ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಶಣೆ ಸ್ಪರ್ಧಾಕಾರ್ಯಕ್ರಮ

ಲೋಕದರ್ಶನ ವರದಿ

ಕಾಗವಾಡ: ಪಿಪಲ್ ಎಜ್ಯಕೇಶನ್ ಸೊಸ್ಠಟಿ ಉಗಾರ ಖುರ್ದ ಶಿಕ್ಷಣ ಸಂಸ್ಥೆಯ ಪಿಇಎಸ್ ಇಂಡಪೆಂಡೆಂಟ ಪಿಯು ಕಾಲೇಜು ಹಾಗೂ ಬಿಬಿಎ, ಬಿಕಾಂ ಕಾಲೆಜು ಹಾಗೂ ಲಾಯನ್ಸ ಕ್ಲಬ್ ಉಗಾರ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರರಂದು ಪಿಯು ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಶನೆ ಸ್ಪಧರ್ಾಕಾಯರ್ಾಗಾರವನ್ನು ಯಶಸ್ವಿಯಾಗಿ ಚಾಲನೆಗೊಳಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ಬುದ್ಧಿಬಲ, ಆತ್ಮ ಬಲ, ಹಾಗೂ ಮನೋಬಲದಿಂದ ಸಾದನೆಯ ಪಥದಲ್ಲಿ ಸಾಗಬೇಕು. ಪಿಪಲ್ ಎಜ್ಯಕೇಶನ ಸೊಸೈಟಿಯು ಒದಗಿಸುತ್ತಿರುವ ವೇದಿಕೆಯನ್ನು ಈ ದಿಶೆಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಹೊಗಳಿಕೆ ತೆಗಳಿಕೆಗೆ ಕಿವಿಗೋಡದೆ ಧನಾತ್ಮಕದಾರಿಯಲ್ಲಿ ಕ್ರಮಿಸಬೇಕು. ಬೇರೆಯರು ನಮ್ಮ ಬಗ್ಗೆ ಏನು ಹೇಳುತ್ತಿದ್ದಾರೆ. ಅನ್ನೋದುಕಿಂತ ತಾನು ಮಾಡುವಕಾರ್ಯದಲ್ಲಿ ವಿಶ್ವಾಸ ಮುಖ್ಯ ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಉಗಾರ ಲಾಯನ್ಸ ಕ್ಲಬ್ದ ಅಧ್ಯಕ್ಷರಾದ ಶ್ರೀಕಾಂತ ಭಟ್ಟ ಹೇಳಿದರು. 

ಸಂಸ್ಥೆಯ ಮಾರ್ಗದರ್ಶಕರಾದ ಜಿ. ಆರಕಿಲ್ಲೆದಾರ ಆವರು ವಿದ್ಯಾಥರ್ಿಗಳಿಗೆ ಸುವರ್ಣ ಅವಕಾಶಗಳನ್ನು ಒದಗಿಸಿಕೋಡಬೇಕು. ಒಂದು ಆವಕಾಶ ಒಬ್ಬ ಮಹಾನ ವ್ಯಕ್ತಿಯನ್ನು ಹೊರತರಬಲ್ಲದು ಎಂದು ಹೇಳಿದರು. ಸಂಸ್ಥೆಯ ಪ್ರಾಚಾರ್ಯ ರಾಮಚಂದ್ರ ಕಿಲ್ಲೇದಾರ ಅವರು ಅಧ್ಯಕ್ಷೀಯ ಸಮಾರೋಪ ನೆರವೇರಿಸಿದರು. ಸಾಯಂಕಾಲದ ಬಹುಮಾನ ವಿತರಣಾ ಸಮಾರಂಭಕ್ಕೆ ಕುಡಚಿಯ ಉದ್ಯಮಿಗಳಾದ ಮುಸ್ತಕಿ ಬಾಗಶಿರಾಜ ಅವರು ಆಗಮಿಸಿದ್ದು ವಿಶೇಷವಾಗಿತ್ತು. ಪ್ರಜ್ವಲ ಸಮಾಜ ನಿರೂಪಣೆ ಮಾಡಿದರು.