ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಅಂಡಗಿ

ಲೋಕದರ್ಶನ ವರದಿ

ಕೊಪ್ಪಳ 03: ವಿಕಲಚೇತನರ ಬಗ್ಗೆ ಅನುಕಂಪವನ್ನು ಪಡದೇ ಅವರಿಗೆ ಅವಕಾಶವನ್ನು ಹೆಚ್ಚು ಒದಗಿಸಿಕೊಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಪ್ರಸ್ತುತ ಸಮಾಜದಲ್ಲಿ ಅನೇಕರು ವಿಕಲಚೇತನರ ಬಗ್ಗೆ ಅನುಕಂಪವನ್ನು ವ್ಯಕ್ತಪಡಿಸುತ್ತಿದ್ದು, ಅನುಕಂಪವನ್ನು ವ್ಯಕ್ತ ಪಡಿಸುವ ಬದಲು ಅವರಿಗೆ ಅವಕಾಶವನ್ನು ಹೆಚ್ಚು ಒದಗಿಸಿಕೊಡುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ವಿಕಲಚೇತನರಲ್ಲಿ ಅನೇಕ ವಿಭಿನ್ನವಾದ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಬೇಕು. ವಿಕಲಚೇತನರ ಅನೇಕ ಬೇಡಿಕೆಗಳು ಈಡೇರಿಕೆಯಾಗದೇ ಹಾಗೇ ಉಳಿದಿವೆ.ಅವುಗಳ ಬಗ್ಗೆ ಸಕಾರವು ಶೀಘ್ರವೇ ಗಮನಹರಿಸಿ ಬಗೇಹರಿಸವಂತಹ ಪ್ರಯತ್ನ ಮಾಡಬೇಕು.ವಿಕಲಚೇತನರ ದಿನಾಚರಣೆಗೆ ಮಹತ್ವ ಬರಬೇಕಾದರೇ ಅವರ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಸಾಧ್ಯವಾಗುತ್ತದೆ.ವಿಕಲಚೇತನ ನೌಕರರಿಗೆ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ 3ರಷ್ಟು ಬಡ್ತಿ ನೀಡುವಂತೆ ಸುಪ್ರೀಂಕೋರ್ಟ ಆದೇಶ ನೀಡಿ 3ವರ್ಷ ಕಳೆದರು ಕೂಡಾ ಯಾವುದೇ ಪ್ರಕ್ರೀಯಾಗಿಲ್ಲ ಅಲ್ಲದೇ ಬಡ್ತಿ ಮಿಸಲಾತಿ ಆದೇಶ ಜಾರಿಯಾಗದಿರುವುದರಿಂದ ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವ ಕಾರ್ಯ ನಡೆಯುತ್ತಿದ್ದು,ಈ ಸೌಲಭ್ಯದಿಂದ ವಿಜಕಲಚೇತನ ನೌಕರರು ವಂಚಿತರಾಗುತ್ತಿದ್ದಾರೆ. ಶೀಘ್ರವೇ ಬಡ್ತಿ ಮಿಸಲಾತಿ ಆದೇಶವನ್ನು ಜಾರಿಗೆ ಮಾಡಬೇಕು.ರಿಯಾಯತಿ ದರದಲ್ಲಿ ನೀಡಲಾಗುವ ಬಸ್ಸ್ ಪಾಸು ಸೌಲಭ್ಯವನ್ನು ರಾಜ್ಯಾಧ್ಯಂತಹ ವಿಸ್ತರಣೆ ಮಾಡುವುದರ ಜೊತೆಗೆ ಸಕರ್ಾರಿ ವಿಕಲಚೇತನ ನೌಕರರಿಗೂ ಕೂಡಾ ಯೋಜನೆಯನ್ನು ವಿಸ್ತರಣೆ ಮಾಡಬೇಕು.ವಿಕಲಚೇನರಿಗೆ ಮಿಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಸಬೇಕು.ವಿಕಲಚೇತನ ವಿದ್ಯಾಥರ್ಿಗಳಗೆ ನೀಡಲಾಗುವ ಪ್ರೋತ್ಸಾವ ಧನವನ್ನು ಹೆಚ್ಚು ಮಾಡಬೇಕು.ವಿಕಲಚೇತನ ಮಕ್ಕಳಿಗೆ ಇರುವ ವಿಶೇಷ ಶಾಲೆಗಳನ್ನು ಹೆಚ್ಚು ಪ್ರಾರಂಭ ಮಾಡಬೇಕು. ಸಾಧನೆ ಮಾಡಿದ ವಿಕಲಚೇತನರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಕರ್ಾರ ಮಾಡಬೇಕು ಅಂದಾಗ ಮಾತ್ರ ಅವರು ಇನ್ನೂ ಹೆಚ್ಚಿನ ರೀತಿಯ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ.ಅನೇಕ ವಿಕಲಚೇತನರು ತಮ್ಮ ಅಂಗವಿಕಲತೆಯನ್ನು ಮಟ್ಟಿನಿಂತು ಸಾಧನೆ ಮಾಡಿದ್ದಾರೆ.ಅಂತವರನ್ನು ಮಾದರಿಯಾಗಿ ಮಾಡಿಕೊಂಡು ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದಶರ್ಿ ಶಂಕ್ರಮ್ಮ ಬಂಗಾರಶೆಟ್ಟರ್, ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ, ಶಿಕ್ಷಕರಾದ ನಾಗಪ್ಪ ನರಿ, ಆಬೀದ್ ಹುಸೇನ ಅತ್ತಾರ, ಗುರುರಾಜ ಕಟ್ಟಿ, ಶ್ರೀನಿವಾಸರಾವ ಕುಲಕರ್ಣಿ  ಸುನಂದಾಬಾಯಿ, ಜಯಶ್ರೀ ದೇಸಾಯಿ, ಭಾರತಿ ಕೊಡ್ಲಿ, ಗಂಗಮ್ಮ ತೋಟದ, ಮೋಹಿನಪಾಷಾಬೀ, ರತ್ನಾ, ದಿವ್ಯ. ಬಿ.ಎಂ.ಗೌಸೀಯಾಬೇಗಂ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನುಬಿ.ಎಡ್.ಪ್ರಶಿಕ್ಷಣಾಥರ್ಿ ಭಾಗ್ಯಜ್ಯೋತಿ ನಿರೂಪಿಸಿದರು. ಬಿ.ಎಡ್ ಪ್ರಶಿಕ್ಷಣಾರ್ಥಿ ಅಕ್ಕಮಹಾದೇವಿ ಸ್ವಾಗತಿಸಿ, ಪವಿತ್ರ ವಂದಿಸಿದರು.