲನೆಯಲ್ಲಿ ಅಂಚೆ ಇಲಾಖೆಯ ಪಾತ್ರದ ಕುರಿತು ಮಾತನಾಡಿ, ಅಂಚೆ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ನಿದರ್ಾಕ್ಷಿಣ್ಯವಾಗಿ ಇಲಾಖಾ ನಿಯಮಾವಳಿನುಸಾರವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು. ದೀಪಾ ಗೋನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.