ಲೋಕದರ್ಶನವರದಿ
ರಾಣೇಬೆನ್ನೂರು-ಫೆ.14: ತಾಲೂಕಿನ ಆರೇಮಲ್ಲಾಪೂರ ಗ್ರಾಮದಲ್ಲಿ ಅಂಗವಿಕಲರ ಅನುದಾನದಲ್ಲಿ ಗ್ರಾಪಂ ವತಿಯಿಂದ 14 ನೇ ಹಣಕಾಸು ಯೋಜನೆಯ ಅಡಿಯಲ್ಲಿ ಖರೀದಿಸಲಾದ ಸುಮಾರು 60 ಸ್ಟೀಲ್ ಟಾಕಿಗಳನ್ನು ಶುಕ್ರವಾರ ಅಂಗವಿಕಲರಿಗೆ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಹೊನ್ನವ್ವ ಓಲೇಕಾರ ಟಾಕೀಗಳನ್ನು ವಿತರಿಸಿ ಗ್ರಾಪಂನಿಂದ ಖರೀದಿಸಿ ಈ ವಸ್ತುಗಳನ್ನು ಅಂಗವಿಕಲರಿಗೆ ವಿತರಿಸಲಾಗಿದ್ದು, ಇವುಗಳ ಸದುಪಯೋಗವಾಗಬೇಕು, ಮುಂದಿನ ದಿನಮಾನಗಳಲ್ಲಿ ಅಂಗವಿಕಲರಿಗೆ ವಿಶೇಷ ಯೋಜನೆಗಳಲ್ಲಿ ವಸ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಪರಶುರಾಮ ಮಿಳ್ಳಿ, ಮಾಜಿ ಉಪಾಧ್ಯಕ್ಷ ಕರಿಯಪ್ಪ ಶ್ಯಾಮಣ್ಣನವರ, ಪಿಡಿಓ ಡಿಬಿ ಹರಿಜನ, ಸದಸ್ಯರುಗಳಾದ ಶಿವಕುಮಾರ ಶೆಟ್ಟರ, ಶಾರದಾ ಬೇವಿನಮರದ, ಮಂಜವ್ವ ಮಗ್ಗದ, ವೀರಭದ್ರಯ್ಯ ಸಂದಿಮನಿ, ವಿಜಯ ಮಿಳ್ಳಿ, ಕೃಷ್ಣಾಜಿ ಆರೇರ, ಮಂಜುನಾಥ ಸಂಗನವರ ಸೇರಿದಂತೆ ಗ್ರಾಪಂ ಸದಸ್ಯರುಗಳು, ಸಿಬ್ಬಂದಿಗಳು ಇದ್ದರು.