ಬಾಲಕಿಯರು ವಸತಿ ನಿಲಯದ ಸದುಪಯೋಗ ಪಡೆದುಕೊಳ್ಳಿ: ಶಾಸಕ ರಾಜುಗೌಡ

ಬಾಲಕಿಯರು ವಸತಿ ನಿಲಯದ ಸದುಪಯೋಗ ಪಡೆದುಕೊಳ್ಳಿ: ಶಾಸಕ ರಾಜುಗೌಡ   Girls take advantage of hostels: MLA Rajugowda

ಬಾಲಕಿಯರು ವಸತಿ ನಿಲಯದ ಸದುಪಯೋಗ ಪಡೆದುಕೊಳ್ಳಿ: ಶಾಸಕ ರಾಜುಗೌಡ   

ದೇವರಹಿಪ್ಪರಗಿ 23: ವಿದ್ಯಾರ್ಥಿನಿಯರ ಗುಣಮಟ್ಟದ ಶಿಕ್ಷಣದ ಕಾರಣಕ್ಕಾಗಿ ಸುಂದರ ಸುಸಜ್ಜಿತ ಶಿಸ್ತಿನಿಂದ ಕುಡಿದ ಕಟ್ಟಡವನ್ನು ಸರಕಾರ ಪೂರೈಸಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.  

ಪಟ್ಟಣದಲ್ಲಿ ಗುರುವಾರದಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ. ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ವಿಜಯಪುರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಂದಗಿ(ಬಿ.ಸಿ.ಡಬ್ಲ್ಯೂ.ಡಿ 2543) ಇಲಾಖೆಯಿಂದ ಸುಮಾರು 243 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಡಿ. ದೇವರಾಜ ಅರಸ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಸಮುದಾಯ ಕುಟುಂಬದ ಮಕ್ಕಳ ಶೈಕ್ಷಣಿಕ ಅಭಿವದ್ಧಿ ನಿಟ್ಟಿನಲ್ಲಿ ಸರ್ಕಾರ ಹಲವಾರು ವಿನೂತನ ಯೋಜನೆಗಳನ್ನು ಜಾರಿ ತಂದಿದೆ. ಈ ರೀತಿಯ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಲು ಮುಂದಾಗಿ ಎಂದರು.  

ವಿದ್ಯಾರ್ಥಿಗಳ ಅನುಕೂಲಕ್ಕಾಗಿಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಮುಖ್ಯಾಧಿಕಾರಿಗಳಿಗೆ ಭೇಟಿ ನೀಡಿ ಪರೀಶೀಲಿಸಲು ಹಾಗೂ ವಸತಿ ನಿಲಯದಲ್ಲಿ ಗ್ರಂಥಾಲಯ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿದರು.  

ಇಲಾಖೆ ಅಧಿಕಾರಿಗಳಾದ ರವೀಂದ್ರ ಬಂಥನಾಳ ಪ್ರಾಸ್ತಾವಿಕ ಮಾತನಾಡಿ,ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡಕ್ಕೆ ಪ.ಪಂ ವತಿಯಿಂದ ಉಚಿತ ಸಿಎ ಸೈಟ್ ನೀಡಲಾಗಿದ್ದು, ಶಾಸಕರಿಂದ ಉದ್ಘಾಟನೆಯಾಗಿದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.  

ಪ.ಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ, ಪ್ರಕಾಶ ಮಲ್ಹಾರಿ ಅವರು ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ಶಾಸಕರ ಸಹಕಾರ ಅಗತ್ಯ ಎಂದರು.  

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಿಗಾರ, ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹಮದ ಪಟೇಲ, ಅಭಿಯಂತ್ರರಾದ ಬಸವರಾಜ, ಗುತ್ತಿಗೆದಾರ ಖಂಡೆರಾವ್ ಪುಲಸೆ,ಪ.ಪಂ ಅಧ್ಯಕ್ಷರ ಪ್ರತಿನಿಧಿಯಾದ ಬಸವರಾಜ ದೇವಣಗಾಂವ,ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಕಾಸಪ್ಪ ಜಮಾದಾರ, ಸಿಂಧೂರ ಡಾಲೇರ, ಮುಖಂಡರುಗಳಾದ ಸೋಮು ದೇವೂರ, ವಿನೋದ ಚವ್ಹಾಣ, ಮುನೀರ್ ಅಹ್ಮದ್ ಮಳಖೇಡ, ವೀರೇಶ ಕುದರಿ, ನಿಲಯ ಪಾಲಕರುಗಳಾದ ನಂದಾಜ್ಯೋತಿ ನಾಶಿ, ಸೈಪನ್ ಮುಲ್ಲಾ, ಪ್ರಭಾಕರ ಬಿರಾದಾರ, ಗೀರೀಶ ಕಟಕದೊಂಡ, ನಂದಪ್ಪ ಆನಗೊಂಡ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ವಸತಿ ನಿಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ವಸತಿ ನಿಲಯ ಪಾಲಕ ನಾನಾಗೌಡ ಸಿದ್ದರಡ್ಡಿ ಸ್ವಾಗತಿಸಿ ವಂದಿಸಿದರು. ಕಸಾಪ ಅಧ್ಯಕ್ಷ ಸಿದ್ದು ಮೇಲಿನಮನೆ ಪ್ರಾರ್ಥನೆ ಗೀತೆ ಹಾಡಿ,  

ನಿರೂಪಿಸಿದರು.