ಲೋಕದರ್ಶನವರದಿ
ಕೆಸರಗೋಪ್ಪ: ಇತ್ತೀಚೆಗೆ ವಿಜಯಪುರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲೆಗಳ ಕಬಡ್ಡಿ ಕ್ರೀಡೆ ಯಲ್ಲಿ ಬಾಗಲಕೋಟ ಜಿಲ್ಲಾ ಬಾಲಕಿಯರ ತಂಡವು ಚಿಕ್ಕೋಡಿ ಜಿಲ್ಲಾ ತಂಡದ ಎದುರು ನಡೆದ ಪೈನಲ್ ಹಂತದ ರೋಚಕ ಪಂದ್ಯದಲ್ಲಿ ಸಮಬಲದ ಹೋರಾಟವನ್ನು ನಡೆಸಿ ಒಂದು ಅಂಕದೊಂದಿಗೆ ಜಯವನ್ನು ಸಾಧಿಸಿ ರಾಜ್ಯಮಟ್ಟದಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ.ಇದರಿಂದ ಜಿಲ್ಲೆಗೆ ಹಾಗೂ ಕೆಸರಗೊಪ್ಪ ಗ್ರಾಮಕ್ಕೆ ಸರಕಾರಿ ಪ್ರೌಢ ಶಾಲೆಯ ಬಾಲಕಿಯರು ಕೀತರ್ಿ ತಂದಿದ್ದಾರೆ. ಗ್ರಾಮದ ಕ್ರೀಡಾಭಿಮಾನಿಗಳು ಪಂದ್ಯವನ್ನು ವೀಕ್ಷಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿದರು.
ಎಸ್.ಡಿ.ಎಂ.ಸಿ.ಸರ್ವಸದಸ್ಯರು ಮುಖ್ಯೋಪಾಧ್ಯಾಯ ಮತ್ತು ಸಿಬ್ಬಂದಿ ವರ್ಗದವರು ಹಾಗೂ ತಂಡದ ತರಬೇತುದಾರ ಧರೆಪ್ಪ ಮಾ.ಬ್ಯಾಕೋಡ, ದೈಹಿಕ ಶಿಕ್ಷಕರಾದ ಉದಯ ಮುದಗಲ್, ಹಣಮಂತ ಬ್ಯಾಕೋಡ, ಮಾನಿಂಗ ಮಾದರ, ಅಡವಯ್ಯ ಮಠಪತಿ, ಶಿವಪುತ್ರ ಬ್ಯಾಕೋಡ, ಅಲ್ಲಪ್ಪ ದಡ್ಡಿಮನಿ ಹಾಗೂ ಗ್ರಾಮದ ಹಿರಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಶುಭಹಾರೈಸಿದ್ದಾರೆ